ಕೊಡಗಿನಲ್ಲಿ‌ ಪ್ರವಾಹ: ದಿನದ 24 ತಾಸು ಕಾರ್ಯಾಚರಣೆಗೆ ಸಿಎಂ ಸೂಚನೆ

ಬೆಂಗಳೂರು, ಆಗಸ್ಟ್ 18: ಕೊಡಗು, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಉಂಟಾಗಿರುವ ಪ್ರವಾಹದಿಂದ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಇನ್ನು ಮೂರು ದಿನಗಳೊಳಗಾಗಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕೊಡಗಿನ ಮಹಾಮಳೆ ಕುರಿತಂತೆ ಕುಮಾರಸ್ವಾಮಿ ಕೊಡಗು ಅಧಿಕಾರಿಗಳ ಉನ್ನತ ಮಟ್ಟದ ಸಭೆ ಕರೆದಿದ್ದರು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಫಿ, ಅಡಿಕೆ, ತೆಂಗು,‌ಮೆಣಸು ಸೇರಿದಂತೆ ಸಾವಿರಾರು ಕೋಟಿ ರೂಪಾಯಿಗಳ ನಷ್ಟ ಉಂಟಾಗಿದ್ದು, ಮೂರು ದಿನಗಳಲ್ಲಿ ಸಮಗ್ರ‌ ವರದಿ‌ ಕೊಡುವಂತೆ ಮುಖ್ಯಮಂತ್ರಿ ಸೂಚನೆ‌ ನೀಡಿದ್ದಾರೆ.

ಪ್ರತಿಯೊಂದು ಜಿಲ್ಲೆಯಲ್ಲೂ ಡಿಸಿಗಳು ಅತ್ಯಂತ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರೈತರ ಬೆಳೆ ನಷ್ಟದ ಮಾಹಿತಿಯನ್ನು ಸಂಪೂರ್ಣವಾಗಿ ತರಿಸಿಕೊಳ್ಳುತ್ತಿದ್ದೇನೆ. ಉಡುಪಿ, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆ ಮಾಹಿತಿಗೆ ಸೂಚನೆ ನೀಡಿದ್ದೇನೆ. ಡ್ಯಾಂಗಳಿಂದ ಹೆಚ್ಚು ನೀರು ಬಂದಿದ್ದರಿಂದ ಬೆಳೆನಾಶವಾಗಿದೆ.

50ಕ್ಕೂ ಹೆಚ್ಚು ಜೆಸಿಬಿಯಿಂದ ಮಣ್ಣು ತೆರವು ಕಾರ್ಯ

50ಕ್ಕೂ ಹೆಚ್ಚು ಜೆಸಿಬಿಯಿಂದ ಮಣ್ಣು ತೆರವು ಕಾರ್ಯ

ರಾಜ್ಯದ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತಿದೆ. ಸಮರೋಪಾದಿಯಲ್ಲಿ ಪರಿಹಾರ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದ ನೆರವಿನಿಂದ ಪರಿಹಾರ ಕೈಗೊಳ್ಳಲಾಗಿದೆ. ಬೆಳೆನಷ್ಟ ಕುರಿತು ಮಾಹಿತಿ ಪಡೆಯುತ್ತಿದ್ದೇವೆ. 50ಕ್ಕೂ ಹೆಚ್ಚು ಜೆಸಿಬಿಗಳಿಂದ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ. ಹಾರಂಗಿಯಲ್ಲಿ ವಾಯುಪಡೆ ನೆರವಿನ ಕಾರ್ಯಾಚರಣೆಗೆ ಸಿದ್ಧವಾಗಿದೆ.

ಕೊಡಗು ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡಿಕೆ

ಕೊಡಗು ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡಿಕೆ

ಕೊಡಗು ಜಿಲ್ಲೆಯಾದ್ಯಂತ ಪ್ರವಾಹ ಹಿನ್ನೆಲೆಯಲ್ಲಿ ಆಗಸ್ಟ್ 31ರಂದು ನಡೆಯಬೇಕಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡಲಾಗಿದೆ. ಕುಶಾಲನಗರ, ವಿರಾಜಪೇಟೆ, ಸೋಮವಾರ ಪೇಟೆ ಚುನಾವಣೆಯನ್ನು ಮುಂದೂಡಲಾಗಿದೆ.

ಬೋಟ್‌ ರಕ್ಷಣಾ ಕಾರ್ಯಾಚರಣೆ

ಬೋಟ್‌ ರಕ್ಷಣಾ ಕಾರ್ಯಾಚರಣೆ

ಬೋಟ್ ರಕ್ಷಣಾ ಸಲಕರಣೆ ಜೊತೆ ಸಿವಿಲ್ ಡಿಫೆನ್ಸ್ ಸನ್ನದ್ಧವಾಗಿದೆ.ರಕ್ಷಣಾ ಕಾರ್ಯಕ್ಕೆ ಸೇನೆಯ ಇಂಜಿನಿಯರಿಂಗ್ ಟಾಸ್ಕ್ ಫೋರ್ಸ್.ಚಾಪರ್ ಗಳನ್ನು ಬಳಸಿ ಸಂತ್ರಸ್ತರ ರಕ್ಷಣೆ. ಮಳೆಯಿಂದ ಸಂತ್ರಸ್ತರಾದವರಿಗೆ ವೈದ್ಯಕೀಯ ನೆರವು, ಆಹಾರ, ಔಷಧ ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಇದುವರೆಗೂ 2500 ಸಂತ್ರಸ್ತರ ರಕ್ಷಣೆ

ಇದುವರೆಗೂ 2500 ಸಂತ್ರಸ್ತರ ರಕ್ಷಣೆ

ಒಂದು ಕಡೆ ಬೆಳೆನಷ್ಟ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅಪಾರ ನಷ್ಟ. ವಸತಿ ಹೀನರಾಗಿರುವ ಸಂತ್ರಸ್ತರ ಸಂಕಷ್ಟಕ್ಕೆ ನೆರವಾಗಲು ಪ್ರತಿಕೂಲ ಹವಾಮಾನವಿಲ್ಲ, ಈಗಾಗಲೇ 2500 ಸಂತ್ರಸ್ತರನ್ನು ರಕ್ಷಿಸಲಾಗಿದೆ. ಕೊಡಗಿನ ಜನತೆ ರಕ್ಷಣೆಗಾಗಿ ತಜ್ಞರ ತಂಡದಿಂದ ರಕ್ಷಣಾ ಕಾರ್ಯ ಚುರುಕುಗೊಂಡಿದೆ. 75 ಆರ್ಮಿ ಎಂಜಿನಿಯರ್ ಟಾಸ್ಕ್ ಪೋರ್ಸ್ ನಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಭಾರತೀಯ ಸೇನೆಯ 12 ತಂಡದಿಂದ ರಕ್ಷಣಾ ಕಾರ್ಯ

ಭಾರತೀಯ ಸೇನೆಯ 12 ತಂಡದಿಂದ ರಕ್ಷಣಾ ಕಾರ್ಯ

ಭಾರತೀಯ ಸೇನೆಯ 12 ತಂಡದಿಂದ ರಕ್ಷಣಾ ಕಾರ್ಯಾಚರಣೆಗೊಳಿಸಿದ್ದಾರೆ, ಭಾರತೀಯ ಸೇನೆ, ವಾಯುಪಡೆ ತಜ್ಞರಿಂದ ರಕ್ಷಣೆ. ಸಿವಿಲ್ ಡಿಫೆನ್ಸ್ 45 ತಂಡದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+