ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾರಸಂದ್ರ ಗ್ರಾಮವನ್ನು ದತ್ತು ಪಡೆದ ಸಿಎಂಆರ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ

|
Google Oneindia Kannada News

ಬೆಂಗಳೂರು, ನವೆಂಬರ್ 13: ನಗರದ ಸಿಎಂಆರ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಸಿಎಂಆರ್‍ಐಟಿ) ಮಾರಸಂದ್ರ ಗ್ರಾಮವನ್ನು ಸ್ಥಳೀಯ ಗ್ರಾಮಪಂಚಾಯಿತಿ ಸಹಕಾರದೊಂದಿಗೆ ದತ್ತು ಪಡೆದಿದೆ. ಇದೇ ಸಂದರ್ಭ ಸಿಎಂಆರ್‍ಐಟಿ ಹಾಗೂ ಬೆಂಗಳೂರಿನ ಮಾರಸಂದ್ರ, ಮಂಡೂರು ಹಾಗೂ ಜಾಲಹೋಬಳಿಗಳ ನಡುವೆ ವಿಶೇಷ ಒಪ್ಪಂದಕ್ಕೆ ಸಹಿ ಕೂಡ ಮಾಡಲಾಗಿದೆ.

ಈ ಪ್ರದೇಶದಲ್ಲಿನ ಶಿಕ್ಷಣ, ಆರೋಗ್ಯ, ಕೃಷಿ, ಶಕ್ತಿ, ಪರಿಸರ ಹಾಗೂ ಇತರೆ ಅಗತ್ಯಗಳ ಪೂರೈಕೆ ಇತ್ಯಾದಿ ಚಟುವಟಿಕೆಗಳಿಗೆ ಸಹಾಯಕವಾಗುವ ಕಾರ್ಯವನ್ನು ಸಿಎಂಆರ್‍ಐಟಿ ಈ ಉಪಕ್ರಮದ ಅಡಿ ವಿವಿಧ ಯೋಜನೆಗಳು ಹಾಗೂ ವಿಚಾರಗೋಷ್ಠಿಗಳ ಮೂಲಕ ಮಾಡಲಿದೆ. ಸಿಎಂಆರ್‍ಐಟಿ ಹಾಗೂ ಮಾರಸಂದ್ರ ಸಮುದಾಯಗಳು ತಳಮಟ್ಟದಿಂದ ಒಟ್ಟಾಗಿ ಕಾರ್ಯನಿರ್ವಹಿಸಲಿವೆ.

ಗ್ರಾಮದ ಸರ್ವಾಂಗೀಣ ವಿಕಾಸವನ್ನು ದೃಷ್ಟಿಯಲ್ಲಿಟ್ಟುಕೊಂಡು ಇವು ಅಭಿವೃದ್ಧಿ ಕಾರ್ಯ ಮಾಡಲಿವೆ. ಈ ಗ್ರಾಮದ ಬೇಕುಬೇಡಿಕೆಗಳು, ಆಗುಹೋಗುಗಳ ಕುರಿತು ಸಿಎಂಆರ್‍ಐಟಿ ವಿದ್ಯಾರ್ಥಿ ಸಮೂಹ ಹಾಗೂ ಶಿಕ್ಷಕವೃಂದವ್ನು ಒಳಗೊಂಡ ತಂಡವು ಇತ್ತೀಚೆಗೆ ಈ ಭಾಗದಲ್ಲಿ ಒಂದು ಸರ್ವೆ ಕಾರ್ಯ ಕೂಡ ನಡೆಸಿದೆ.

ಗುಣಮಟ್ಟದ ಶಿಕ್ಷಣ ನೀಡುವುದು ಅತ್ಯುನ್ನತ ದೇಶ ಸೇವೆ ಗುಣಮಟ್ಟದ ಶಿಕ್ಷಣ ನೀಡುವುದು ಅತ್ಯುನ್ನತ ದೇಶ ಸೇವೆ

ಬೆಂಗಳೂರು ಉತ್ತರ ಜಿಲ್ಲೆಯ ಜಾಲಹೋಬಳಿಯ ಮಂಡೂರಿನ ಮಾರಸಂದ್ರ ಗ್ರಾಮದ 220 ಮನೆಗಳಿಗೆ ಈ ತಂಡ ಭೇಟಿಕೊಟ್ಟು ಮಾಹಿತಿ ಕಲೆಹಾಕಿದೆ. ಈ ಗ್ರಾಮವು ಸಾಕಷ್ಟು ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿದೆ.

ಮೂಲ ಸೌಕರ್ಯ ಅಭಿವೃದ್ಧಿಗೆ ಸಿಎಂ ಆರ್ ಐಟಿ

ಮೂಲ ಸೌಕರ್ಯ ಅಭಿವೃದ್ಧಿಗೆ ಸಿಎಂ ಆರ್ ಐಟಿ

ಉದಾಹರಣೆಗೆ ರಸ್ತೆ, ಶಾಲೆಗಳಲ್ಲಿ ಶೌಚಾಲಯಗಳು, ಅತಿಹೆಚ್ಚು ಜನಸಂಖ್ಯೆ, ನೀರಿನ ಕೊರತೆ, ರೈತರು ಜಾನುವಾರುಗಳಿಗೆ ಮೇವು ಕೊರತೆ, ದುರ್ಭಲ ಒಳಚರಂಡಿ ವ್ಯವಸ್ಥೆ ಸೇರಿದಂತೆ ಹಲವು ಸಮಸ್ಯೆ ಹೊಂದಿದೆ.

ಯುವಕ/ಯುವತಿಯರಿಗೆ ಒಂದು ಅವಕಾಶ ಕಲ್ಪಿಸುವ ದೃಷ್ಟಿಯಲ್ಲಿಯೇ ಈ ಸರ್ವೆ ಕಾರ್ಯ ನಡೆದಿದೆ. ಇವರಲ್ಲಿ ಜ್ಞಾನ ಹಾಗೂ ಕೌಶಲ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದೆ. ಸಾಮಾಜಿಕ ಅಗತ್ಯವನ್ನು ಪೂರೈಸುವ ಜತೆಗೆ ಸ್ವಯಂ ಅಭಿವೃದ್ಧಿಗೂ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಸಹಕರಿಸಿದೆ. ಗ್ರಾಮೀಣ ಭಾಗದ ಜನರು ಎಣಿಸಲಾಗದಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದನ್ನು ತಿಳಿಯುವುದು ಸಾಮಾಜಿಕ ಜವಾಬ್ದಾರಿ ಕೂಡ ಆಗಿದೆ. ಇದನ್ನು ಪ್ರತಿಯೊಬ್ಬರೂ ತಮ್ಮ ಬುದ್ದಿಮತ್ತೆಯಿಂದ ಅರಿಯುವ ಕಾರ್ಯಕ್ಕೆ ಒತ್ತು ಕೊಡಲಾಗುತ್ತಿದೆ. ಈ ಶಿಕ್ಷಣ ಸಂಸ್ಥೆಯು ತಂತ್ರಜ್ಞಾನವು ಯಾವಾಗಲೂ ತಾಂತ್ರಿಕ ಮತ್ತು ಸಾಮಾಜಿಕ ನಾವಿನ್ಯತೆಗೆ ಕಾರಣವಾಗುವ ಸಹಕಾರಿ ವಾತಾವರಣವನ್ನು ಉತ್ತೇಜಿಸುವ ಹಾಗೂ ಬೆಂಬಲಿಸುವ ಕಾರ್ಯ ಮಾಡುತ್ತದೆ ಎನ್ನುವುದನ್ನು ನಂಬಿದೆ.

ಗುಣಮಟ್ಟದ ಶಿಕ್ಷಣ ನೀಡುವುದು ಅತ್ಯುನ್ನತ ದೇಶ ಸೇವೆ ಗುಣಮಟ್ಟದ ಶಿಕ್ಷಣ ನೀಡುವುದು ಅತ್ಯುನ್ನತ ದೇಶ ಸೇವೆ

ಸ್ವಚ್ಛತೆ ಹಾಗೂ ನೈರ್ಮಲ್ಯದಲ್ಲಿ ಅಭಿವೃದ್ಧಿ

ಸ್ವಚ್ಛತೆ ಹಾಗೂ ನೈರ್ಮಲ್ಯದಲ್ಲಿ ಅಭಿವೃದ್ಧಿ

ಮಾರಸಂದ್ರ ಗ್ರಾಮಸ್ಥರಿಗೆ ಸಿಎಂಆರ್ ಐಟಿ ಅತ್ಯಂತ ಯಶಸ್ವಿಯಾಗಿ ಸಹಾಯಹಸ್ತ ಚಾಚಿದೆ. ಈ ಎಂಒಯು ಮುಂದಿನ ದಿನಗಳಲ್ಲಿ ನಡೆಯಬಹುದಾದ ಕಾರ್ಯಚಟುವಟಿಕೆಗಳ ಕುರಿತು ಒಂದು ವಿಸ್ತೃತ ನೋಟವನ್ನು ಒದಗಿಸುತ್ತಿದೆ. ಗ್ರಾಮ ಪಂಚಾಯಿತಿ ಹಾಗೂ ಸಿಎಂಆರ್‍ಐಟಿ ನಡುವೆ ಈ ಕೆಳಗಿನ ಕ್ಷೇತ್ರಗಳಲ್ಲಿ ಉತ್ತಮ ಅಭಿವೃದ್ಧಿ ಆಧಾರಿತ ಹೊಂದಾಣಿಕೆಗೆ ಸಹಕಾರಿಯಾಗಲಿದ್ದು, ಪ್ರಗತಿಯತ್ತ ಕೊಂಡೊಯ್ಯುವ ಲಕ್ಷಣ ತೋರಿಸುತ್ತಿದೆ. ಗ್ರಾಮವಾಸಿಗಳಿಗೆ ಸಾಮಾಜಿಕವಾಗಿ ಲಾಭದಾಯಕವಾಗಬಲ್ಲ ಘಟನೆಗಳನ್ನು ಸಂಘಟಿಸುವಲ್ಲಿ ಸಹಕಾರಿಯಾಗಲಿದೆ.


ಆಮೂಲಾಗ್ರ ಅಭಿವೃದ್ಧಿ ಗಮನಿಸಿದ ನಂತರ ಇಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯದಲ್ಲಿ ಅಭಿವೃದ್ಧಿ ಕಾಣಲಿದೆ. ಅಲ್ಲದೇ ಗ್ರಾಮದ ಗುಣಮಟ್ಟ ವೃದ್ಧಿಸಿ ಕೌಶಲ್ಯದಿಂದ ಕೂಡಿದ ಶಿಕ್ಷಣ ಹಾಗೂ ತಾಂತ್ರಿಕ ಪ್ರಗತಿ ಕಾಣಲಿದೆ.


ಆವಿಷ್ಕಾರಿ ತಂತ್ರಜ್ಞಾನದ ಪರಿಹಾರವು ಪರಿಚಯವಾಗಲಿದ್ದು, ಇದು ಜೀವನದ ಗುಣಮಟ್ಟ ವೃದ್ಧಿಸಲಿದೆ, ವೈದ್ಯಕೀಯ ತಜ್ಞರಿಂದ ಆರೋಗ್ಯ ತಪಾಸಣೆಗೆ ಅವಕಾಶ ಒದಗಲಿದೆ.

ಇಂಜಿನಿಯರಿಂಗ್ ಕಾಲೇಜಿಗೆ ಬಂದವರು ಯಾರು?

 ಸಿಎಂಆರ್‍ಐಟಿ ಪ್ರಾಂಶುಪಾಲ ಡಾ. ಸಂಜಯ್ ಜೈನ್

ಸಿಎಂಆರ್‍ಐಟಿ ಪ್ರಾಂಶುಪಾಲ ಡಾ. ಸಂಜಯ್ ಜೈನ್

ಸಿಎಂಆರ್‍ಐಟಿ ಪ್ರಾಂಶುಪಾಲ ಡಾ. ಸಂಜಯ್ ಜೈನ್ ಅವರು ಈ ಎಂಒಯು ಸಹಿ ಕಾರ್ಯಕ್ರಮದ ನಂತರ ಮಾತನಾಡಿ, ಇದು ಮಾರತ್‍ಹಳ್ಳಿ ಗ್ರಾಮದ ನಾಗರಿಕರ ಕಡೆಗಿನ ಕೃತಜ್ಞತೆಯ ಸಂಕೇತವಾಗಿದೆ. ನಮ್ಮ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಮುಂದಾಗಿ ಇಂತದ್ದೊಂದು ಉಪಕ್ರಮ ಕೈಗೊಂಡಿರುವುದಕ್ಕೆ ಹೆಮ್ಮೆ ಅನ್ನಿಸುತ್ತಿದೆ. ಮಾರಸಂಧ್ರ ಗ್ರಾಮ ನಿಜವಾಗಿಯೂ ಬಯಸುತ್ತಿದ್ದ ಅಭಿವೃದ್ಧಿಯನ್ನು ಇವರು ತಂದುಕೊಡುವ ಯತ್ನ ಮಾಡಲಿದ್ದಾರೆ ಎಂದು ಹೇಳಲು ಬಯಸುತ್ತೇನೆ.

ಸಿಎಂಆರ್‍ಐಟಿಗೆ ಇದೊಂದು ಅಗಾಧ ಅನುಭವವಾಗಿದೆ. ಇಲ್ಲಿ ನಾನು ನಾಗರಿಕರನ್ನು ಕೂಡ ಅಭಿನಂದಿಸಲು ಇಚ್ಛಿಸುತ್ತೇನೆ, ಸಾಮಾಜಿಕ ಪ್ರಗತಿಗೆ ಸಹಕಾರ ನೀಡುತ್ತಿದ್ದಾರೆ ಹಾಗೂ ಸಾಮಾಜಿಕ ಅಗತ್ಯಗಳಿಗೆ ತಂತ್ರಜ್ಞಾನದ ಬಳಕೆ ಮತ್ತು ಹಲವಾರು ಚಟುವಟಿಕೆಗಳನ್ನು ಹಾಗೂ ಪ್ರಗತಿಯ ಸಂಕೇತವಾಗಿ ಘಟನೆಗೆ ಕೈಜೋಡಿಸುತ್ತಿದ್ದಾರೆ. ಈ ಪ್ರಯಾಣವು ಮಾರಸಂಧ್ರ ಗ್ರಾಮ ಹಾಗೂ ಸಿಎಂಆರ್‍ಐಟಿಗೆ ಒಂದು ಅಭಿವೃದ್ಧಿಯ ಹೊಸ ತಾಣವಾಗಿ ಲಭಿಸಲಿದೆ' ಎಂದು ಹೇಳಿದರು.

 ಸಿಎಂಆರ್‍ಐಟಿಯ ಪ್ರೊ. ಶರ್ಮಿಳಾ ಕೆ.ಪಿ. ಮಾತನಾಡಿ

ಸಿಎಂಆರ್‍ಐಟಿಯ ಪ್ರೊ. ಶರ್ಮಿಳಾ ಕೆ.ಪಿ. ಮಾತನಾಡಿ

ಯೋಜನೆಯ ನೇತೃತ್ವ ವಹಿಸಿರುವ ಸಿಎಂಆರ್‍ಐಟಿಯ ಪ್ರೊ. ಶರ್ಮಿಳಾ ಕೆ.ಪಿ. ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಕಾರ್ಯನಿರ್ವಹಿಸುವ ಈ ಚಟುವಟಿಕೆಯಲ್ಲಿ ನಾನು ಅತ್ಯುತ್ಸಾಹದಿಂದ ಪಾಲ್ಗೊಳ್ಳಲು ಬಯಸುತ್ತೇನೆ. ಈ ಕ್ಷಣಕ್ಕೆ ಕಾದಿದ್ದೆ. ಒಂದಿಷ್ಟು ಆಧುನಿಕ ಆವಿಷ್ಕಾರ ಹಾಗೂ ಆಧುನಿಕ ಜಗತ್ತಿಗೆ ತಮ್ಮನ್ನು ತವು ತೆರೆದುಕೊಳ್ಳಲು ಇದು ಸಹಕಾರಿಯಾಗಲಿದೆ. ತಂತ್ರಜ್ಞಾನದ ಜತೆ ಸಾಗುವುದಕ್ಕೆ ಇದು ಸಹಕಾರಿಯಾಗಿದೆ' ಎಂದರು.

English summary
City-based CMR Institute of Technology (CMRIT) has adopted Marasandra village with the help of village Gram Panchayat. A MoU was also signed between CMRIT and Marasandra, Mandur, Jalahobli, Bengaluru. CMRIT has taken up this initiative to help through various schemes and seminars.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X