ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಬೆಂಗಳೂರಿನಲ್ಲಿ ಅ.10ರವರೆಗೆ ಚಳಿ, ಮಳೆ ಮುಂದುವರಿಕೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 05: ರಾಜ್ಯ ರಾಜಧಾನಿ ಬೆಂಗಳೂರಿಗೆ ಅಕ್ಟೋಬರ್ 10ರವೆಗೂ ಸಾಮಾನ್ಯ ಮಳೆ ಹಾಗೂ ಚಳಿಯ ವಾತಾವರಣವೇ ಮುಂದುವರಿಯುವ ನಿರೀಕ್ಷೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುನ್ಸೂಚನೆ ನೀಡಿದೆ.

ನಗರದಲ್ಲಿ ಕೆಲವು ಕಡೆಗಳಲ್ಲಿ ಆಗಾಗ ತುಂತುರು ಮಳೆ ದಾಖಲಾಗಿದೆ. ಇಡಿ ದಿನ ಮೋಡ ಕವಿದ ಹಾಗೂ ಚಳಿಯ ವಾತಾವರಣ ಕಂಡು ಬಂದಿದೆ. ಹಿಂಗಾರು ಆರಂಭದ ಸೂಚನೆ ಎಂಬಂತೆ ತಂಪು ಗಾಳಿ ವಿಸ್ತರಿಸುತ್ತಿದೆ. ಮುಂದಿನ ಐದು ದಿನ ಅಕ್ಟೋಬರ್ 10ರವರೆಗೂ ನಗರದಲ್ಲಿ ಇದೇ ರೀತಿಯ ವಾತಾವರಣ ಕಂಡು ಬರಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

Cold weather likely rain will continue to till Oct.10 in Bengaluru

ಬೆಂಗಳೂರು ಪ್ರವಾಹ: 9 ಮಂದಿ ವಿಪತ್ತು ನಿರ್ವಹಣಾಧಿಕಾರಿ ನೇಮಕಕ್ಕೆ ಮುಂದಾದ ಬಿಬಿಎಂಪಿಬೆಂಗಳೂರು ಪ್ರವಾಹ: 9 ಮಂದಿ ವಿಪತ್ತು ನಿರ್ವಹಣಾಧಿಕಾರಿ ನೇಮಕಕ್ಕೆ ಮುಂದಾದ ಬಿಬಿಎಂಪಿ

ಮಂಗಳವಾರ ಸಂಜೆ ನಂತರ ದಕ್ಷಿಣ ವಲಯದ ಹಂಪಿನಗರದಲ್ಲಿ 16ಮಿ.ಮೀ. ಮಳೆ ಆಗಿದೆ. ಗಾಳಿ ಆಂಜನೇಯ ಟೆಂಪಲ್ ವಾರ್ಡ್ 12ಮಿ.ಮೀ.,ಬಸವನಗುಡಿ ಮತ್ತು ವಿದ್ಯಾಪೀಠದ ಪ್ರದೇಶದಲ್ಲಿ 11ಮಿ.ಮೀ. ಮಳೆ ಆಗಿದೆ. ಜತೆಗೆ ಯಲಹಂಕ, ಹೂಡಿ, ಹುಳಿಮಾವು ಹಾಗೂ ಇನ್ನಿತರ ಕಡೆಗಳಲ್ಲಿ ತುಂತುರು ಮಳೆ ಆಗಿದೆ.

ಹವಾಮಾನ ಬದಲಾವಣೆಯೇ ಚಳಿಗೆ ಕಾರಣ
ಬೆಂಗಳೂರಿನಲ್ಲಿ ಚಳಿಯ ವಾತಾವರಣ ಉಲ್ಬಣಗೊಳ್ಳುತ್ತಿದೆ. ತುಂತುರು ಇಲ್ಲವೇ ಕೆಲವೆಡೆ ಹಗುರ ಮಳೆ ಆಗಿದ್ದು ಬಿಟ್ಟರೆ ಅಷ್ಟೇನು ಜೋರು ಮಳೆ ದಾಖಲಾಗಿಲ್ಲ. ಹೀಗಿದ್ದರು ಚಳಿ ಹೆಚ್ಚಾಗಿದೆ.
ಬಂಗಾಳಕೊಲ್ಲಿ ಸಮುದ್ರದ ಪಶ್ಚಿಮ ಭಾಗದಲ್ಲಿ ಅಂದರೆ ಆಂಧ್ರ ಪ್ರದೇಶದ ಕರಾವಳಿ ಭಾಗಕ್ಕೆ ಹತ್ತಿರದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದರೊಂದಿಗೆ ಎದ್ದಿರುವ ಮೇಲ್ಮೈ ಸುಳಿಗಾಳಿ ತೀವ್ರಗೊಂಡಿದೆ. ಇದರ ಎತ್ತರ ಸಮುದ್ರಕ್ಕಿಂತಲೂ ಸುಮಾರು ಐದು ಕೀಲೋ ಮೀಟರ್ ಇದೆ.

ಈ ಕಾರಣದಿಂದ ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನ ಭಾಗದಲ್ಲಿ ತೇವಾಂಶ ಭರಿತ ಗಾಳಿ ಬೀಸುತ್ತಿದೆ. ಇದರಿಂದ ಆಗಾಗ ತುಂತುರು ಮಳೆ ಬೀಳುತ್ತಿದ್ದು, ಚಳಿ ಪ್ರಮಾಣ ಹೆಚ್ಚಾಗಿದೆ. ಇದು ಮುಂದಿನ ಐದಾರು ದಿನ ಮುಂದುವರಿಯಲಿದೆ. ಈ ವೇಳೆ ನಗರದಲ್ಲಿ ತಾಪಮಾನ ಗರಿಷ್ಠ 28 ಹಾಗೂ ಕನಿಷ್ಠ 20ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ ಎಂದು ಕೇಂದ್ರ ತಿಳಿಸಿದೆ.

English summary
Cold weather likely rain will continue to till Oct.10 in Bengaluru, Karnataka State Natural Disaster Monitoring Centre weather report said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X