• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಂಗ್ರೆಸ್‌ 'ಉಪಹಾರ ರಾಜಕೀಯ': ಬೆಂಗಳೂರು ಲೋಕಸಭಾ ಕ್ಷೇತ್ರಗಳ ಚರ್ಚೆ

|

ಬೆಂಗಳೂರು, ಫೆಬ್ರವರಿ 25: ಲೋಕಸಭೆ ಚುನಾವಣೆ ಸಮೀಪವಾಗುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಚಟುವಟಿಕೆಗಳು ಗರಿಗೆದರಿವೆ. ಇಂದು ಸಚಿವ ಕೃಷ್ಣಬೈರೇಗೌಡ ಅವರ ಆಯೋಜಿಸಿದ ಉಪಹಾರ ಕೂಟ ನೆಪದಲ್ಲಿ ಕೆಪಿಸಿಸಿ ಮುಖಂಡರು ಸೇರಿದ್ದಾರೆ.

ಕೃಷ್ಣಬೈರೇಗೌಡ ಅವರು ಇಂದು ಕಾಂಗ್ರೆಸ್‌ನ ಸಚಿವರಿಗೆ ಉಪಹಾರ ಕೂಟ ಆಯೋಜಿಸಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರಿಗೂ ಸಹ ಉಪಹಾರ ಕೂಟಕ್ಕೆ ಆಹ್ವಾನ ನೀಡಲಾಗಿತ್ತು.

ಸುಮಲತಾ ಅಂಬರೀಶ್‌ ಪಕ್ಷೇತರವಾಗಿ ಸ್ಪರ್ಧಿಸಿದರೂ ಕಾಂಗ್ರೆಸ್‌ ಬೆಂಬಲ?

ಉಪಹಾರ ಕೂಟದ ನೆಪದಲ್ಲಿ ಬೆಂಗಳೂರು ಲೋಕಸಭಾ ಕ್ಷೇತ್ರಗಳ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದ್ದು, ಅಭ್ಯರ್ಥಿಗಳು ಯಾರಾಗಬೇಕು ಮತ್ತು ಪ್ರಚಾರದ ಹೇಗಿರಬೇಕು ಮತ್ತು ಎದುರಾಳಿ ಬಿಜೆಪಿ ಹಾಕಲಿರುವ ಅಭ್ಯರ್ಥಿಗಳ ಬಗ್ಗೆಯೂ ಚರ್ಚೆ ಮಾಡಲಾಗಿದೆ.

ರಾಮುಲುಗೆ 7 ಕ್ಷೇತ್ರಗಳ ಉಸ್ತುವಾರಿ: ದಲಿತ ಮತ ಸೆಳೆಯಲು ಬಿಜೆಪಿ ತಂತ್ರ

ಅಭ್ಯರ್ಥಿಗಳ ಪರವಾಗಿ ಕೆಲವು ಕಾಂಗ್ರೆಸ್ ಸಚಿವರು ಲಾಭಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ. ಅಲ್ಲದೆ ಸರ್ಕಾರದ ಬಗ್ಗೆ ಅಸಮಾಧಾನಗಳನ್ನು ಸಹ ಸಚಿವರುಗಳು ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರ ಬಳಿ ಮಾತನಾಡಿದ್ದಾರೆ.

English summary
Congress ministers and leaders met for break fast today. Minister Krishna Byre Gowda organized break fast, he invited former CM Siddaramaiah and KPCC president Dinesh Gundu Rao and working president Eshwar Khandre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X