ರೇರಾ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಒತ್ತಾಯಿಸಿ ಪ್ರತಿಭಟನೆ
ಬೆಂಗಳೂರು, ಮೇ 17: ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ(ರೇರಾ)ವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡದಿರುವ ಕುರಿತು ನಮ್ಮ ಬೆಂಗಳೂರು ಪ್ರತಿಷ್ಠಾನ ಹಾಗೂ ಯುನೈಟೆಡ್ ಬೆಂಗಳೂರು ಪ್ರತಿಭಟನೆ ಹಮ್ಮಿಕೊಂಡಿದೆ.
ನಗರದ ಟೌನ್‌ಹಾಲ್ ಮುಂಭಾಗದಲ್ಲಿ ಮೇ 18ರಂದು ಬೆಳಗ್ಗೆ 11 ಗಂಟೆಗೆ ಶಾಂತಿಯುತ ಪ್ರತಿಭಟನೆ ನಡೆಸಲು ಮುಂದಾಗಿದೆ. ಬಡಾವಣೆ ಅಥವಾ ಅಪಾರ್ಟ್‌ಮೆಂಟ್ ಯೋಜನೆಗಳಲ್ಲಿ ಶೇ.60ರಷ್ಟು ನಿವೇಶನ ಅಥವಾ ಫ್ಲ್ಯಾಟ್‌ಗಳನ್ನು ಗ್ರಾಹಕರಿಗೆ ಕ್ರಯಪತ್ರ ಮಾಡಿಕೊಟ್ಟ ಯೋಜನೆಗಳಿಗೆ ಮಾತ್ರ ರೇರಾ ಕಾಯ್ದೆ ಅನ್ವಯವಾಗುವುದಿಲ್ಲ.
ರೇರಾ ಕಾಯ್ದೆ ಅನುಷ್ಠಾನ ಮಾಡುವಲ್ಲಿ ವೈಫಲ್ಯ, ಕೆಲವೇ ಬಿಲ್ಡರ್ ಹಾಗೂ ಡೆವಲಪರ್‌ಗಳ ಮೇಲೆ ವಿಶೇಷ ಒಲವು ತೋರಿಸುತ್ತಿರುವುದು, ಮೂರು ಜಿಲ್ಲಾಧಿಕಾರಿಗಳ ಕಚೇರಿಯೂ ರೇರಾ ಕೋರ್ಟ್ ಆದೇಶ ಕುರಿತು ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಿದ್ದಾರೆ.

ರೇರಾ ಕಾಯ್ದೆ ಕಾರಿಗೆ ಅನ್ವಯವಾಗುತ್ತದೆ: ಬಡಾವಣೆಯಾಗಿದ್ದಲ್ಲಿ ರಸ್ತೆ,ಬೀದಿ ದೀಪ, ಮೂಲಸೌಕರ್ಯಗಳನ್ನು ನಿರ್ವಹಣೆಗಾಗಿ ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗೆ ಹಸ್ತಾಂತರಿಸಬೇಕು.
ಅಪಾರ್ಟ್‌ಮೆಂಟ್ ಅಥವಾ ಬಡಾವಣೆ ನಿರ್ಮಿಸುವ ಮುನ್ನ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮೋದನೆ ಪಡೆದ ಯೋಜನೆಯ ಅನ್ವಯವೇ ನಿರ್ಮಾಣ ಮಾಡಬೇಕು.
ಶೇ. 60ರಷ್ಟು ನಿವೇಶನ, ಫ್ಲ್ಯಾಟ್‌ಗಳನ್ನು ಕ್ರಯಪತ್ರ ಮಾಡಿ ಕೊಡದೆ ಇದ್ದಲ್ಲಿ ಯೋಜನೆ ಪೂರ್ಣಗೊಂಡ ಪ್ರಮಾಣ ಪತ್ರ ಹಾಗೂ ಸ್ವಾಧೀನ ಪತ್ರಕ್ಕಾಗಿ ಸಂಬಂಧಿಸಿದ ಸಕ್ಷಮ ಪ್ರಾಧಿಕಾರಕ್ಕೆ ಈಗಾಗಲೇ ಅರ್ಜಿ ಸಲ್ಲಿಸಿರಬೇಕು.












Click it and Unblock the Notifications