• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಲ್ಲಿ ಮೊದಲ ಡಬ್ಬಲ್ ಡೆಕ್ಕರ್ ಮೇಲ್ಸೇತುವೆ, ಹೇಗಿರುತ್ತೆ?

|

ಬೆಂಗಳೂರು, ಮಾರ್ಚ್ 4: ನಗರದಲ್ಲಿ ಮೊದಲ ಡಬ್ಬಲ್ ಡೆಕ್ಕರ್ ಮೇಲ್ಸೇತುವೆ ಕಾಮಗಾರಿ ಶೀಘ್ರ ಆರಂಭವಾಗಲಿದೆ.

ರಸ್ತೆ ಹಾಗೂ ರೈಲು ಸೇವೆ ಎರಡೂ ಒಂದೆಡೆ ಇರುವ ಮೇಲ್ಸೇತುವೆ ಇದಾಗಿದೆ. ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ ವರೆಗೆ ಡಬ್ಬಲ್ ಡೆಕ್ಕರ್ ಮೇಲ್ಸೇತುವೆ ನಿರ್ಮಾಣವಾಗಲಿದೆ.

ಹೆಬ್ಬಾಳದ ಮೂಲಕವೇ ಕೆಂಪೇಗೌಡ ಏರ್‌ಪೋರ್ಟ್‌ಗೆ ನಮ್ಮ ಮೆಟ್ರೋ

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು ಭಾನುವಾರ ಬಿಡ್ ಕರೆದಿದ್ದು ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು. ಜೆಸಿ ನಗರ ಹಾಗೂ ಶಾಂತಿನಗರ ಬಸ್ ನಿಲ್ದಾಣ ಮಾರ್ಗದಲ್ಲಿ ಡಬ್ಬಲ್ ಡೆಕ್ಕರ್ ಕಾರಿಡಾರ್ ನಿರ್ಮಿಸಲಾಗುತ್ತಿದೆ.

ಕ್ವೀನ್ಸ್‌ ರಸ್ತೆ, ಮಿನ್ಸ್ ಸ್ಕ್ವೇರ್, ಕಸ್ತೂರ ಬಾ ರಸ್ತೆ, ವಿಟ್ಟಲ್ ಮಲ್ಯ ರಸ್ತೆ, ರಿಚ್‌ಮಂಡ್ ವೃತ್ತ, ಕೆಎಚ್ ರಸ್ತೆ ಈ ಮಾರ್ಗದಲ್ಲಿ ಡಬ್ಬಲ್ ಡೆಕ್ಕರ್ ಕಾರಿಡಾರ್ ಆರಂಭಿಸಲಾಗುತ್ತದೆ.

ಹೆಬ್ಬಾಳ ಜಂಕ್ಷನ್‌ನಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪನೆ

2014ರಲ್ಲಿ ದೇಶದ ಮೊದಲ ಡಬ್ಬಲ್ ಡೆಕ್ಕರ್ ಮೇಲ್ಸೇತುವೆ ಮುಂಬೈನಲ್ಲಿ ನಿರ್ಮಿಸಲಾಗಿತ್ತು. 6.5 ಕಿ.ಮೀ ವ್ಯಾಪ್ತಿಯಲ್ಲಿ ನಿರ್ಮಾಣವಾಗಿತ್ತು.

ಬಿಎಂಆರ್‌ಸಿಎಲ್, ಜಯದೇವ ಮೇಲ್ಸೇತುವೆ ನೆಲಸಮ ಮಾಡಿ ಅಲ್ಲಿ ರೋಡ್ ಕಮ್ ರೇಲ್ ಫ್ಲೈಓವರ್ ನಿರ್ಮಿಸಲು ಮುಂದಾಗಿದೆ. ಆ ಮೇಲ್ಸೇತುವೆ ಸಿಲ್ಕ್ ಬೋರ್ಡ್ ರಾಗಿಗುಡ್ಡದ ವರೆಗೂ ವಿಸ್ತರಣೆಯಾಗಲಿದೆ.

English summary
Bengaluru will get its first double-decker flyover in the north-south corridor (Hebbal to Central Silk Board Junction). On Sunday, the (KRDCL) invited bids for the initiative to be taken up under the elevated corridor project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X