‘ಲಿಂಗಾಯತ ನಾಯಕರ ವಿರುದ್ಧ ಲಿಂಗಾಯತ ನಾಯಕರಿಂದಲೇ...’
ಬೆಂಗಳೂರು: ಅತ್ತ ಜಗದೀಶ್ ಶೆಟ್ಟರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೆ, ಇತ್ತ ಬಿಜೆಪಿ ನಾಯಕರ ವಿರುದ್ಧ ಕರ್ನಾಟಕ ಕಾಂಗ್ರೆಸ್ ಟ್ವಿಟ್ಟರ್ ಖಾತೆ ಫುಲ್ ಅಲರ್ಟ್ ಆಗಿದೆ. ಬೆಳಗ್ಗೆಯಿಂದಲೂ ಬ್ಯಾಕ್ ಟು ಬ್ಯಾಕ್ ಟ್ವೀಟ್ ಮಾಡುತ್ತಾ, ಬಿಜೆಪಿಗೆ ವಿರುದ್ಧ ಲಿಂಗಾಯತ ಅಸ್ತ್ರ ಪ್ರಯೋಗಿಸಲಾಗುತ್ತಿದೆ. ಈಗ 'ಲಿಂಗಾಯತ ನಾಯಕರ ವಿರುದ್ಧ ಲಿಂಗಾಯತ ನಾಯಕರಿಂದಲೇ ಮಾತಾಡಿಸುವುದು ಬಿಜೆಪಿಯ ಕುತಂತ್ರದ ಭಾಗ.' ಎಂದು ಆರೋಪಿಸಲಾಗಿದೆ.
'BSYರನ್ನು ಮೊನ್ನೆ ಟಿಕೆಟ್ ಹಂಚಿಕೆಯ ಸಭೆಯಿಂದ ಹೊರಗಿಟ್ಟಿದ್ದ ಬಿಜೆಪಿ ಇಂದು ಏಕಾಏಕಿ ಜಗದೀಶ್ ಶೆಟ್ಟರ್ ಅವರ ವಿರುದ್ಧ ಮಾತನಾಡಿಸಲು ತಂದು ಕೂರಿಸಿದೆ. ಲಿಂಗಾಯತ ನಾಯಕರ ವಿರುದ್ಧ ಲಿಂಗಾಯತ ನಾಯಕರಿಂದಲೇ ಮಾತಾಡಿಸುವುದು ಬಿಜೆಪಿಯ ಕುತಂತ್ರದ ಭಾಗ. ಶೆಟ್ಟರ್ ವಿರುದ್ಧ BSY, BSY ವಿರುದ್ಧ ಯತ್ನಾಳ್, ಸೋಮಣ್ಣ.. ಜೋ-ಸಂ ಆಟ ಬಲು ಚೆನ್ನಾಗಿದೆ!' ಎಂದು ಟ್ವೀಟ್ ಮಾಡಲಾಗಿದೆ. ಈ ಮೂಲಕ ಪ್ರಹ್ಲಾದ್ ಜೋಶಿ, ಬಿ.ಎಲ್. ಸಂತೋಷ್ ವಿರುದ್ಧ ಕಾಂಗ್ರೆಸ್ ನಾಯಕರು ವಾಗ್ದಾಳಿ ಮುಂದುವರಿಸಿದ್ದಾರೆ.

ಬೆಳಗ್ಗೆ ಶೆಟ್ಟರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಹೋದಾಗ ಮೊದಲ ಟ್ವೀಟ್ ಮಾಡಿತ್ತು ಕಾಂಗ್ರೆಸ್, 'ಮೊ-ಶಾ ಜೋಡಿ ಹಾಗೂ ಜೋ-ಸ ಜೋಡಿ ಕೇವಲ @BSYBJP ಅವರನ್ನು ಮಾತ್ರ ಮುಗಿಸಿದೆ ಎಂದುಕೊಂಡಿದ್ದರೆ ಅದು ತಪ್ಪು. ಬಿಜೆಪಿಯಲ್ಲಿನ ಸಂಪೂರ್ಣ ಲಿಂಗಾಯತ ನಾಯಕತ್ವವನ್ನೇ ನಾಶ ಮಾಡುವುದು ಈ ಜೋಡಿಗಳ ಏಕೈಕ ಅಜೆಂಡಾ. BSY, ಸವದಿ, ಶೆಟ್ಟರ್ ಸೇರಿದಂತೆ ನಾಯಕತ್ವ ಹೊಂದಿದವರೆಲ್ಲರನ್ನೂ ಬಿಜೆಪಿ ಎತ್ತಿ ಬಿಸಾಡಿದೆ.' ಎಂದು ಟ್ವೀಟ್ ಮಾಡಲಾಗಿತ್ತು. ಬಳಿಕ 'ಪೇಶ್ವೆ DNA...' ಅಸ್ತ್ರ ಪ್ರಯೋಗಿಸಿ, ಮತ್ತೊಂದು ಟ್ವೀಟ್ ಮಾಡಲಾಗಿತ್ತು.
BSYರನ್ನು ಮೊನ್ನೆ ಟಿಕೆಟ್ ಹಂಚಿಕೆಯ ಸಭೆಯಿಂದ ಹೊರಗಿಟ್ಟಿದ್ದ ಬಿಜೆಪಿ ಇಂದು ಏಕಾಏಕಿ ಜಗದೀಶ್ ಶೆಟ್ಟರ್ ಅವರ ವಿರುದ್ಧ ಮಾತನಾಡಿಸಲು ತಂದು ಕೂರಿಸಿದೆ.
— Karnataka Congress (@INCKarnataka) April 16, 2023
ಲಿಂಗಾಯತ ನಾಯಕರ ವಿರುದ್ಧ ಲಿಂಗಾಯತ ನಾಯಕರಿಂದಲೇ ಮಾತಾಡಿಸುವುದು ಬಿಜೆಪಿಯ ಕುತಂತ್ರದ ಭಾಗ.
ಶೆಟ್ಟರ್ ವಿರುದ್ಧ BSY,
BSY ವಿರುದ್ಧ ಯತ್ನಾಳ್, ಸೋಮಣ್ಣ.
ಜೋ-ಸಂ ಆಟ ಬಲು ಚೆನ್ನಾಗಿದೆ!
'ಪೇಶ್ವೆ DNA...' ಅಸ್ತ್ರ ಬಳಸಿದ್ದ ಕಾಂಗ್ರೆಸ್
ಇಂದು ಬೆಳಗ್ಗೆ ಟ್ವೀಟ್ ವಾರ್ ಆರಂಭಿಸಿದ್ದ ಕಾಂಗ್ರೆಸ್ ನಾಯಕರು, ಬಿಜೆಪಿ ಆಂತರಿಕ ಬೆಳವಣಿಗೆ ಬಗ್ಗೆ ಟ್ವೀಟ್ ಮಾಡಿ, 'ಬಿಜೆಪಿಗೆ ಪೇಶ್ವೆ DNA ಹೊಂದಾಣಿಕೆಯಾಗುತ್ತದೆಯೇ ಹೊರತು ಬಸವಣ್ಣನ DNA ಹೊಂದಾಣಿಕೆಯಾಗುವುದಿಲ್ಲ. ಈ ಪೇಶ್ವೆ DNA ಹೊಂದಿದವರು ಬಸವಣ್ಣನ DNA ಹೊಂದಿದವರನ್ನು ಹೊರದಬ್ಬುತ್ತಿದ್ದಾರೆ. ಬಿಜೆಪಿ ಈಗ ತನ್ನ ಮನುವಾದದ ಸ್ಪಷ್ಟತೆಯ ಹಾದಿಯತ್ತ ಸಾಗುತ್ತಿದೆ.!' ಎಂದು ಟ್ವೀಟ್ ಪೋಸ್ಟ್ ಮಾಡಲಾಗಿತ್ತು. ಇದಾದ ಬಳಿಕ ಮತ್ತೊಂದು ಟ್ವೀಟ್ ಮಾಡಿ ವಾಗ್ದಾಳಿ ಮುಂದುವರಿಸಲಾಗಿದೆ.

ಹಿಂದೂ ಲಿಂಗಾಯತ ಅಸ್ತ್ರ ಪ್ರಯೋಗ!
ಈ ಹಿಂದೆ ಕೂಡ ಕಾಂಗ್ರೆಸ್ ನಾಯಕರು ಹಲವು ಬಾರಿ ಲಿಂಗಾಯತ ಅಸ್ತ್ರ ಪ್ರಯೋಗಿಸಿದ್ದಾರೆ. ಈಗಲೂ ಅದೇ ಅಸ್ತ್ರದ ಮೂಲಕ ಬಿಜೆಪಿ ಹೈಕಮಾಂಡ್ ಮತ್ತು ಬಿಜೆಪಿ ರಾಜ್ಯ ನಾಯಕರಿಗೆ ತಿರುಗೇಟು ನೀಡುತ್ತಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ ಹತ್ತಿರ ಆಗುತ್ತಿದ್ದಂತೆಯೇ ಕಾಂಗ್ರೆಸ್ ನಾಯಕರಿಗೆ ಮತ್ತಷ್ಟು ಅಸ್ತ್ರ ಸಿಗುತ್ತಿದೆ. ಅದ್ರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಇದೇ ವಿಚಾರ ಮುಂದಿಟ್ಟುಕೊಂಡು, ಚುನಾವಣೆ ಎದುರಿಸಲು ಕಾಂಗ್ರೆಸ್ ನಾಯಕರು ಸಜ್ಜಾಗಿದ್ದಾರೆ. ಇದನ್ನು ಟ್ವೀಟ್ ಮೂಲಕ ಸ್ಯಾಂಪಲ್ ಆಗಿ ತೋರಿಸಿದಂತಿದೆ ಕಾಂಗ್ರೆಸ್.
ಬಿಜೆಪಿಗೆ ಪೇಶ್ವೆ DNA ಹೊಂದಾಣಿಕೆಯಾಗುತ್ತದೆಯೇ ಹೊರತು ಬಸವಣ್ಣನ DNA ಹೊಂದಾಣಿಕೆಯಾಗುವುದಿಲ್ಲ.
— Karnataka Congress (@INCKarnataka) April 16, 2023
ಈ ಪೇಶ್ವೆ DNA ಹೊಂದಿದವರು ಬಸವಣ್ಣನ DNA ಹೊಂದಿದವರನ್ನು ಹೊರದಬ್ಬುತ್ತಿದ್ದಾರೆ.
ಬಿಜೆಪಿ ಈಗ ತನ್ನ ಮನುವಾದದ ಸ್ಪಷ್ಟತೆಯ ಹಾದಿಯತ್ತ ಸಾಗುತ್ತಿದೆ.!
ಜಗದೀಶ್ ಶೆಟ್ಟರ್ ಅವರನ್ನ ಕಾಂಗ್ರೆಸ್‌ಗೆ ಕರೆತರಲು ಒಂದು ಕಡೆ ಕರ್ನಾಟಕದ ಕಾಂಗ್ರೆಸ್ ನಾಯಕರು ತೆರೆಮರೆಯ ಪ್ರಯತ್ನ ನಡೆಸುತ್ತಿದ್ದರೆ, ಇನ್ನೊಂದ್ಕಡೆ ಶಾಮನೂರು ಶಿವಶಂಕರಪ್ಪ ಅವರ ನೇತೃತ್ವದಲ್ಲಿ ಮಹತ್ವದ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ. ಜಗದೀಶ್ ಶೆಟ್ಟರ್ ಮತ್ತು ಶಾಮನೂರು ಶಿವಶಂಕರಪ್ಪ ಸಂಬಂಧಿಕರಾಗಿದ್ದು ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಚರ್ಚಿಸಲಾಗುತ್ತಿದೆ. ಅಕಸ್ಮಾತ್ ಎಲ್ಲಾ ಅಂದುಕೊಂಡಂತೆ ನಡೆದರೆ ನಾಳೆ ಸಂಜೆಯ ಒಳಗಾಗಿ ಅಧಿಕೃತವಾಗಿ ಮಾಹಿತಿ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ. ಇದಾದ ನಂತರವಷ್ಟೇ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಫೈನಲ್ ಆಗಲಿದೆ.












Click it and Unblock the Notifications