ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಿಪ್ಪು ಖಡ್ಗ ಹಿಡಿದ ಬಿಜೆಪಿ ನಾಯಕರ ಚಿತ್ರ ಹಂಚಿಕೊಂಡು ಕಾಂಗ್ರೆಸ್ ವಾಗ್ದಾಳಿ

|
Google Oneindia Kannada News

ಬೆಂಗಳೂರು, ಅ.04: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಚಿವ ಆರ್. ಅಶೋಕ್ ಆರೋಪಕ್ಕೆ ಕಾಂಗ್ರೆಸ್ ಭಾರಿ ಆಕ್ರೋಶ ಹೊರಹಾಕಿದ್ದು, ಬಿಜೆಪಿ ನಾಯಕರ ಚಿತ್ರಗಳನ್ನು ಹಂಚಿಕೊಂಡು ವ್ಯಂಗ್ಯವಾಡಿದೆ.

ಭಾರತ ಐಕ್ಯತಾ ಯಾತ್ರೆಯಿಂದ ಕಂಗೆಟ್ಟಿರುವ ಬಿಜೆಪಿ ನಾಯಕರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಾವು ಪ್ರಶ್ನೆ ಮಾಡುತ್ತಲೇ ಇದ್ದೇವೆ. ಆದರೆ, ಬಿಜೆಪಿ ಉತ್ತರಿಸುವ ಧೈರ್ಯ ತೋರಿಸುವುದೇ ಇಲ್ಲ ಎಂದು ಕುಟುಕಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ 'PFI ಭಾಗ್ಯ' ಪೋಸ್ಟರ್ ಬಿಡುಗಡೆ ಮಾಡಿದ ಆರ್ ಅಶೋಕ್ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ 'PFI ಭಾಗ್ಯ' ಪೋಸ್ಟರ್ ಬಿಡುಗಡೆ ಮಾಡಿದ ಆರ್ ಅಶೋಕ್

ಕರ್ನಾಟಕ ಕಾಂಗ್ರೆಸ್‌ನ ಪೇ ಸಿಎಂ ಪೋಸ್ಟರ್ ಅನ್ನು ಅರಗಿಸಿಕೊಳ್ಳಲಾಗದ ಬಿಜೆಪಿ ಸೋಮವಾರ ಮಾಜಿ ಸಿಎಂ ಸಿದ್ದರಾಮಯ್ಯಗೆ ಟಕ್ಕರ್ ನೀಡುವ ಸಲುವಾಗಿ ಸಿದ್ದರಾಮಯ್ಯರ ಪಿಎಫ್ಐ ಭಾಗ್ಯ ಎಂಬ ಪೋಸ್ಟರ್ ಅನ್ನು ಕಂದಾಯ ಸಚಿವ ಆರ್‍‌ ಅಶೋಕ್ ವಿಧಾನಸೌಧದಲ್ಲಿ ಬಿಡುಗಡೆ ಮಾಡಿದ್ದರು. ಸಿದ್ದರಾಮಯ್ಯ ಪಿಎಫ್ಐ ಅವರ ಮೇಲಿದ್ದ ಪ್ರಕರಣಗಳನ್ನು ವಾಪಸ್ ಪಡೆದಿದ್ದಾರೆ ಎಂದು ಆರೋಪಿಸಿದ್ದರು. ಜೊತೆಗೆ ಸಿದ್ದರಾಮಯ್ಯ ಟಿಪ್ಪು ಖಡ್ಗ ಹಿಡಿದ ಚಿತ್ರವನ್ನು ಪೋಸ್ಟರ್ ಒಳಗಡೆ ಹಾಕಿಲಾಗಿತ್ತು.

ಟಿಪ್ಪು ಖಡ್ಗ ಹಿಡಿದ ಅಶೋಕ್ ಚಿತ್ರ ಹಂಚಿಕೊಂಡ ಕಾಂಗ್ರೆಸ್

ಟಿಪ್ಪು ಖಡ್ಗ ಹಿಡಿದ ಅಶೋಕ್ ಚಿತ್ರ ಹಂಚಿಕೊಂಡ ಕಾಂಗ್ರೆಸ್

ಸಚಿವ ಆರ್.ಅಶೋಕ್ ಖಡ್ಗ ಹಿಡಿದಿರುವ ಚಿತ್ರವನ್ನು ಹಂಚಿಕೊಂಡಿರುವ ಕಾಂಗ್ರೆಸ್, "ಭಾರತ ಐಕ್ಯತಾ ಯಾತ್ರೆಯಿಂದ ಬಿಜೆಪಿಯ ಬುಡ ಅಲ್ಲಾಡುತ್ತಿದೆ, ಭಯ, ಹತಾಶೆಯಿಂದ ಕಂಗೆಟ್ಟಿದೆ ಎಂಬುದು ಆರ್. ಅಶೋಕ್ ಅವರ ಪತ್ರಿಕಾಗೋಷ್ಟಿಯೇ ಸಾಕ್ಷಿ!" ಎಂದಿದೆ.

"ಆರ್.ಅಶೋಕ್ ಅವರೇ, ಈ ಚಿತ್ರವಿರುವ ಪೋಸ್ಟರ್ ಯಾವಾಗ ಬಿಡುಗಡೆ ಮಾಡ್ತೀರಿ..?" ಎಂದು ವ್ಯಂಗ್ಯವಾಡಿದೆ.

ಜೊತೆಗೆ ಮಾನ್ಯ ಆರ್.ಅಶೋಕ್ ಅವರೇ ಯಡಿಯೂರಪ್ಪನವರು ಟಿಪ್ಪು ಖಡ್ಗ ಹಿಡಿದ ಈ ಫೋಟೋವನ್ನು ಯಾವಾಗ ಬಿಡುಗಡೆ ಮಾಡುವಿರಿ?" ಎಂದೂ ಪ್ರಶ್ನೆ ಮಾಡಿದೆ.

ಬಿಜೆಪಿ ಉತ್ತರಿಸುವ ಧೈರ್ಯ ತೋರುವುದೇ ಇಲ್ಲ; ಕಾಂಗ್ರೆಸ್

ಬಿಜೆಪಿ ಉತ್ತರಿಸುವ ಧೈರ್ಯ ತೋರುವುದೇ ಇಲ್ಲ; ಕಾಂಗ್ರೆಸ್

ಮುಂದುವರಿದು, ಬಿಜೆಪಿ ನಾಯಕರಾದ ಜಗದೀಶ್ ಶೆಟ್ಟರ್, ಬಿ.ಎಸ್.ಯಡಿಯೂರಪ್ಪ, ಶ್ರೀರಾಮುಲು ಸೇರಿದಂತೆ ಹಲವು ನಾಯಕರು ಟಿಪ್ಪು ವಷ ಧರಿಸಿ, ಖಡ್ಗ ಹಿಡಿದಿರುವ ಫೋಟೋ ಕೊಲಾಜ್ ಟ್ವೀಟ್ ಮಾಡಿದೆ.

"ನಾವು ಕೇಳುತ್ತಲೇ ಇದ್ದೇವೆ, ಆದರೆ, ಬಿಜೆಪಿ ಉತ್ತರಿಸುವ ಧೈರ್ಯ ತೋರುವುದೇ ಇಲ್ಲ, ಕರ್ನಾಟಕ ಬಿಜೆಪಿಗೆ ದಮ್ಮು ತಾಕತ್ತು ಇದ್ದರೆ ಉತ್ತರಿಸಲಿ,

*ಬಿಜೆಪಿಗರು ಟಿಪ್ಪು ವೇಷ ಧರಿಸಿ ಪೋಸ್ ಕೊಟ್ಟಿದ್ದೇಕೆ?

* ಟಿಪ್ಪುವನ್ನು ಹೊಗಳಿ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ಪುಸ್ತಕ ಹೊರತಂದಿದ್ದೇಕೆ?

* ರಾಷ್ಟ್ರಪತಿ ಟಿಪ್ಪು ಹೋಗಳಿದ್ದೇಕೆ? ಎಂದು ಪ್ರಶ್ನಿಸಿದೆ.

ಕಂದಾಯ ಭವನ 'ಸಂದಾಯ ಭವನ'ವಾಗಿದೆ; ಆರೋಪ

ಕಂದಾಯ ಭವನ 'ಸಂದಾಯ ಭವನ'ವಾಗಿದೆ; ಆರೋಪ

ಮುಂದುವರೆದು "ಲಂಚ ಲಂಚ ಲಂಚ...40% ಸರ್ಕಾರದಲ್ಲಿ ಎಲ್ಲೆಲ್ಲೂ ಲಂಚದ ಹಾವಳಿ. ಭ್ರಷ್ಟಾಚಾರದ ಮಹಾಪೋಷಕ ಕರ್ನಾಟಕ ಬಿಜೆಪಿ ಆಡಳಿತದಲ್ಲಿ ಅಧಿಕಾರಿಗಳಿಗೆ ಯಾವ ಭಯವೂ ಇಲ್ಲದೆ ಜನಸಾಮಾನ್ಯರ ಪ್ರಾಣ ಹಿಂಡುತ್ತಿದ್ದಾರೆ" ಎಂದು ಕಿಡಿಕಾರಿದೆ.

"ಕಂದಾಯ ಭವನವು 'ಸಂದಾಯ ಭವನ'ವಾಗಿರುವುದು ಬಿಜೆಪಿಯ ಸಾಧನೆಗಳಲ್ಲೊಂದು! ಪೇ ಸಿಎಂ ಆಡಳಿತದಲ್ಲಿ ಹುಟ್ಟು, ಸಾವಿಗೂ ಲಂಚ ಕೊಡುವಂತಾಗಿದೆ" ಎಂದು ಕಾಂಗ್ರೆಸ್ ಆರೋಪಿಸಿದೆ.

ಬಿಜೆಪಿ ರಾಜ್ಯದ ಕ್ಷಮೆ ಕೇಳಬೇಕು; ಕಾಂಗ್ರೆಸ್ ಆಗ್ರಹ

ಬಿಜೆಪಿ ರಾಜ್ಯದ ಕ್ಷಮೆ ಕೇಳಬೇಕು; ಕಾಂಗ್ರೆಸ್ ಆಗ್ರಹ

ಪಾಪಿ ಬಿಜೆಪಿಯ ಸುಳ್ಳುಗಳು ಅವರದ್ದೇ ಆಡಳಿತದಲ್ಲಿರುವ ಸಿಬಿಐನಿಂದ ಬೆತ್ತಲಾಗುತ್ತಲೇ ಇವೆ ಎಂದು ಹೇಳಿರುವ ಕಾಂಗ್ರೆಸ್ ಹಲವು ಪ್ರಕರಣಗಳನ್ನು ಬೊಟ್ಟು ಮಾಡಿ ತೋರಿಸಿದೆ.

*ಡಿ.ಕೆ ರವಿ ಪ್ರಕರಣ - ವೈಯುಕ್ತಿಕ ಕಾರಣಗಳಿಗೆ ಆತ್ಮಹತ್ಯೆ

* ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ - ಸರ್ಕಾರಕ್ಕೆ ಸಂಬಂಧವಿಲ್ಲ

* ಪರೇಶ್ ಮೇಸ್ತಾ ಪ್ರಕರಣ - ಸಹಜ ಸಾವು


ಈ ಪ್ರಕರಣಗಳಲ್ಲಿ ಸುಳ್ಳು ಹೇಳಿದ್ದ ಕರ್ನಾಟಕ ಬಿಜೆಪಿ ರಾಜ್ಯದ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಇನ್ನು, "PFI ಸಂಘಟನೆಯ ಮಹಾಪೋಷಕ ಬಿಜೆಪಿ ಎಂದು ಸ್ವತಃ ಬಿಜೆಪಿ ನಾಯಕ ಸತ್ಯಜಿತ್ ಸುರತ್ಕಲ್ ಆರೋಪಿಸಿದ್ದರು. ಕಾಂಗ್ರೆಸ್ ಮತಗಳನ್ನು ವಿಭಜಿಸಲು ಬಿಜೆಪಿಯೇ PFI, SDPI ಗಳನ್ನು ಸಾಕುತ್ತಿದೆ ಎಂದು ಮುತಾಲಿಕ್ ಆರೋಪಿಸಿದ್ದರು. ಈ ಬಗ್ಗೆಯೂ ತನಿಖೆಯಾಗಬೇಕು, NIA ಬಿಜೆಪಿ ಕಛೇರಿಯನ್ನೂ ಶೋಧಿಸಬೇಕು. BJP, PFI ನೆಂಟಸ್ತಿಕೆ ಹೊರಬರಬೇಕು" ಎಂದು ಕಾಂಗ್ರೆಸ್ ಒತ್ತಾಯಿಸಿದೆ.

English summary
Congress slams karnataka BJP over PFI Bhagya Poster by Minister R Ashok On Opposition Leader Siddaramaiah. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X