ಸುಧಾಕರ್‌ಗೆ ಕರೆ ಮಾಡಿದ ಸಿದ್ಧರಾಮಯ್ಯ, ಪರಮೇಶ್ವರ್
ಬೆಂಗಳೂರು, ಜೂನ್ 24: ವೈದ್ಯಕೀಯ ಸಚಿವ ಸುಧಾಕರ್‌ಗೆ ಕಾಂಗ್ರೆಸ್ ನಾಯಕರಾದ ಸಿದ್ಧರಾಮಯ್ಯ, ಪರಮೇಶ್ವರ್ ಕರೆ ಮಾಡಿದ್ದಾರೆ. ಸುಧಾಕರ್ ಕುಟುಂಬಕ್ಕೆ ಕೊರೊನಾ ಸೋಂಕು ಹರಡಿದ್ದು, ಅವರಿಗೆ ಕಾಂಗ್ರೆಸ್ ಮುಖಂಡರು ಧೈರ್ಯ ತುಂಬಿದ್ದಾರೆ.
ಈ ಬಗ್ಗೆ ಸಚಿವ ಸುಧಾಕರ್ ಟ್ವೀಟ್ ಮಾಡಿದ್ದು, ''ವಿರೋಧ ಪಕ್ಷದ ನಾಯಕರಾದಂತ ಶ್ರೀ ಸಿದ್ದರಾಮಯ್ಯ ನವರು, ಡಾ ಪರಮೇಶ್ವರ ರವರು ,ಆರ್ ವಿ ದೇಶಪಾಂಡೆ, ಕೆ ಚ್ ಮುನಿಯಪ್ಪ ನವರು, ಹೆಚ್‌ಕೆ ಪಾಟೀಲ್ ರವರು, ರಮೇಶ್ ಕುಮಾರ್‌ರವರು ಹಾಗು ಅನೇಕ ಕಾಂಗ್ರೆಸ್ ನಾಯಕರು ಫೋನ್ ಮೂಲಕ ನನ್ನ ಕುಟುಂಬ ಸದಸ್ಯರ ಯೋಗ ಕ್ಷೇಮವನ್ನು ವಿಚರಿಸಿ ಆತ್ಮಸ್ತೈರ್ಯವನ್ನು ತುಂಬಿದ್ದಾರೆ.'' ಎಂದಿದ್ದಾರೆ.

ಕರೆ ಮಾಡಿ ಧೈರ್ಯದ ಮಾತುಗಳನ್ನು ಆಡಿದ ಕಾಂಗ್ರೆಸ್ ನಾಯಕರಿಗೆ ನಿಮಗೆಲ್ಲ ಸುಧಾಕರ್ ಕೃತಜ್ಞತೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ''ಇದು ನಿಜಕ್ಕೂ ಪರೀಕ್ಷೆಯ ಸಮಯ. ತಾವು ಇದರಲ್ಲಿ ನಿಶ್ಚಿತವಾಗಿ ಗೆದ್ದು ಬರುತ್ತೀರಿ ಎನ್ನುವ ವಿಶ್ವಾಸವಿದೆ. ಅವರೆಲ್ಲರೂ ಬೇಗನೇ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ.'' ಎಂದು ಟ್ವಿಟ್ಟರ್ ಖಾತೆಯ ಮೂಲಕ ತಿಳಿಸಿದ್ದಾರೆ.
ವಿರೋಧ ಪಕ್ಷದ ನಾಯಕರಾದಂತ ಶ್ರೀ ಸಿದ್ದರಾಮಯ್ಯ ನವರು, ಡಾ ಪರಮೇಶ್ವರ ರವರು ,ಆರ್ ವಿ ದೇಶಪಾಂಡೆ,ಕೆ ಚ್ ಮುನಿಯಪ್ಪ ನವರು,hk ಪಾಟೀಲ್ ರವರು,ರಮೇಶಕುಮಾರ್ ರವರು ಹಾಗು ಅನೇಕ ಕಾಂಗ್ರೆಸ್ ನಾಯಕರು ಫೋನ್ ಮೂಲಕ ನನ್ನ ಕುಟುಂಬ ಸದಸ್ಯರ ಯೋಗಕ್ಷೇಮವನ್ನು ವಿಚರಿಸಿ ಆತ್ಮಸ್ಥ್ಯ್ರ್ಯ ವನ್ನು ತುಂಬಿದ್ದಾರೆ. ನಿಮಗೆಲ್ಲ ನನ್ನ ಕೃತಜ್ಞತೆಗಳು. pic.twitter.com/RSZO8PEe8V
— Dr Sudhakar K (@mla_sudhakar) June 24, 2020
ಸುಧಾಕರ್ ಕುಟುಂಬಕ್ಕೆ ಕೊರೊನಾ ಹಬ್ಬಿದ್ದು, ನಿನ್ನೆ ಈ ವಿಷಯವನ್ನು ತಿಳಿಸಿದ್ದರು. ''ನಮ್ಮ ಕುಟುಂಬದ ಕೋವಿಡ್ ಪರೀಕ್ಷಾ ವರದಿ ಬಂದಿದ್ದು ನನ್ನ ಪತ್ನಿ ಹಾಗು ಮಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ. ಅವರಿಬ್ಬರು ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನನ್ನ ಇಬ್ಬರು ಗಂಡುಮಕ್ಕಳು ಮತ್ತು ನನಗೆ ಕೊರೋನಾ ನೆಗೆಟಿವ್ ಬಂದಿದೆ. ನಮ್ಮೆಲ್ಲರ ಒಳಿತಿಗಾಗಿ ಪ್ರಾರ್ಥಿಸಿದ, ಶುಭಕೋರಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ.'' ಎಂದು ಸುಧಾಕರ್ ಸ್ಪಷ್ಟನೆ ನೀಡಿದ್ದರು.












Click it and Unblock the Notifications