• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪೊಲೀಸರ ಮೇಲಿನ ಹಲ್ಲೆ ಆಸ್ತಿಪಾಸ್ತಿ ಹಾನಿಗೆ ಕಾಂಗ್ರೆಸ್ ಕ್ಷಮೆ ಕೇಳಬೇಕು: ರವಿಕುಮಾರ್

|

ಬೆಂಗಳೂರು, ಜನವರಿ 01: ಅಲಿಘಡ ವಿಶ್ವವಿದ್ಯಾಲಯ, ಮಂಗಳೂರು ಗಲಾಟೆ ಸೇರಿ ಹಲವು ರಾಜ್ಯಗಳಲ್ಲಿ ಪ್ರತಿಭಟನೆಯಾಗಲು ಕಾಂಗ್ರೆಸ್ ನಿರ್ಮಿಸಿದ ದಂಗೆಯೇ ಕಾರಣ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಆಗ್ರಹಿಸಿದ್ದಾರೆ..

ಅವರು ಸುಮ್ಮನಿದ್ದಿದ್ದರೆ ಅನಾಹುತಗಳೇ ಆಗುತ್ತಿರಲಿಲ್ಲ, ಪೊಲೀಸರ ಮೇಲೆ ಹಲ್ಲೆ ಹಾಗು ಆಸ್ತಿಪಾಸ್ತಿ ನಷ್ಟಕ್ಕೆ ಕಾಂಗ್ರೆಸ್ ಕಾರಣವಾಗಿದ್ದು ಇದಕ್ಕೆ ಕಾಂಗ್ರೆಸ್ ಕ್ಷಮೆ ಯಾಚನೆ ಮಾಡಬೇಕು ರವಿಕುಮಾರ್ ಒತ್ತಾಯಿಸಿದ್ದಾರೆ.

ಪೌರತ್ವ ತಿದ್ದುಪಡಿ ಹೋರಾಟ; ಅಸ್ಸಾಂ ಪ್ರವಾಸೋದ್ಯಮಕ್ಕೆ ನಷ್ಟ

ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪೌರತ್ವ ಕಾಯ್ದೆಯನ್ನು ಬಿಜೆಪಿ ತಂದಿಲ್ಲ, ಜವಹರಲಾಲ್ ನೆಹರೂ ತಂದಿದ್ದು. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಮೊದಲ ಬಾರಿ ತಿದ್ದುಪಡಿ ಮಾಡಿದ್ದರು, ಒಟ್ಟು ನಾಲ್ಕು ಬಾರಿ ತಿದ್ದುಪಡಿಯಾಗಿದೆ ಎಂದರು.

 ರಾಜೀವ್ ಗಾಂಧಿ ಸರ್ಕಾರ ತಿದ್ದುಪಡಿ ಮಾಡಿದ ಕಾಯ್ದೆ

ರಾಜೀವ್ ಗಾಂಧಿ ಸರ್ಕಾರ ತಿದ್ದುಪಡಿ ಮಾಡಿದ ಕಾಯ್ದೆ

ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ವೇಳೆ ಮನಮೋಹನ್ ಸಿಂಗ್ ಅವರು ಬಾಂಗ್ಲಾ ಅಲ್ಪಸಂಖ್ಯಾತರಿರಗೆ ಪೌರತ್ವ ಕೊಡುವ ಬೇಡಿಕೆ ಇರಿಸಿದ್ದರು. ಈ ಕಾಯ್ದೆಯ ಸಿಂಹಪಾಲು ಕೆಲಸ ಕಾಂಗ್ರೆಸ್ ಸರ್ಕಾರವೇ ಮಾಡಿದೆ.

1985 ರಲ್ಲಿ ರಾಜೀವ್ ಗಾಂಧಿ ತಂದಿದ್ದ ವಿಧೇಯಕಕ್ಕೆ ನೀವೇ ವಿರೋಧ ಮಾಡುತ್ತಿದ್ದೀರಿ, ನಿಮ್ಮ ಪತಿ ನಿರ್ಧಾರ ನೀವೇ ವಿರೋಧಿಸುತ್ತಿದ್ದೀರಲ್ಲವೇ ಎಂದು ಸೋನಿಯಾ ಗಾಂಧಿ ಅವರನ್ನು ಪ್ರಶ್ನಿಸಿದರು.

ನೆರೆ ದೇಶದ ಅಲ್ಪಸಂಖ್ಯಾತರಿಗೆ ಪೌರತ್ವ

ನೆರೆ ದೇಶದ ಅಲ್ಪಸಂಖ್ಯಾತರಿಗೆ ಪೌರತ್ವ

ದಲೈಲಾಮ, ಸೋನಿಯಾ, ಅದ್ನಾನ್ ಸ್ವಾಮಿಗೆ ಪೌರತ್ವ ಸಿಕ್ಕಿದೆ, ಆದರೂ ಇವರ ಧೋರಣೆ ನೋಡಿದರೆ ಬಾಗಿಲು ಹಾಕಿಕೊಂಡು ನಗಬೇಕು ಎನ್ನುವಂತಾಗಿದೆ, ಯಾರು ಬೇಕಾದರೂ ಪೌರತ್ವಕ್ಕೆ ಅರ್ಜಿ ಸಲ್ಲಿಸಿ ಪಡೆಯಬಹುದು‌ ಎಂದರು.

ಧರ್ಮದ ಆಧಾರದ ಮೇಲೆ ಪೌರತ್ವ ಕೊಡಬೇಡಿ ಎನ್ನುವ ಕಾಂಗ್ರೆಸ್, ದೇಶ ವಿಭಜನೆ ಯಾವ ಆಧಾರದಲ್ಲಿ ಆಯಿತು ಎಂದು ಹೇಳಬೇಕು. ಕ್ರಿಶ್ಚಿಯನ್, ಪಾರ್ಸಿ, ಜೈನ್, ಬೌದ್ಧರಿಗೆ ಪೌರತ್ವ ನೀಡುತ್ತಿದ್ದೇವೆ. ನಿಯಮಾವಳಿಯಂತೆ ಮುಸ್ಲಿಂ ಸಮುದಾಯಕ್ಕೂ ಅವಕಾಶವಿದೆ ಇದು ನೆರೆ ದೇಶದ ಅಲ್ಪಸಂಖ್ಯಾತರಿಗೆ ಮಾತ್ರ ಎಂದು ಸ್ಪಷ್ಟಪಡಿಸಿದರು.

ಜನ ಜಾಗೃತಿ ಅಭಿಯಾನ ಪ್ರಾರಂಭ

ಜನ ಜಾಗೃತಿ ಅಭಿಯಾನ ಪ್ರಾರಂಭ

ಕಾಂಗ್ರೆಸ್ ಭಯ ಹುಟ್ಟಿಸಿದ ಕಾರಣಕ್ಕೆ ಮುಸಲ್ಮಾನರು ಬೀದಿಗಿಳಿದಿರು. ಕಾಂಗ್ರೆಸ್ ನದ್ದು ಯೂಸ್ ಅಂಡ್ ಥ್ರೋ ಪಾಲಿಸಿ, ಅಲ್ಪಸಂಖ್ಯಾತರನ್ನು ಬಳಸಿಕೊಂಡು ನಂತರ ಕೈ ಬಿಡಲಿದೆ. ಇದು ಈಗ ಮುಸಲ್ಮಾನರಿಗೂ ಅರ್ಥವಾಗುತ್ತಿದೆ ಎಂದರು.

ಇಂದಿನಿಂದ ಜನವರಿ 20 ರವರೆಗೆ ರಾಜ್ಯದಲ್ಲಿ ಅಭಿಯಾನದ ಮೂಲಕ ಜಾಗೃತಿ ಮೂಡಿಸಲಿದ್ದೇವೆ, 300 ಮಂಡಲ ಕೇಂದ್ರ, 30 ಜಿಲ್ಲೆಗಳಲ್ಲಿ ಕಾರ್ಯಾಗಾರ ನಡೆಸಲಿದೆ. 5 ಕಡೆ ಬೃಹತ್ ಸಮಾವೇಶ ಮಾಡಲಿದ್ದೇವೆ.

ಅಂಬೇಡ್ಕರ್ ವಿಚಾರಗಳ ವಿರೋಧಿ ಕಾಂಗ್ರೆಸ್

ಅಂಬೇಡ್ಕರ್ ವಿಚಾರಗಳ ವಿರೋಧಿ ಕಾಂಗ್ರೆಸ್

ಬಾಂಗ್ಲಾದ ಅಲ್ಪಸಂಖ್ಯಾತರು ಸಿಂಧನೂರಿನಲ್ಲಿದ್ದಾರೆ ಅಲ್ಲಿಯೂ ಸಮಾವೇಶ ನಡೆಸಲಿದ್ದು 50 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಮನೆ ಮನೆ ಅಭಿಯಾನಕ್ಕೆ ಜನವರಿ 5 ರಂದು ಸಿಎಂ ಚಾಲನೆ ನೀಡಲಿದ್ದಾರೆ ಎಂದರು.

ಇದು ಮಾನವೀಯತೆಯ ಕಾಯ್ದೆ, ಕಾಂಗ್ರೆಸ್ ಅತ್ಯಂತ ಅಮಾನವೀಯವಾಗಿ ಕಾಯ್ದೆಯನ್ನು ವಿರೋಧಿಸುತ್ತಿದೆ. ಕಾಂಗ್ರೆಸ್ ಮಾನವೀಯತೆ ವಿರೋಧಿ, ಸಂವಿಧಾನ ವಿರೋಧಿ, ಅಂಬೇಡ್ಕರ್ ವಿಚಾರಗಳ ವಿರೋಧಿಯಾಗಿದೆ ಎಂದು ಎನ್ ರವಿಕುಮಾರ್ ಟೀಕಿಸಿದರು.

English summary
BJP state general secretary N. Ravikumar has demanded that the Congress should apologize. because Of The Rebillion against the Citizenship amendment Act in several states, including Aligarh University and Mangalore riots.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X