ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳ್ಳರ ಹಾವಳಿ: RCB ಪಂದ್ಯದ ವೇಳೆ 50ಕ್ಕೂ ಹೆಚ್ಚು ಫೋನ್ ಕಳವು ಆರೋಪ
ಬೆಂಗಳೂರು: ಸಿಲಿಕಾನ್ ಸಿಟಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್ ರೈಸರ್ಸ್ ಹೈದರಾಬಾದ್ (SRH) ನಡುವಿನ ಐಪಿಎಲ್ ಪಂದ್ಯದ ವೇಳೆ ಭಾರೀ ಪ್ರಮಾಣದ ಮೊಬೈಲ್ ಫೋನ್‌ಗಳು ಕಳ್ಳತನವಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಇದು ಕೇವಲ ಸಣ್ಣ ಕಳ್ಳತನವಲ್ಲ, ಇದೊಂದು "ಸಂಘಟಿತ ಅಪರಾಧ" ಎಂದು ಸಂತ್ರಸ್ತ ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ರೀತು ತಿವಾರಿ ಎಂಬುವವರು ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಪಂದ್ಯದ ಮೊದಲ ಇನಿಂಗ್ಸ್ ವಿರಾಮದ ಸಮಯದಲ್ಲಿ ಅವರ ಪತಿ ನೀರು ತರಲು ಹೋದಾಗ, ಸೀಟಿನ ಮೇಲಿದ್ದ ಫೋನ್ ನಾಪತ್ತೆಯಾಗಿದೆ. ಕೇವಲ ಇವರೊಬ್ಬರದೇ ಅಲ್ಲ, ಕ್ರೀಡಾಂಗಣದ P3 ಸ್ಟ್ಯಾಂಡ್‌ನಿಂದ ಸುಮಾರು 50ರಿಂದ 60 ಮೊಬೈಲ್ ಫೋನ್‌ಗಳು ಕಳ್ಳತನವಾಗಿವೆ ಎಂದು ಅವರು ಆರೋಪಿಸಿದ್ದಾರೆ.

ಪೊಲೀಸರ ವಿರುದ್ಧ ಅಸಮಾಧಾನ
"ನಾವು ಸಹಾಯಕ್ಕಾಗಿ ಕ್ರೀಡಾಂಗಣದಲ್ಲಿದ್ದ ಪೊಲೀಸರ ಬಳಿ ಹೋದಾಗ ಅವರು ಯಾವುದೇ ಆಸಕ್ತಿ ತೋರಿಸಲಿಲ್ಲ. ನಂತರ ಪೊಲೀಸ್ ಠಾಣೆಗೆ ಹೋದಾಗ ಅಲ್ಲಿ ನೂರಾರು ಜನರು ಇದೇ ರೀತಿಯ ದೂರು ನೀಡಲು ಸಾಲುಗಟ್ಟಿ ನಿಂತಿರುವುದನ್ನು ನೋಡಿ ಬೆಚ್ಚಿಬಿದ್ದೆವು" ಎಂದು ರೀತು ವಿಡಿಯೋದಲ್ಲಿ ತಿಳಿಸಿದ್ದಾರೆ. ಕ್ರೀಡಾಂಗಣದಂತಹ ಬಿಗಿ ಭದ್ರತೆ ಇರುವ ಜಾಗದಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಫೋನ್‌ಗಳು ಕಳ್ಳತನವಾಗಿರುವುದು ಭದ್ರತಾ ಲೋಪವನ್ನು ಎತ್ತಿ ತೋರಿಸುತ್ತದೆ. "ಇದು ವ್ಯವಸ್ಥಿತವಾಗಿ ನಡೆಯುತ್ತಿರುವ ಸಂಘಟಿತ ಅಪರಾಧದಂತೆ ಕಾಣುತ್ತಿದೆ. ಇಷ್ಟು ಜನರ ನಂಬಿಕೆ ಮತ್ತು ಭದ್ರತೆಗೆ ಧಕ್ಕೆ ಬಂದಿರುವುದು ಸರಿಯಲ್ಲ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಈ ಬಗ್ಗೆ ಎಫ್‌ಐಆರ್ ದಾಖಲಾಗಿದ್ದು, ಬೆಂಗಳೂರು ಪೊಲೀಸರು ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಕಳೆದುಹೋದ ವಸ್ತುಗಳನ್ನು ಪತ್ತೆಹಚ್ಚಬೇಕು ಮತ್ತು ಅಪರಾಧಿಗಳನ್ನು ಬಂಧಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಅಲ್ಲದೆ ಕ್ರೀಡಾಂಗಣಕ್ಕೆ ಬರುವ ಕ್ರಿಕೆಟ್ ಅಭಿಮಾನಿಗಳು ತಮ್ಮ ವಸ್ತುಗಳ ಬಗ್ಗೆ ಜಾಗರೂಕರಾಗಿರುವಂತೆ ಅವರು ಎಚ್ಚರಿಸಿದ್ದಾರೆ.
ರೀತು ತಿವಾರಿ ಅವರ ಪ್ರಕಾರ, ಪೊಲೀಸರು ಈಗಾಗಲೇ 10ರಿಂದ 12 ಹುಡುಗರನ್ನು ವಶಕ್ಕೆ ಪಡೆದಿದ್ದಾರೆ. ಇವರೆಲ್ಲರೂ ಅಪ್ರಾಪ್ತ ವಯಸ್ಕರಾಗಿದ್ದು ಕ್ರೀಡಾಂಗಣದ ಒಳಗೆ ಯಾರಿಗೂ ಸಂಶಯ ಬಾರದಂತೆ ಆರ್‌ಸಿಬಿ ಜರ್ಸಿ ಧರಿಸಿದ್ದರು. ಅಷ್ಟೇ ಅಲ್ಲದೆ, ಇವರ ಬಳಿ ಕ್ರೀಡಾಂಗಣ ಪ್ರವೇಶಿಸಲು ಅಧಿಕೃತ ಕಾಂಪ್ಲಿಮೆಂಟರಿ ಟಿಕೆಟ್‌ಗಳೂ ಇದ್ದವು ಎಂದು ದೂರಿದ್ದಾರೆ.
ಎರಡನೇ ಇನಿಂಗ್ಸ್ ಸಮಯದಲ್ಲಿ ಕಳ್ಳತನ
ತನಿಖೆಯ ವೇಳೆ ತಿಳಿದುಬಂದಂತೆ, ಹೆಚ್ಚಿನ ಕಳ್ಳತನಗಳು ಪಂದ್ಯದ ಎರಡನೇ ಇನಿಂಗ್ಸ್ ಸಮಯದಲ್ಲಿ ನಡೆದಿವೆ. ಈ ವೇಳೆ ಜನರು ನೀರು ಅಥವಾ ಉಪಹಾರ ತರಲು ತಮ್ಮ ಸೀಟು ಬಿಟ್ಟು ಹೋದಾಗ, ಈ ತಂಡವು ಕ್ಷಣಾರ್ಧದಲ್ಲಿ ಮೊಬೈಲ್‌ಗಳನ್ನು ಎಗರಿಸುತ್ತಿತ್ತು. ಕಳ್ಳತನದ ನಂತರ ಈ ಕಿರಾತಕರು ತಕ್ಷಣವೇ ಕ್ರೀಡಾಂಗಣದಿಂದ ಹೊರಬರುತ್ತಿದ್ದರು ಎನ್ನಲಾಗಿದೆ. ನಾನು ಗೂಗಲ್‌ನಲ್ಲಿ ಹುಡುಕಿದಾಗ, ಚೆನ್ನೈನ ಚಿದಂಬರಂ ಮತ್ತು ಮುಂಬೈನ ವಾಂಖೆಡೆ ಕ್ರೀಡಾಂಗಣಗಳಲ್ಲೂ ಇದೇ ರೀತಿಯ ಘಟನೆಗಳು ನಡೆದಿರುವುದು ಬೆಳಕಿಗೆ ಬಂದಿದೆ. ಮೊಬೈಲ್ ಕಳ್ಳರ ಜಾಲವು ದೇಶಾದ್ಯಂತ ನಡೆಯುವ ಎಲ್ಲ ಐಪಿಎಲ್ ಪಂದ್ಯಗಳ ಮೇಲೆ ಕಣ್ಣಿಟ್ಟಿದೆ ಎಂದು ರೀತು ಕಳವಳ ವ್ಯಕ್ತಪಡಿಸಿದ್ದಾರೆ.
ಸದ್ಯ ಪೊಲೀಸರು ಕ್ರೀಡಾಂಗಣದ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದು, ಈ ಜಾಲದ ಹಿಂದೆ ಇರುವ ಪ್ರಮುಖ ವ್ಯಕ್ತಿಗಳನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ. ಅಪ್ರಾಪ್ತರಿಗೆ ಕಾಂಪ್ಲಿಮೆಂಟರಿ ಟಿಕೆಟ್‌ಗಳು ಹೇಗೆ ಸಿಕ್ಕವು ಮತ್ತು ಇವರ ಹಿಂದೆ ದೊಡ್ಡ ಮಾಫಿಯಾ ಕೆಲಸ ಮಾಡುತ್ತಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಸಂತ್ರಸ್ತ ಮಹಿಳೆ ರೀತು ತಿವಾರಿ ಅವರು ಹಂಚಿಕೊಂಡ ಇನ್‌ಸ್ಟಾಗ್ರಾಂ ವಿಡಿಯೋ ಮತ್ತು ಮಾಹಿತಿ ಈಗಾಗಲೇ 3,14,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ. ಸುಮಾರು 10,000ಕ್ಕೂ ಹೆಚ್ಚು ಜನರು ಲೈಕ್ ಮಾಡುವ ಮೂಲಕ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ, ಐಪಿಎಲ್ ಪಂದ್ಯಗಳ ವೇಳೆ ಕ್ರೀಡಾಂಗಣದಲ್ಲಿರುವ ಭದ್ರತೆಯ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
-
IPL 2026 Free Ticket: ರಾಜ್ಯದ ಶಾಸಕರಿಗೆ ಪ್ರತಿ ಪಂದ್ಯಕ್ಕೂ 3 ಟಿಕೆಟ್ ಉಚಿತ; ಡಿ.ಕೆ.ಶಿವಕುಮಾರ್ -
ಆರ್‌ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ಲೈವ್ ಕಾಮೆಂಟರಿಯಲ್ಲೇ ವೀರೇಂದರ್ ಸೆಹ್ವಾಗ್-ಆರ್.ಅಶ್ವಿನ್ ಕಿತ್ತಾಟ; ಹಿರಿಯ ಆಟಗಾರರ ವರ್ತನೆಗೆ ಕ್ರೀಡಾಭಿಮಾನಿಗಳ ಆಕ್ರೋಶ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
Virat Kohli: ಅನುಷ್ಕಾ ಶರ್ಮಾಗೆ ಫ್ಲೈಯಿಂಗ್ ಕಿಸ್ ಕೊಟ್ಟ ಬಳಿಕ ತನ್ನ ಆಟದ ಯಶಸ್ಸಿನ ರಹಸ್ಯ ಬಿಚ್ಚಿಟ್ಟ ವಿರಾಟ್ ಕೊಹ್ಲಿ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್‌ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
ಚಿನ್ನಸ್ವಾಮಿಯಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ ಹೆಸರಿಗೆ ಅವಮಾನ: ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾದ 'ತುದಿ' ಪದ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
ಸಿಎಸ್ಕೆ ಕಪ್ 5 ರೂಪಾಯಿ, ಆರ್‌ಸಿಬಿ ಟ್ರೋಫಿ ಬೆಲೆ 5 ಕೋಟಿ ರೂಪಾಯಿ: ಪುಟ್ಟ ಬಾಲಕನ ಹೇಳಿಕೆ ಭಾರೀ ವೈರಲ್ -
Who is Jacob Duffy?: ಐಪಿಎಲ್ 2026 ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಪರ ಮಿಂಚಿದ ಜೇಕಬ್ ಡಫಿ ಯಾರು? -
Dawood Ibrahim: "ರಿಯಲ್ ಡಾನ್ ದಾವೂದ್ ಇಬ್ರಾಹಿಂ" ಸ್ಟಿಕ್ಕರ್ ಹಾಕಿಸಿದ್ದ ಬಸ್ ಚಿಕ್ಕಮಗಳೂರಿನಲ್ಲಿ ಪೊಲೀಸ್ ವಶಕ್ಕೆ -
Siddaramaiah: ಶಿಸ್ತು, ಪ್ರಾಮಾಣಿಕತೆ ಮತ್ತು ಮಾನವೀಯತೆ ಪೊಲೀಸ್ ಸೇವೆಯ ಆಧಾರ: ಸಿದ್ದರಾಮಯ್ಯ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ












Click it and Unblock the Notifications