ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಬಳವಿಲ್ಲದೆ ಸಾಯುತ್ತಿರುವ ಪೌರಕಾರ್ಮಿಕರು:ಸರ್ಕಾರದ ವಿರುದ್ಧ ಆಕ್ರೋಶ

By Nayana
|
Google Oneindia Kannada News

Recommended Video

ಸಂಬಳವಿಲ್ಲದೆ ಪೌರಕಾರ್ಮಿಕರು ಜೀವನ ಸಾಗಿಸಲು ಪರದಾಟ | Oneindia Kannada

ಬೆಂಗಳೂರು, ಜು.10:ಕಳೆದ ಆರು ತಿಂಗಳಿನಿಂದ ವೇತನ ಸಿಗದೇ ಬೆಂಗಳೂರಿನ ವೈಯಾಲಿ ಕಾವಲ್ ನಿವಾಸಿ ಪೌರ ಕಾರ್ಮಿಕ ಸುಬ್ರಹ್ಮಣ್ಯ ಆತ್ಮಹತ್ಯೆ ಗೆ ಶರಣಾದ ಬೆನ್ನಲ್ಲೇ ಬೆಂಗಳೂರಿನ ಅನೇಕ ಪೌರ ಕಾರ್ಮಿಕರಿಗೆ ನಾಲ್ಕಾರು ತಿಂಗಳಿನಿಂದ ಸಂಬಳ ಆಗಿಲ್ಲ ಎನ್ನುವ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಅಭಿಯಾನ ವೇ ಆರಂಭಗೊಂಡಿದೆ.

ಪ್ರಜ್ವಲ್ ಮಣಿಪಾಲ್ ಎಂಬುವವರು ಇಂದಿರಾನಗರದ ಪೌರ ಕಾರ್ಮಿಕ ರಾದ ಲಕ್ಷ್ಮಿದೇವಿ, ಉಮಾ, ಶೋಭಾ, ಕೊಂಡಮ್ಮ ಎಂಬ ಪೌರ ಕಾರ್ಮಿಕರ ನೋವಿನ ಕತೆಯನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಅನೇಕ ಪ್ರಜ್ಞಾವಂತ ನಾಗರಿಕರು ಪೌರ ಕಾರ್ಮಿಕರ ಸಮಸ್ಯೆಗಳ ಮೇಲೆ ಮತ್ತಷ್ಟು ಬೆಳಕು ಚೆಲ್ಲಿದ್ದಾರೆ.

ಬಿಬಿಎಂಪಿಗೆ ಆಸ್ತಿ ತೆರಿಗೆಯಲ್ಲಿ ಮೋಸ ಮಾಡಿದ್ದು ಯಾರು ನೋಡಿಬಿಬಿಎಂಪಿಗೆ ಆಸ್ತಿ ತೆರಿಗೆಯಲ್ಲಿ ಮೋಸ ಮಾಡಿದ್ದು ಯಾರು ನೋಡಿ

ಇಂದಿರಾನಗರದ ಪೌರ ಕಾರ್ಮಿಕರಾದ ಲಕ್ಷ್ಮಿದೇವಿ, ಉಮಾ, ಶೋಭಾ, ಕೊಂಡಮ್ಮ ಕಳೆದ ಆರು ತಿಂಗಳಿನಿಂದ ವೇತನ ಇಲ್ಲದೇ ತಮ್ಮ‌ಮನೆ ಬಾಡಿಗೆ ಹಣ ಕಟ್ಟಲು ಇದ್ದಬಿದ್ದ ಒಡವೆ ಒತ್ತೆ ಇಟ್ಟು, ಕೆಲವು ಮನೆ ಸಾಮಾನಗಳನ್ನು ಮಾರಾಟ ಮಾಡಿ, ಜೀವನ ನಿರ್ವಹಣೆ ಮಾಡುತ್ತಿದ್ದಾರೆ.

Citizens raise voice for Pourakarmikas in social media

ಇದು ಕೇವಲ ಇಂದಿರಾನಗರದ ಪೌರ ಕಾರ್ಮಿಕರ ಬವಣೆ ಅಲ್ಲ, ಕೋರಮಂಗಲ, ಬಾಣಸವಾಡಿ, ಮಲ್ಲೇಶ್ವರ ಹೀಗೆ ನಗರದ ಅನೇಕ ವಾರ್ಡ್ ಗಳಲ್ಲಿ ಪೌರ ಕಾರ್ಮಿಕರು ಸಂಬಳ ಇಲ್ಲದೇ ಕಂಗಾಲಾಗಿದ್ದಾರೆ. ಸರ್ಕಾರ ಕೂಡಲೇ ಇವರ ನೆರವಿಗೆ ಬರಬೇಕೆಂದು ಅನೇಕ ನಾಗರಿಕರು ಟ್ವಿಟರ್ ಖಾತೆಯಲ್ಲಿ ಸರ್ಕಾರ ವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

English summary
After a Pourakarmikas committed suicide on Monday, citizens of Bangalore have raised their voice to survive Pourakarmikas and putting pressure on government to take necessary action to pay the salary which was pending since six months, through social media forum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X