ಸಿದ್ದರಾಮಯ್ಯ ಸಹ ಆಪರೇಷನ್ ಕಾಂಗ್ರೆಸ್‌ನಿಂದ ಹುಟ್ಟಿದ ಕೂಸು: ಬಿಎಸ್‌ವೈ
ಬೆಂಗಳೂರು, ಜನವರಿ 18: ಸಿದ್ದರಾಮಯ್ಯ ಸಹ ಆಪರೇಷನ್ ಕಾಂಗ್ರೆಸ್‌ಗೆ ಮೂಲಕವೇ ಕಾಂಗ್ರೆಸ್ ಪಕ್ಷ ಸೇರಿದವರು ಎಂಬುದನ್ನು ಅವರು ಮರೆಯಬಾರದು ಎಂದು ಬಿಎಸ್.ಯಡಿಯೂರಪ್ಪ ಅವರು ಹೇಳಿದರು.
ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್ ಕಮಲದ ಬಗ್ಗೆ ಮಾತನಾಡುವ ಕಾಂಗ್ರೆಸ್ ಪಕ್ಷ ಅದರ ಸೃಷ್ಠಿಕರ್ತ ತಾನೇ ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ಶಾಸಕರಿಗೆ ಆಮಿಷ ಒಡ್ಡಿ ಪಕ್ಷಕ್ಕೆ ಎಳೆದುಕೊಳ್ಳುವ ಸಂಪ್ರದಾಯ ಹುಟ್ಟುಹಾಕಿದ್ದೆ ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದ ಯಡಿಯೂರಪ್ಪ. ಪಕ್ಷಾಂತರಕ್ಕೆ ಹೆಸರಾಗಿದ್ದ ಗಯಾ ರಾಮ್ ಘಟನೆಯನ್ನು ಮಾಧ್ಯಮಗಳ ಮುಂದೆ ಹೇಳಿದರು.

ಕಾಂಗ್ರೆಸ್ ಪಕ್ಷವು ಅತೃಪ್ತ ಶಾಸಕರನ್ನು ಕಟ್ಟಿಹಾಕಿ ಶಾಸಕಾಂಗ ಸಭೆ ನಡೆಸುತ್ತಿದೆ. 3:30 ಕ್ಕೆ ಆರಂಭವಾಗಬೇಕಾಗಿದ್ದ ಸಭೆ ಇಷ್ಟು ತಡವಾಗಿ ಆರಂಭವಾಗಲು ಅದೇ ಕಾರಣ. ಬರದವರನ್ನು ಸಹ ಹೆದರಿಸಿ ಸಭೆಗೆ ಕರೆತರಲಾಗುತ್ತಿದೆ ಎಂದು ಅವರು ದೂರಿದರು.












Click it and Unblock the Notifications