ಕೆ.ಪಿ. ನಂಜುಂಡಿ ಹೆಸರಲ್ಲಿ ನಕಲಿ ದಾಖಲೆ: 7 ತಿಂಗಳ ಸರ್ಕಾರಿ ಸಂಬಳ ಪಡೆದ ವಂಚಕ
ಬೆಂಗಳೂರು, ಡಿಸೆಂಬರ್ 21: ತಾನು ಪರಿಷತ್ ಸದಸ್ಯ ಕೆ.ಪಿ. ನಂಜುಂಡಿ ಅವರ ಆಪ್ತ ಸಹಾಯಕ ಎಂದು ಹೇಳಿಕೊಂಡು ಅವರ ನಕಲು ಸಹಿ ಮತ್ತು ಲೆಟರ್ ಹೆಡ್ ಬಳಸಿಕೊಂಡು ವಂಚಕನೊಬ್ಬ ಸರ್ಕಾರದಿಂದ ಸಂಬಳ ಪಡೆದುಕೊಂಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
ಕುಣಿಗಲ್ ತಾಲ್ಲೂಕಿನ ಸಂತೆಮಾತೂರಿನ ಎಸ್.ಕೆ. ರವಿಕುಮಾರ್ ಎಂಬುವವರ ವಿರುದ್ಧ ಸ್ವತಃ ಕೆ.ಪಿ. ನಂಜುಂಡಿ ಬುಧವಾರ ದೂರು ನೀಡಿದ್ದಾರೆ. ರವಿಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ವಿಧಾನಸೌಧ ಪೊಲೀಸರು ತಿಳಿಸಿದ್ದಾರೆ.
ನಂಜುಂಡಿ ಅವರ ಆಪ್ತ ಸಹಾಯಕ ಎಂದು ನಕಲಿ ದಾಖಲೆ ಸೃಷ್ಟಿಸಿದ್ದ ರವಿಕುಮಾರ್, ಸರ್ಕಾರದಿಂದ ಏಳು ತಿಂಗಳು ಸಂಬಳವನ್ನು ಸಹ ಪಡೆದುಕೊಂಡಿದ್ದರು. ನಂಜುಂಡಿ ಅವರ ಸಹಿಯನ್ನು ನಕಲು ಮಾಡಿದ್ದ ರವಿಕುಮಾರ್, ಅದನ್ನು ಬಳಸಿಕೊಂಡು ಲೆಟರ್ ಹೆಡ್ ಕೂಡ ಸೃಷ್ಟಿಸಿದ್ದಾನೆ. ನಂತರ ನಂಜುಂಡಿ ಅವರ ಆಪ್ತ ಸಹಾಯಕನನ್ನಾಗಿ ನೇಮಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ (ಡಿಪಿಎಆರ್) ಪತ್ರ ಬರೆದಿದ್ದಾರೆ.

ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೂ ಕೆಲಸ ಮಾಡಿರುವುದಾಗಿ ನಕಲಿ ಹಾಜರಾತಿ ಪತ್ರ ಸೃಷ್ಟಿಸಿದ್ದ ರವಿಕುಮಾರ್ ಬ್ಯಾಂಕ್ ಖಾತೆಗೆ ಏಳು ತಿಂಗಳ ಸಂಬಳವಾಗಿ ಸುಮಾರು 2.1 ಲಕ್ಷ ರೂ. ಹಣವನ್ನು ಅಧಿಕಾರಿಗಳು ವರ್ಗಾಯಿಸಿದ್ದಾರೆ.
ನಂಜುಂಡಿ ಅವರು ಇತ್ತೀಚೆಗಷ್ಟೇ ಮಹಾಂತೇಶ್ ಎಂಬುವವರನ್ನು ತಮ್ಮ ಆಪ್ತ ಸಹಾಯಕರನ್ನಾಗಿ ನೇಮಿಸಿಕೊಂಡಿದ್ದರು. ಮಹಾಂತೇಶ್ ತಮ್ಮ ಗುರುತಿನ ಚೀಟಿಯನ್ನು ಪಡೆದುಕೊಳ್ಳಲು ವಿಕಾಸ ಸೌಧಕ್ಕೆ ತೆರಳಿದ್ದಾಗ, ಈಗಾಗಲೇ ಒಬ್ಬರು ನಂಜುಂಡಿ ಅವರ ಆಪ್ತ ಸಹಾಯಕನೆಂದು ಗುರುತಿನ ಚೀಟಿ ಹಾಗೂ ಪಾಸ್ ಪಡೆದುಕೊಂಡಿದ್ದು, ಸಂಬಳವನ್ನು ಕೂಡ ಪಡೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದರು. ಇದನ್ನು ನಂಜುಂಡಿ ಅವರಿಗೆ ತಿಳಿಸಿದಾಗ ವಂಚಕನ ಕೃತ್ಯ ಬೆಳಕಿಗೆ ಬಂದಿದೆ.
'ರವಿಕುಮಾರ್ ಹೇಗೆ ನನ್ನ ಹೆಸರು ಮತ್ತು ದಾಖಲೆಗಳನ್ನು ನಕಲು ಮಾಡಿ ಸಂಬಳ ಪಡೆದಿದ್ದಾನೋ ನನಗೆ ಗೊತ್ತಿಲ್ಲ. ಒಳಗಿನವರೇ ಕೆಲವರು ಆತನಿಗೆ ಸಹಾಯ ಮಾಡಿರಬಹುದು. ಇದರ ಬಗ್ಗೆ ತನಿಖೆ ನಡೆಸುವಂತೆ ವಿಧಾನಸೌಧ ಪೊಲೀಸರಿಗೆ ಕೋರಿದ್ದೇನೆ. ಆರೋಪಿಯ ಸಿಸಿಟಿವಿ ದೃಶ್ಯ ಮತ್ತು ಫೋಟೊಗಳನ್ನು ಅವರು ಸಂಗ್ರಹಿಸಿದ್ದಾರೆ' ಎಂದು ನಂಜುಂಡಿ ಹೇಳಿದ್ದಾರೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ












Click it and Unblock the Notifications