ಐತಿಹಾಸಿಕ ಕೆರೆ ಪುನಶ್ಚೇತನಕ್ಕೆ ಮುಂದಾದ ಕೋಕಾಕೋಲಾ ಕಂಪನಿ, ವಿವರ
ಬೆಂಗಳೂರು, ಜೂನ್ 21: ಗುಮ್ಮಟ ನಗರಿ ಬಬಲೇಶ್ವರ ತಾಲ್ಲೂಕಿನಲ್ಲಿ ಇರುವ ಐತಿಹಾಸಿಕ ಮಮದಾಪುರ ಕೆರೆಯು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ 'ಕೋಕಾಕೋಲಾ ಕಂಪನಿ'ಯಿಂದ ಪುನಶ್ಚೇತನಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಶುಕ್ರವಾರ ಮಾಹಿತಿ ನೀಡಿದರು.
ಈ ಕುರಿತು ಕಂಪನಿಯ ಉನ್ನತಾಧಿಕಾರಿಗಳಾದ ಹಿಮಾಂಶು ಪ್ರಿಯದರ್ಶಿ ಮತ್ತು ಮುಕುಂದ್ ತ್ರಿವೇದಿ ಅವರು ಬೆಂಗಳೂರಿನಲ್ಲಿ ಸಚಿವ ಎಂಬಿ ಪಾಟೀಲ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

16ನೇ ಶತಮಾನದಲ್ಲಿ ಆದಿಲ್ ಶಾಹಿ ಸುಲ್ತಾನರ ಕಾಲದಲ್ಲಿ ನಿರ್ಮಿತವಾಗಿರುವ ಮಮದಾಪುರ ಕೆರೆಯು ರಾಜ್ಯದ ಅತಿದೊಡ್ಡ ಕೆರೆಗಳ ಪೈಕಿ ಒಂದಾಗಿದ್ದು, 674 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಕೋಕಾಕೋಲಾ ಕಂಪನಿಯು ಕೆರೆಗೆ ನೀರನ್ನು ಹೊತ್ತು ತರುವ ಮುಖ್ಯ ನಾಲೆಯ ಹೂಳೆತ್ತಿ, ಬಾಂದಾರವನ್ನು ನಿರ್ಮಿಸಲಿದೆ. ಜೊತೆಗೆ ಕೆರೆಯ ಏರಿ ಬಲಪಡಿಸುವಿಕೆ, ಬೇಲಿ, ಪಾದಚಾರಿ ಮಾರ್ಗ ಮತ್ತು ಮಕ್ಕಳು ಆಟವಾಡುವ ಜಾಗವನ್ನು ಮಾಡಿಕೊಡಲಿದೆ ಎಂದು ಅವರು ಹೇಳಿದರು.

ಕೆರೆಯ ಸುತ್ತಮುತ್ತ ಹಸಿರಿನಿಂದ ತುಂಬಿರುವ 1,654 ಎಕರೆ ಅರಣ್ಯವಿದೆ. ಕೆರೆ ಪುನಶ್ಚೇತನದ ಬಳಿಕ ಈ ಸ್ಥಳವು ಪ್ರವಾಸಿ ಆಕರ್ಷಣೆಯ ತಾಣವಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೃಷಿಗೆ ಪೂರಕವಾಗಿ ಕೆರೆ ಪುನಃಶ್ಚೇತನಕ್ಕೆ ಕ್ರಮ
ರಾಜ್ಯದ ಮೂರನೇ ಅತೀ ದೊಡ್ಡ ಕೆರೆ ಎಂದು ಹೆಸರಾಗಿರುವ ವಿಜಯಪುರದ ಮಮದಾಪುರ ಕೆರೆಯಲ್ಲಿ 2,00,000 ಲಕ್ಷ ಗಿಡಗಳನ್ನು ನೆಟ್ಟು ಬೆಳೆಸುವ ಉದ್ದೇಶ ಹೊಂದಿದ್ದೇವೆ. ಸದ್ಯ ವಿಶಾಲವಾದ ಈ ಕೆರೆಯಲ್ಲಿ 56,000 ಗಿಡಗಳನ್ನು ನೆಡಲಾಗುತ್ತಿದೆ. ಈ ಮೂಲಕ ಈ ಭಾಗದಲ್ಲಿ ಕೃಷಿಗೆ ಪೂರಕವಾದ ವಾತಾವರಣ ನಿರ್ಮಿಸಲಾಗುತ್ತಿದೆ ಎಂದು ಈ ಹಿಂದೆ ಎಂಬಿ ಪಾಟೀಲ್ ಅವರು ಹೇಳಿದ್ದರು.
ಸದ್ಯ ವಿಶಾಲ ಕೆರೆಯಲ್ಲಿ ಗಿಡ ನೆಟ್ಟು ಟ್ಯಾಂಕರ್ ನೀರಿನಿಂದ ನೀರು ಪೂರೈಸಲಾಗುತ್ತಿದೆ. ಇಲ್ಲಿ ಗಿಡ ಗಂಟಿಗಳು, ಕಸ ಬೆಳದು ಹೂಳು ತುಂಬಿತ್ತು. ದರ ಪುನಶ್ಚೇತನದ ಅಗತ್ಯತೆ ಇತ್ತು. ಇದೀಗ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಈ ಜಿಲ್ಲೆವ್ಯಾಪ್ತಿಯ ನಿವಾಸಿಗಳು ಕನಸು ಈಡೇರುವ ಕಾಲ ಸನ್ನಿಸಹಿತವಾಗಿದೆ.












Click it and Unblock the Notifications