ನೀವು ಬೆಂಗಳೂರು ಮೇಯರ್ ಆದರೆ? ಲೇಖನ ಸ್ಪರ್ಧೆ, ಬಹುಮಾನ ಗೆಲ್ಲಿ

ಬೆಂಗಳೂರು, ಸೆಪ್ಟೆಂಬರ್ 26 : ಸಿಟಿಜನ್ ಮ್ಯಾಟರ್ಸ್ ಹಾಗೂ ಅಪಾರ್ಟ್ ಮೆಂಟ್ ಅಡ್ಡಾ ಜಂಟಿಯಾಗಿ ಸ್ಪರ್ಧೆಯೊಂದನ್ನು ಆಯೋಜಿಸಿದೆ. "ನಾನು ಬೆಂಗಳೂರು ಮೇಯರ್ ಆದರೆ" ಎಂಬ ವಿಷಯದ ಬಗ್ಗೆ ಲೇಖನ ಆಹ್ವಾನಿಸಲಾಗಿದೆ. ಬೆಂಗಳೂರಿಗರು ಈ ವಿಚಾರದ ಬಗ್ಗೆ ಬರೆಯಬಹುದು.

* ವಾಸ್ತವದಲ್ಲಿ ಜಾರಿ ಮಾಡಲು ಸಾಧ್ಯವಿರುವ ಆಲೋಚನೆಗಳ ಬಗ್ಗೆ, ಬೆಂಗಳೂರು ನಗರವನ್ನು ಉತ್ತಮಪಡಿಸುವಂಥ ಯೋಜನೆಗಳ ಬಗ್ಗೆ ಹಂಚಿಕೊಳ್ಳಬಹುದು

* ಮೇಯರ್ ಅಧಿಕಾರ ವ್ಯಾಪ್ತಿ ಹಾಗೂ ಆ ಸ್ಥಾನದ ಮಿತಿಗಳನ್ನು ಅರಿತುಕೊಂಡಿರಬೇಕು. ಅವರ ಅಧಿಕಾರ ವ್ಯಾಪ್ತಿಯ ಅಡಿಯಲ್ಲಿ ಬರುವ ಅಧಿಕಾರಿಗಳ ಬಗ್ಗೆಯೂ ಗಮನದಲ್ಲಿರಲಿ

Citizen Matters and ApartmentADDA present the “If I were Bengaluru Mayor” contest

* ನಿಮ್ಮ ವಾದಕ್ಕೆ ಪುಷ್ಟಿ ನೀಡುವಂತಹ ಉದಾಹರಣೆ, ಅಂಕಿ- ಅಂಶಗಳು ಸಹ ಒಳಗೊಂಡಿರಲಿ

* ಸರಳ ಹಾಗೂ ಸಂಕ್ಷಿಪ್ತವಾಗಿರಲಿ ಬರವಣಿಗೆ

ಕನ್ನಡ ಹಾಗೂ ಇಂಗ್ಲಿಷ್ ನಲ್ಲಿ ಈ ಸ್ಪರ್ಧೆ ಇರುತ್ತದೆ. ಎರಡೂ ಭಾಷೆಯಿಂದ ತಲಾ ಒಬ್ಬರು ವಿಜೇತರಿಗೆ ಬಹುಮಾನ ನೀಡಲಾಗುತ್ತದೆ. ಹದಿನೈದು ವರ್ಷ ಮೇಲ್ಪಟ್ಟ ಬೆಂಗಳೂರಿಗರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ಲೇಖನಕ್ಕೆ ಮಾರ್ಗದರ್ಶಿ ಸೂತ್ರಗಳು

*ಲೇಖನವು 800 ರಿಂದ 1200 ಪದಗಳ ಮಿತಿಯಲ್ಲಿರಲಿ

* ಪ್ರವೇಶ ಮಾಹಿತಿ ಇಂಗ್ಲಿಷ್ ಅಥವಾ ಕನ್ನಡದಲ್ಲಿರಲಿ

* ಒಬ್ಬರಿಗೆ ಒಂದು ಲೇಖನಕ್ಕೆ ಮಾತ್ರ ಅವಕಾಶ

* ಆನ್ ಲೈನ್ ಮೂಲಕ ಲೇಖನ ಸಲ್ಲಿಸಬೇಕು

* ಲೇಖನವು ಅನುವಾದ ಮಾಡಿರುವಂಥದ್ದು ಅಥವಾ ಬೇರೆ ಲೇಖನದಿಂದ ತೆಗೆದುಕೊಂಡಿರಬಾರದು

* ಲೇಖನವನ್ನು ಸಲ್ಲಿಸುವ ಮುಂಚೆ ಸ್ಪರ್ಧೆಯ ನಿಯಮ ಹಾಗೂ ಷರತ್ತುಗಳನ್ನು ಓದಿಕೊಂಡಿರಬೇಕು.

ಲೇಖನವನ್ನು ಆನ್ ಲೈನ್ ಮೂಲಕ ಸಲ್ಲಿಸಲು ಸೆಪ್ಟೆಂಬರ್ 28, 2017 ಕೊನೆ ದಿನ. ಲೇಖನವನ್ನು ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+