ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ರಿಸ್‌ಮಸ್‌ಗಾಗಿ ಕಾಚಿಗೂಡಾ-ಬೆಂಗಳೂರು ವಿಶೇಷ ರೈಲು

|
Google Oneindia Kannada News

ಬೆಂಗಳೂರು, ಡಿ. 23 : ಕ್ರಿಸ್‌ಮಸ್ ಸಂದರ್ಭದಲ್ಲಿ ಉಂಟಾಗುವ ಪ್ರಯಾಣಿಕರ ದಟ್ಟಣೆ ತಪ್ಪಿಸಲು ರೈಲ್ವೆ ಇಲಾಖೆ ಬೆಂಗಳೂರು-ಕಾಚಿಗೂಡಾ ನಡುವೆ ವಿಶೇಷ ರೈಲು ಸೇವೆಯನ್ನು ಆರಂಭಿಸಿದೆ. ಬೆಂಗಳೂರಿನಿಂದ-ಕಾಚಿಗೂಡಾಕ್ಕೆ ಮತ್ತು ಕಾಚಿಗೂಡಾದಿಂದ ಬೆಂಗಳೂರಿಗೆ ಈ ರೈಲು ಸಂಚರಿಸಲಿದೆ.

ಬೆಂಗಳೂರು-ಕಾಚಿಗೂಡಾ ವಿಶೇಷ ಪ್ರೀಮಿಯಂ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಬೆಂಗಳೂರು ರೈಲು ನಿಲ್ದಾಣದಿಂದ ರಾತ್ರಿ 9.30ಕ್ಕೆ ಹೊರಡಲಿದ್ದು, ಮರುದಿನ ಬೆಳಗ್ಗೆ 7.30ಕ್ಕೆ ಕಾಚಿಗೂಡಾಕ್ಕೆ ತಲುಪಲಿದೆ.

Indian Railways

ಡಿಸೆಂಬರ್ 23, 25, 27, 29, 31, ಜನವರಿ 2 ಮತ್ತು 4ರಂದು ಈ ರೈಲುಗಳು ಸಂಚರಿಸಲಿವೆ. ಬೆಂಗಳೂರು ಕಾಂಟೋನ್ಮೆಂಟ್ ಮತ್ತು ಯಲಹಂಕ ನಿಲ್ದಾಣಗಳಲ್ಲಿ ರೈಲು ನಿಲುಗಡೆಗೊಳ್ಳಲಿದೆ ಎಂದು ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. [ನಿಜಾಮುದ್ದೀನ್ - ತಿರುವನಂತಪುರಂ ಮಧ್ಯೆ ವಿಶೇಷ ರೈಲು]

ಕಾಚಿಗೂಡಾದಿಂದ ಬೆಂಗಳೂರಿಗೆ ಮರಳಲು ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದ್ದು ಕಾಚಿಗೂಡಾದಿಂದ ಸಂಜೆ 5.30ಕ್ಕೆ ಹೊರಡುವ ರೈಲು ಮರುದಿನ ಬೆಳಗ್ಗೆ 4 ಗಂಟೆಗೆ ಬೆಂಗಳೂರಿಗೆ ತಲುಪಲಿದೆ. ಡಿ. 24, 26, 28, 30, ಜನವರಿ 1, 3 ಮತ್ತು 5ರಂದು ಈ ರೈಲು ಸಂಚರಿಸಲಿದೆ.

English summary
South Western Railway will run special trains to clear the Christmas holiday rush. Bengaluru-Kacheguda premium super-fast special express will leave the City at 9.30 pm and will arrive in Kacheguda at 7.30 am the next day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X