• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಿಕ್ಷಾಟನೆ ದಂಧೆ ಬಗ್ಗೆ ಗಮನಹರಿಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಜಡ್ಜ್ ಸೂಚನೆ

|

ಬೆಂಗಳೂರು,ಜನವರಿ 20: ಭಿಕ್ಷಾಟನೆ ದಂಧೆ ಕುರಿತು ಗಮನಹರಿಸಿ ಎಂದು ರಾಜ್ಯ ಸರ್ಕಾರಕ್ಕೆ ಗಮನಹರಿಸಿ ಎಂದು ಹೈಕೋರ್ಟ್ ಜಡ್ಜ್ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿದೆ.

ಶಾಲೆಗಳಿಂದ ಹೊರಗುಳಿದ ಮತ್ತು ಬಸ್ ನಿಲ್ದಾಣಗಳಲ್ಲಿ, ಮಾರುಕಟ್ಟೆಗಳಲ್ಲಿ ಕೆಲಸ ಮಾಡುತ್ತಿರುವ ಮಕ್ಕಳು ಮತ್ತು ಭಿಕ್ಷೆ ಬೇಡುತ್ತಿರುವ ಮಕ್ಕಳು ಸರಿಯಾದ ಶಿಕ್ಷಣವನ್ನು ಪಡೆಯುತ್ತಿದ್ದಾರೆಯೇ ಎಂಬುದನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್ ನ್ಯಾ. ವಿ.ಶ್ರೀಶಾನಂದ ಹೇಳಿದ್ದಾರೆ.

ಮಕ್ಕಳು ಭಿಕ್ಷೆ ಬೇಡುವುದನ್ನು ಹಾಗೂ ಆಟಿಕೆ ಮಾರುವುದನ್ನು ತಡೆಯುವ ಉದ್ದೇಶದಿಂದ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬಿಬಿಎಂಪಿ ಹಾಗೂ ಇನ್ನಿತರ ಇಲಾಖೆಗಳು ಸೇರಿ ಮಾಹಿತಿ ಸಂಗ್ರಹಿಸಲಿವೆ. ವಲಯವಾರು ತಂಡಗಳನ್ನು ರಚಿಸಿ ಈ ಸಮೀಕ್ಷೆ ಪ್ರಾರಂಭಿಸಲಾಗುವುದು' ಎಂದರು.

ಸಿಗ್ನಲ್‌ಗಳಲ್ಲಿ, ಬೀದಿಗಳಲ್ಲಿ, ದೇವಸ್ಥಾನ, ಮಾರುಕಟ್ಟೆ, ಬಸ್ ನಿಲ್ದಾಣ, ರೈಲು ನಿಲ್ದಾಣ, ಹೋಟೆಲ್, ರೆಸ್ಟೋರೆಂಟ್‌ಗಳ ಬಳಿ ಮಕ್ಕಳು ಭಿಕ್ಷೆ ಬೇಡುವುದು, ಆಟಿಕೆಗಳನ್ನು ಮಾರುವುದು ಬಹಳ ಸೂಕ್ಷ್ಮ ವಿಚಾರ. ಇದಕ್ಕೆ ಕಾರಣಗಳೇನು, ಅವರ ಹಿನ್ನೆಲೆ ಏನು, ಎಲ್ಲಿಂದ ಬಂದಿದ್ದಾರೆ, ಎಲ್ಲಿ ನೆಲೆಸಿದ್ದಾರೆ, ಮಕ್ಕಳ ತಂದೆ-ತಾಯಿ ಏನು ಮಾಡುತ್ತಿದ್ದಾರೆ.

ಎಂಬ ಬಗ್ಗೆ ನಿಖರ ಮಾಹಿತಿಯನ್ನು ಕಲೆಹಾಕಬೇಕು. ಸಮೀಕ್ಷೆ ವೇಳೆ ಮಕ್ಕಳ ಜೊತೆ ಏಕಾಏಕಿ ಪ್ರಶ್ನೆ ಕೇಳದೆ ಸಂಯಮದಿಂದ ಅವರ ಜೊತೆ ಬೆರೆತು ಮಾಹಿತಿ ಸಂಗ್ರಹಿಸಬೇಕು' ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಹೇಳಿದರು.

ಮಕ್ಕಳು ಭಿಕ್ಷಾಟನೆ ಹಾಗೂ ಬೀದಿ ವ್ಯಾಪಾರದಲ್ಲಿ ತೊಡಗುವುದನ್ನು ತಡೆಯುವ ಕುರಿತು ನಗರ ಕಾರ್ಯಪಡೆ ಸಮಿತಿಯ ಸದಸ್ಯರಿಗಾಗಿ ಏರ್ಪಡಿಸಿದ್ದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾಭ್ಯಾಸದಲ್ಲಿ ತೊಡಗಬೇಕಾದ ಮಕ್ಕಳು ನಗರದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವುದು, ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವುದಾದರೂ ಏಕೆ. ಈ ಬಗ್ಗೆ ನಾವೆಲ್ಲಾ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಇದಕ್ಕೆಲ್ಲಾ ಪರಿಹಾರ ಕಂಡುಕೊಳ್ಳಲು ನಿಸ್ವಾರ್ಥದಿಂದ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಸಲುವಾಗಿ 'ಮನೆ ಬಾಗಿಲಿಗೆ ಶಾಲೆ' ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ.

   Vijayapura: ಉತ್ತರ ಕರ್ನಾಟಕ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ padayatraಗೆ ಚಾಲನೆ | Oneindia Kannada

   ಬಸ್‌ಗಳನ್ನೇ ಶಾಲೆಯನ್ನಾಗಿ ಪರಿವರ್ತಿಸಿ ವಿದ್ಯಾಭ್ಯಾಸ ನೀಡಲು ಬಳಸಲಾಗುತ್ತದೆ. ಈ ಸಂಬಂಧ ಈಗಾಗಲೇ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರ ಜೊತೆ ಮಾತುಕತೆ ನಡೆಸಲಾಗಿದೆ. ಈ ಕಾರ್ಯಕ್ರಮಕ್ಕಾಗಿ ಬಿಎಂಟಿಸಿಯಿಂದ ಪಾಲಿಕೆಯು 10 ಬಸ್‌ಗಳನ್ನು ಪಡೆದಿದೆ. ಅವುಗಳಿಗೆ ಹೊಸ ರೂಪ ನೀಡಲಾಗಿದೆ' ಎಂದು ಬಿಬಿಎಂಪಿ ಆಯುಕ್ತರು ಮಾಹಿತಿ ನೀಡಿದರು.

   English summary
   The government should ensure that the children who have dropped out of schools and are working at bus stands, markets and are even begging, get proper education, said Karnataka High Court Judge Justice V Srishananda.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X