MEMU Train: ಚಿಕ್ಕಬಳ್ಳಾಪುರ, ಕೋಲಾರಕ್ಕೆ ಮೆಮು ರೈಲು ಸೇವೆ ವಿಸ್ತರಿಸಲು ಮನವಿ

ಚಿಕ್ಕಬಳ್ಳಾಪುರ ಮತ್ತು ಕೋಲಾರದವರೆಗೆ ಮೆಮು ರೈಲು ಸಂಚಾರವನ್ನು ವಿಸ್ತರಿಸಬೇಕು ಎಂದು ಪ್ರಯಾಣಿಕರು ನೈಋತ್ಯ ರೈಲ್ವೆ ಇಲಾಖೆಗೆ ಮನವಿ ಮಾಡಿದ್ದಾರೆ. ರೈಲು ಸೇವೆ ವಿಸ್ತರಣೆ ಮಾಡುವುದರಿಂದ ಈ ಎರಡೂ ಜಿಲ್ಲೆಗಳ ರೈತರು, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಮನವಿ ಮಾಡಲಾಗಿದೆ.

ಈ ಹಿಂದೆ ಕೂಡ ಹಲವು ಬಾರಿ ಈ ಭಾಗದ ಸಾರ್ವಜನಿಕರು ಮತ್ತು ಪ್ರಯಾಣಿಕರು ಮೆಮು (ಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್) ರೈಲು ಸೇವೆ ವಿಸ್ತರಣೆ ಮಾಡಲು ಒತ್ತಾಯಿಸಿದ್ದರು.

Commuters Urges To Extend Service Of MEMU Trains To Chikkaballapur and Kolar

ಸಾರ್ವಜನಿಕ ಸಾರಿಗೆ ಪ್ರಯಾಣಿಕ ಮತ್ತು ಸಿ4ಸಿ ಸಂಸ್ಥಾಪಕಾರ ರಾಜ್‌ಕುಮಾರ್ ದುಗರ್ ಮಾತನಾಡಿ, ಈಗ ಬೆಂಗಳೂರಿನಿಂದ ದೇವನಹಳ್ಳಿಯವರೆಗೆ ಮೆಮು ರೈಲುಗಳು ಸೇವೆ ನೀಡುತ್ತಿವೆ ಇವುಗಳನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರದವರೆಗೆ ವಿಸ್ತರಿಸಲು ಮನವಿ ಮಾಡಲಾಗಿದೆ ಎಂದು ಹೇಳಿರುವುದಾಗಿ ಬೆಂಗಳೂರು ಮಿರರ್ ವರದಿ ಮಾಡಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡುವವರ ಅನುಕೂಲಕ್ಕಾಗಿ ಬೆಂಗಳೂರು ಕೆಎಸ್‌ಆರ್ ರೈಲು ನಿಲ್ದಾಣದಿಂದ ಮೆಮು ರೈಲುಗಳ ಸಂಚಾರ ಆರಂಭಿಸಲಾಗಿತ್ತು. ಪ್ರಯಾಣದ ಅವಧಿ ಕಡಿಮೆ ಮಾಡುವುದರ ಜೊತೆಯಲ್ಲಿ ಕಡಿಮೆ ವೆಚ್ಚದಲ್ಲಿ ಸಂಚರಿಸಲು ಕೂಡ ಅನುಕೂಲವಾಗಿದೆ. ಬೆಂಗಳೂರಿನಿಂದ ದೇವನಹಳ್ಳಿ 30-35 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿತ್ತು, ಪ್ರಯಾಣಿಕರ ಕೊರತೆಯ ಕಾರಣ ಈ ಮೆಮು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಿತ್ತು, ಈಗ ಮತ್ತೆ ಸಂಚಾರ ಆರಂಭಿಸಿದೆ.

ಸೇವೆ ವಿಸ್ತರಿಸಿದರೆ ಸವಾರರ ಸಂಖ್ಯೆ ಹೆಚ್ಚಳ

ಬೆಂಗಳೂರು-ದೇವನಹಳ್ಳಿ ನಡುವಿನ ಮಾರ್ಗದಲ್ಲಿ ಪ್ರಯಾಣಿಕ ಕೊರತೆ ಇದೆ, ಆದರೆ ಈ ರೈಲುಗಳ ಸೇವೆಯನ್ನು ಚಿಕ್ಕಬಳ್ಳಾಪುರ, ಕೋಲಾರದವರೆಗೆ ವಿಸ್ತರಿಸಿದರೆ ಅಧಿಕ ಮಂದಿ ಪ್ರಯಾಣ ಮಾಡಲಿದ್ದು, ನೈಋತ್ಯ ರೈಲ್ವೆಗೂ ಲಾಭವಾಗಲಿದೆ ಎಂದು ರಾಜ್‌ಕುಮಾರ್ ದುಗರ್ ಹೇಳಿದ್ದಾರೆ.

ಮೆಮು ರೈಲುಗಳ ಸೇವೆ ಇಲ್ಲದ ಕಾರಣ ಚಿಕ್ಕಬಳ್ಳಾಪುರದ ಸಾವಿರಾರು ರೈತರು, ವಿದ್ಯಾರ್ಥಿಗಳು, ಉದ್ಯೋಗಿಗಳು ಇತರೆ ಸಾರಿಗೆಯನ್ನು ಅವಲಂಬಿಸಿದ್ದಾರೆ. ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರ ಕೇವಲ 20 ಕಿಮೀ ದೂರದಲ್ಲಿದೆ, ಮೂಲಸೌಕರ್ಯ ಕೂಡ ಪೂರ್ಣಗೊಂಡಿದ್ದು ಸೇವೆ ವಿಸ್ತರಣೆ ಮಾಡಲು ಅನುಕೂಲಕರವಾಗಿದೆ ಎಂದು ಹೇಳಿದ್ದಾರೆ.

"ದೇವನಹಳ್ಳಿಯಲ್ಲಿ ಮೆಮು ರೈಲುಗಳನ್ನು ಹಿಂತಿರುಗಿಸಲಾಗುತ್ತಿದೆ. ಸಾವಿರಾರು ರೈತರು, ವಿದ್ಯಾರ್ಥಿಗಳು ಮತ್ತು ಇತರರಿಗೆ ಪ್ರಯೋಜನವಾಗುವುದರಿಂದ ಅವುಗಳನ್ನು ಕನಿಷ್ಠ ಚಿಕ್ಕಬಳ್ಳಾಪುರದವರೆಗೆ ವಿಸ್ತರಿಸಬೇಕು," ಪ್ರಯಾಣಿಕರ ಗುಂಪು ಒತ್ತಾಯ ಮಾಡಿದೆ. ಕ್ಕಬಳ್ಳಾಪುರದವರೆಗೆ ವಿದ್ಯುದೀಕರಣ ಪ್ರಕ್ರಿಯೆ ಪೂರ್ಣಗೊಂಡಿರುವುದರಿಂದ ಈಗ ಮಾರ್ಗವನ್ನು ವಿಸ್ತರಿಸಬೇಕು ಎಂದು ಇತರ ತಜ್ಞರು ತಿಳಿಸಿದ್ದಾರೆ.

ಪ್ರಯಾಣಿಕರಿಲ್ಲದೆ ಸಂಚರಿಸುತ್ತಿರುವ ಮೆಮು

ಸಾರಿಗೆ ತಜ್ಞ ಸಂಜೀವ್ ದ್ಯಾಮಣ್ಣನವರ್ ಮಾತನಾಡಿ, " ಮೆಮು ರೈಲುಗಳ ಸೇವೆಯನ್ನು ವಿಸ್ತರಿಸಬೇಕು ಮತ್ತು ಒಟ್ಟು ಪ್ರಯಾಣದ ಸಮಯವನ್ನು ಹೆಚ್ಚಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ ರಸ್ತೆ ಸಂಚಾರ ಗಣನೀಯವಾಗಿ ಹೆಚ್ಚಿದೆ. ರೈಲ್ವೆಯು ಪ್ರಸ್ತುತ ಆದಾಯದ ಅಂಶವನ್ನು ಪರಿಗಣಿಸಬಾರದು ಮತ್ತು ಪ್ರಯಾಣಿಕರು ಮೆಮು ರೈಲುಗಳಲ್ಲಿ ಸಂಚಾರ ಮಾಡಲು ಅದಕ್ಕೆ ಹೊಂದಿಕೊಳ್ಳು ಸಮಯ ಬೇಕಾಗುವುದರಿಂದ ಕನಿಷ್ಠ 1 ವರ್ಷದವರೆಗೆ ಮೆಮು ರೈಲುಗಳು ಸಂಚರಿಸಲು ಅವಕಾಶ ನೀಡಬೇಕು, ಟಿಕೆಟ್ ದರ ಕಡಿಮೆ ಇರುವುದರಿಂದ ವಿಧ್ಯಾರ್ಥಿಗಳು, ರೈತರು, ಬಡ, ಮಧ್ಯಮ ವರ್ಗದವರಿಗೆ ಹೆಚ್ಚಿನ ಅನುಕೂಲವಾಗಲಿದೆ" ಎಂದು ಹೇಳಿದರು.
ಡ ಹಿನ್ನೆಲೆಯಿಂದ ಬಂದವರಿಗೆ ಇದು ಹೆಚ್ಚು ಉಪಯುಕ್ತವಾಗಿದೆ.

ಮೆಮು ರೈಲು ಖಾಲಿಯಾಗಿ ಓಡುತ್ತಿರುವ ವೀಡಿಯೊ ಹಂಚಿಕೊಂಡಿರುವ ಈ ಮಾರ್ಗದಲ್ಲಿ ಆಗಾಗ್ಗೆ ಪ್ರಯಾಣಿಸುವ ಟ್ವಿಟರ್‌ ಬಳಕೆದಾರರು, "ಈ ರೀತಿ ಖಾಲಿ ಓಡುವ ಬದಲು, ದಯವಿಟ್ಟು ಚಿಕ್ಕಬಳ್ಳಾಪುರ ಅಥವಾ ಕೋಲಾರಕ್ಕೆ ವಿಸ್ತರಿಸಿ. ಇದು ಉಪಯುಕ್ತವಾಗಿರುತ್ತದೆ. ಈಗ ಮೆಮು ರೈಲಿನಲ್ಲಿ ಕೇವಲ 10 ಪ್ರಯಾಣಿಕರಿದ್ದಾರೆ." ಎಂದು ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+