ಕಾಂಗ್ರೆಸ್ ಮುಖಂಡ ವಿ ಎಸ್ ಉಗ್ರಪ್ಪಗೆ ಜೀವ ಬೆದರಿಕೆ
ಬೆಂಗಳೂರು, ಮೇ 29: ಕಾಂಗ್ರೆಸ್ ನಾಯಕ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ವಿ ಎಸ್ ಉಗ್ರಪ್ಪ ಅವರಿಗೆ ಅನಾಮಧೇಯ ವ್ಯಕ್ತಿಗಳು ಬೆದರಿಕೆ ಹಾಕಿರುವ ಸಂಗತಿ ಬೆಳಕಿಗೆ ಬಂದಿದೆ.
Recommended Video
ಈ ಕುರಿತು ಶುಕ್ರವಾರ ಬೆಂಗಳೂರು ಪೊಲೀಸ್ ಕಮೀಷನರ್ ಅವರಿಗೆ ಲಿಖಿತ ದೂರು ನೀಡಿರುವ ಉಗ್ರಪ್ಪ, ರಕ್ಷಣೆ ನೀಡುವಂತೆ ಕೇಳಿಕೊಂಡಿದ್ದಾರೆ.
''ಮೇ 29 ರಂದು ಎಚ್ ಎಸ್ ಆರ್ ಲೇಔಟ್‌ನಲ್ಲಿರುವ ನನ್ನ ಮನೆಗೆ ಬೆದರಿಕೆ ಪತ್ರ ಬಂದಿದೆ. ನೀವು ಹಿಂದೂ ಧರ್ಮಕ್ಕೆ ಅವಹೇಳನ ಮಾಡಿದ್ದೀರಾ, ಇನ್ಮುಂದೆ ಹಿಂದೂಗಳ ಬಗ್ಗೆ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರೇ ಯಾವುದೇ ಹಂತಕ್ಕೂ ನಾವು ಹೋಗಲು ಸಿದ್ದರಿದ್ದೇವೆ ಎಂದು ಪತ್ರದಲ್ಲಿ ಅನಾಮಧೇಯ ವ್ಯಕ್ತಿಗಳು ಬೆದರಿಕೆ ನೀಡಿದ್ದಾರೆ'' ಎಂದು ಉಗ್ರಪ್ಪ ತಿಳಿಸಿದ್ದಾರೆ.

''ಸೋನಿಯಾ ಗಾಂಧಿ ಓಲೈಸಲು ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡುತ್ತೀಯಾ, ನೀನು ಹಿಂದೂ ಅಲ್ಲ, ಕ್ರಿಶ್ಚಿಯನ್‌ರಿಗೆ ನೀನು ಹುಟ್ಟಿದ್ದೀಯಾ, ನಿನ್ನ ಕುಟುಂಬದವರೂ ಹಿಂದೂಗಳು ಅಲ್ಲ ಎಂದು ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ'' ಎಂದು ಉಗ್ರಪ್ಪ ಹೇಳಿದ್ದಾರೆ.
ಪತ್ರದ ಮುಖಾಂತ ಪ್ರಾಣ ಬೆದರಿಕೆ ಹಾಕಿರುವ ವ್ಯಕ್ತಿಗಳ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೇ ಕೂಡಲೇ ನನಗೆ ರಕ್ಷಣೆ ನೀಡಬೇಕು ಎಂದು ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ.












Click it and Unblock the Notifications