ಜ.17ರಂದು ಸಿಎಂಆರ್ ವಿಶ್ವವಿದ್ಯಾಲಯ ಎರಡನೇ ಘಟಿಕೋತ್ಸವ
ಬೆಂಗಳೂರು, ಜನವರಿ 16: ಸಿಎಂಆರ್ ವಿಶ್ವವಿದ್ಯಾಲಯದ ಎರಡನೇ ಘಟಿಕೋತ್ಸವ ಜನವರಿ 17 ರಂದು ನಡೆಯಲಿದೆ.
ಎರಡನೇ ಘಟಿಕೋತ್ಸವವು ಜನವರಿ17 ರಂದು ಬೆಳಗ್ಗೆ10.45 ಕ್ಕೆ ಸಿಎಂಆರ್ ಇನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಧ್ವನಿ ಸಭಾಂಗಣದಲ್ಲಿ ನಡೆಯಲಿದೆ. ಘಟಿಕೋತ್ಸವದಲ್ಲಿ ರಾಜ್ಯಪಾಲ ವಿ.ಆರ್. ವಾಲಾ ನೂತನ ಪದವೀಧರರಿಗೆ ಪ್ರದವಿ ಪ್ರಧಾನ ಮಾಡಲಿದ್ದಾರೆ.

ಇನ್ ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ರಾಜ್ಯ ಸಭಾ ಸದಸ್ಯ ಹಾಗೂ ಸಿಎಂಆರ್ ಗ್ರೂಪ್ ನ ಕೆಸಿ ರಾಮಮೂರ್ತಿ ಅಧ್ಯಕ್ಷತೆವಹಿಸಲಿದ್ದಾರೆ. ನಗರದ ಐಟಿಪಿಎಲ್ ರಸ್ತೆಯಲ್ಲಿರುವ ಎಇಸಿಎಸ್ ಲೇಔಟ್ ನಲ್ಲಿರುವ ಸಿಎಂಆರ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಾರ್ಯಕ್ರಮ ನಡೆಯಲಿದೆ.












Click it and Unblock the Notifications