ವಾಯುಭಾರ ಕುಸಿತ : ರಾಜ್ಯದ ಹಲವೆಡೆ ಈ ವಾರ ಮಳೆ ಖಚಿತ
ಬೆಂಗಳೂರು, ಜುಲೈ, 18 : ರಾಜ್ಯದ ಕರಾವಳಿ ಮತ್ತು ಒಳನಾಡಿನ ಹಲವು ಭಾಗಗಳಲ್ಲಿ ಮುಂದಿನ ಒಂದು ವಾರ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಗರದಲ್ಲಿ ಕಳೆದೆರಡು ದಿನಗಳಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಅಲ್ಲಲ್ಲಿ ತುಂತುರು ಮಳೆಯಾಗುತ್ತಿದೆ. ಮುಂದಿನ 1 ವಾರ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಎಲ್ಲೆಡೆ ವರುಣನ ಆಗಮನವಾಗಲಿದೆ ಎಂದು ಇಲಾಖೆ ವರದಿ ನೀಡಿದೆ.[ದೆಹಲಿಯಲ್ಲಿ ಮಳೆ ಅವಾಂತರದ ಚಿತ್ರಗಳು]

ದಕ್ಷಿಣ ಕನ್ನಡ, ಉತ್ತರ ಕನ್ನಡ , ಉಡುಪಿ, ಕೊಡಗು, ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿಯೂ ಸಾಧಾರಣ ಮಳೆ ಬೀಳಲಿದೆ. ಬಹುತೇಕ ಶನಿವಾರದಿಂದ ಆರಂಭಗೊಂಡು ಐದಾರು ದಿನಗಳ ಕಾಲ ವರ್ಷಧಾರೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ನಿವೃತ್ತ ನಿರ್ದೇಶಕ ಬಿ.ಪುಟ್ಟಣ್ಣ ತಿಳಿಸಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ಈಗಾಗಲೇ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪ್ರಭಾವದಿಂದ ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ಒಳನಾಡಿನ ಪ್ರದೇಶಗಳಲ್ಲಿ ಮಳೆ ಆರಂಭವಾಗಿದೆ. ಆಗುಂಬೆಯಲ್ಲಿ 9 ಸೆಂ.ಮೀ, ಗೇರುಸೊಪ್ಪೆ ಮತ್ತು ಶೃಂಗೇರಿಯಲ್ಲಿ ತಲಾ 7 ಸೆಂ.ಮೀ, ಸುಬ್ರಹ್ಮಣ್ಯ, ಭಾಗಮಂಡಲದಲ್ಲಿ ತಲಾ 6 ಸೆಂ.ಮೀ, ಧರ್ಮಸ್ಥಳ, ಸಿದ್ಧಾಪುರ, ಲಿಂಗನಮಕ್ಕಿಯಲ್ಲಿ ತಲಾ 5 ಸೆಂ.ಮೀ ಮಳೆಯಾಗಿದೆ.












Click it and Unblock the Notifications