River Project: ಕರ್ನಾಟಕದ 'ಬೆಡ್ತಿ-ವರದಾ' ನದಿ ಜೋಡಣೆಗೆ ಕೇಂದ್ರ ಸಚಿವರ ಸ್ಪಂದನೆ..
Varada and Bedti River: ಬೆಡ್ತಿ ವರದಾ ನದಿ ಜೋಡಣೆಗೆ ಜನ ಶಕ್ತಿ ಪ್ರಕಟ ಆಗಿದೆ. ಜನ ಶಕ್ತಿಯ ಮುಂದೆ ಯಾವುದೂ ದೊಡ್ಡದಿಲ್ಲ. ಹಳ್ಳ ಹಳ್ಳ ಸೇರಿ ನದಿಯಾದಂತೆ ರೈತರ ಹಳ್ಳ ದೊಡ್ಡ ನದಿಯಾಗಿ ಹರಿಯುತ್ತದೆ. ಈ ಯೋಜನೆಗಾಗಿ ಪಕ್ಷಾತೀತ ಹೋರಾಟ ಅಗತ್ಯ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಬಹುವರ್ಷಗಳ ನದಿ ಜೋಡಣೆ ಬಗ್ಗೆ ಮಾಹಿತಿ ನೀಡಿದರು.
ಹಾವೇರಿಯ ಶ್ರೀ ಹುಕ್ಕೇರಿಮಠದ ಆವರಣದಲ್ಲಿ ಏರ್ಪಡಿಸಿದ್ಧ ವರದಾ ಹಾಗೂ ಬೇಡ್ತಿ ನದಿಗಳ ಜೋಡಣೆ ಕಾಮಗಾರಿಯ ಕುರಿತಾದ ಮಹತ್ವದ ಸಭೆಯಲ್ಲಿ ಅವರು ಮಾತನಾಡಿದರು. ನೀರು ಭಗವಂತ ಕೊಟ್ಟಿರುವ ದೊಡ್ಡ ವರ. ನೀರಿನ ಮಹತ್ವ ಏನಿದೆ ಎಂದರೆ ನೀರಿಗೆ ಸಾವಿಲ್ಲ. ನೀರು ಬೇರೆ ಬೇರೆ ರೂಪ ತಾಳಿದರೂ ಮತ್ತೂ ಈ ಪರಿಸರದಲ್ಲಿ ಇರುತ್ತದೆ. ನಾವು ಶಾಲೆಯಲ್ಲಿ ಇದ್ದಾಗ ವಾಟರ್ ಸೈಕಲ್ ಅಂತ ಹೇಳುತ್ತಿದ್ದರು. ನೀರು ಆವಿಯಾಗಿ ಮೋಡವಾಗಿ ಮಳೆಯಾಗಿ ಮತ್ತೆ ಹಳ್ಳ, ನದಿಯಾಗಿ ಹರಿಯತ್ತದೆ. ಮನುಷ್ಯ ಪ್ರಾಣಿಗಳಿಗೆ ಬದುಕಿನ ದಾಹ ತೀರಿಸಲು ನೀರು ಬೇಕು. ನಮ್ಮ ಬದುಕಿಗೆ ಉದ್ಯೋಗಕ್ಕೆ, ಬೇರೆ ವಸ್ತುಗಳ ತಯಾರಿಕೆಗೆ ನೀರು ಬೇಕು.

ವರದಾ-ಬೆಡ್ತಿ ನದಿ ಜೋಡಣೆ: ಕೇಂದ್ರ ಸಕಾರಾತ್ಮಕ ಸ್ಪಂದನೆ
ಬೆಡ್ತಿ ನದಿ ದೊಡ್ಡ ಪ್ರಮಾಣದಲ್ಲಿ ನೀರು ಉತ್ಪಾದನೆ ಮಾಡುವ ನದಿ. ನದಿಜೋಡಣೆ ಯೋಜನೆಯ ವಾದ ಸುಮಾರು ವರ್ಷಗಳಿಂದ ಇದೆ. ನದಿ ಜೋಡಣೆ ವಿಚಾರವನ್ನು ರಾಷ್ಟ್ರೀಯ ವಿಚಾರವಾಗಿ ಮಾಡಿದವರು ಹಿಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ನದಿ ಜೋಡಣೆ ವಿಚಾರಗಳು ಬೇರೆ ಕಡೆಯೂ ಇದೆ. ವಿಂದ್ಯ ಪರ್ವತದ ಕೆಳಗಡೆ ಇರುವ ಯೋಜನೆಗಳಿಗೆ ಬಹಳ ದೊಡ್ಡ ಪ್ರಮಾಣದ ಸವಾಲು ಇದೆ. ನದಿ ಜೋಡಣೆಯಿಂದ ಒಂದು ಪ್ರವಾಹ ನಿಯಂತ್ರಿಸುವುದು ಮತ್ತು ಎಲ್ಲಿ ನೀರಿಲ್ಲವೋ ಅಲ್ಲಿ ನೀರು ಬಳಕೆ ಮಾಡಿಕೊಳ್ಳುವುದು. ವರದಾ -ಬೆಡ್ತಿ ನದಿ ಜೋಡಣೆ ಮೊದಲನೇ ಪ್ರಾಸ್ಪೆಕ್ಟಿವ್ ಯೋಜನೆಯಲ್ಲಿ ಇದೆ ಎಂದು ವಿವರಿಸಿದರು.
2005 ರಲ್ಲಿ ಅದಕ್ಕೆ ಮಂಜುನಾಥ ಕೊನ್ನೂರು ಕಾರಜೋಳ ಸಾಹೇಬರು ಜಾರಿ ಮಾಡಲು ಮುಂದಾದಾಗ ಬಹಳ ವಿರೋಧ ವ್ಯಕ್ತವಾಯಿತು. ಇದಕ್ಕೆ ಪರಿಸರದ ಸಮಸ್ಯೆ ಏನಿದೆ ಅಂತ ನಾನು ಜಲ ಸಂಪನ್ಮೂಲ ಸಚಿವ ಆಗಿದ್ದಾಗ ಪರಿಶೀಲಿಸಿ 2017 ರಲ್ಲಿ ಕೆಲವು ಬದಲಾವಣೆ ಮಾಡಲಾಯಿತು. 2022 ರಲ್ಲಿ ಮತ್ತೊಂದು ಬದಲಾವಣೆ ಮಾಡಲಾಯಿತು. ಎರಡು ಪ್ರಸ್ತಾವನೆಗಳಿವೆ ಒಂದು ವರದಾ ಬೆಡ್ತಿ, ಇನ್ನೊಂದು ಬೆಡ್ತಿ ಧರ್ಮಾ ವರದಾ ಲಿಂಕ್ ಯೋಜನೆ. ಇನ್ನೂ ಡಿಪಿಆರ್ ಸಹ ಅಗಿಲ್ಲ. ಫ್ರೀ ಫಿಜಿಬಲ್ ರಿಪೋರ್ಟ್ ಇದೆ. ಬೆಂಗಳೂರಿನಲ್ಲಿ ಇದನ್ನು ಒಪ್ಪಿಗೆ ಕೊಟ್ಟಿದ್ದಾರೆ. ನಾನು ಕೇಂದ್ರ ನೀರಾವರಿ ಸಚಿವ ಸಿ.ಆರ್. ಪಾಟಿಲರು, ರಾಜ್ಯ ಸಚಿವ ವಿ ಸೋಮಣ್ಣ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ. ಅವರಿಂದ ಒಂದು ವಾರದಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ಬರುವ ಭರವಸೆ ಇದೆ ಎಂದು ಹೇಳಿದರು.
ಬತ್ತಿ ಹೋಗುವ ನದಿಗಳ ನೀರು ಬಳಸುವಂತಾಗಬೇಕು
ಕೆರೆಗಳು ಮತ್ತು ಹಳ್ಳಗಳ ನಡುವೆ ನದಿ ದೊಡ್ಡ ಸಂಪರ್ಕ. ನದಿಗಳ ನಿರ್ವಹಣೆಯಿಂದ ನೀರಿನ ಬಳಕೆ ಮಾಡಿಕೊಳ್ಳಬೇಕು. ಹಲವಾರು ನದಿಗಳು ಸಮುದ್ರವನ್ನೇ ಸೇರುವುದಿಲ್ಲ ಹಲವಾರು ನದಿಗಳು ಬತ್ತಿ ಹೋಗುತ್ತಿವೆ. ಅದಕ್ಕಾಗಿ ಬೇಸಿಗೆಯಲ್ಲಿ ತುಂಗಭದ್ರಾ ಭಾಗದಲ್ಲಿ ಹಾವೇರಿ, ಗದಗ, ಶಿರಹಟ್ಟಿ ರಾಣೆಬೆನ್ನೂರು ನಗರಗಳಿಗೆ ನಿರಿನ ಸಮಸ್ಯೆ ಇದೆ. ಎರಡನೇ ಬೆಳೆಗೆ ನೀರು ಸಿಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಪಶ್ಚಿಮದಲ್ಲಿ ಹುಟ್ಟುವ ನದಿ ನೀರಿನ ಬಳಕೆಯದ್ದೇ ಸವಾಲು..
ಕರ್ನಾಟಕದ ಮಟ್ಟಿಗೆ ನಿಸರ್ಗ ನಮಗೆ ಕನಿಕರ ತೋರಿದೆ. ಬಹುತೇಕ ನದಿಗಳು ಪಶ್ಚಿಮ ಘಟ್ಟದಲ್ಲಿ ಹುಟ್ಟುತ್ತವೆ. ಕೃಷ್ಣಾ, ತುಂಗ ಭದ್ರಾ ಪಶ್ಚಿಮದಲ್ಲಿ ಹುಟ್ಟಿ ಪೂರ್ವಕ್ಕೆ ಹರಿಯುತ್ತವೆ. ಕಾಳಿ, ನೇತ್ರಾವತಿ ನದಿಗಳು ಪಶ್ಚಿಮದಲ್ಲಿ ಹುಟ್ಟಿ ಪಶ್ಚಿಮಕ್ಕೆ ಹರಿಯುತ್ತವೆ. ಮಾನವನಿಗೆ ಒಂದು ಸವಾಲಿದೆ. ಕೆಲವೊಮ್ಮೆ ನಾವು ಆಡುವ ಮಾತು ಸಮಸ್ಯೆಗೆ ಪರಿಹಾರ ಆಗಬೇಕೆ ಹೊರತು ಸಮಸ್ಯೆ ಹುಟ್ಟುಹಾಕಬಾರದು. ಪಶ್ಚಿಮದಲ್ಲಿ ಹುಟ್ಟಿ ಪಶ್ಚಿಮಕ್ಕೆ ಹರಿಯುವ ನದಿಗಳ ಬಳಕೆ ಮಾಡಿಕೊಳ್ಳುವುದು ದೊಡ್ಡ ಸವಾಲಿದೆ. ಇಲ್ಲಿ ಪರಿಸರ, ಅರಣ್ಯ, ಜೀವ ವೈವಿಧ್ಯಕ್ಕೆ ಸಮಸ್ಯೆ ಆಗುತ್ತದೆ. ಸುಮಾರು ನೂರು ಎಕರೆ ಮುಳುಗಡೆ ಆಗುತ್ತದೆ ಎಂದರೆ ಅದಕ್ಕೆ ವಿರೋಧ ವ್ಯಕ್ತವಾಗಿ ಸುಪ್ರಿಂ ಕೋರ್ಟ್‌ಗೆ ಹೋಗುತ್ತದೆ. ಮಹಾದಾಯಿ ವಿಚಾರದಲ್ಲಿ ಕೇವಲ ಗೋವಾದವರು ವಿರೋಧಿಸಲಿಲ್ಲ ನಮ್ಮ ಕರ್ನಾಟಕದ ಪರಿಸರ ವಾದಿಗಳು ವಿರೋಧಿಸಿದ್ದರು ಎಂದು ತಿಳಿಸಿದರು.
ರೈತರಿಗೆ ನೀರಾವರಿ ಜ್ಞಾನ ಅಗತ್ಯ
ಡಿಪಿಆರ್ ಆದ ಮೇಲೆ ಎಷ್ಟು ನೀರು ಬಳಕೆ ಮಾಡಿಕೊಳ್ಳಬೇಕು ಹೀರೆಹಳ್ಳ, ಬೆಡ್ತಿ, ಶಾಲ್ಮಲಾ ಹಳ್ಳ ಇವೆ. ವರದಾ ನದಿಯಲ್ಲಿ ಎಷ್ಟು ನೀರು ಸಿಗುತ್ತದೆ ಅದು ನಮಗೆ ಬಳಕೆಗೆ ಬರುತ್ತದೆ. ಅದು ಹಾವೇರಿ ಜಿಲ್ಲೆಯಲ್ಲಿ ಬಳಕೆ ಮಾಡಿಕೊಳ್ಳಲು ಸಾಧ್ಯವಿದೆ.
ಅದರ ಜೊತೆಗೆ ಈ ನೀರನ್ನು ಎಲ್ಲಿ ಸಂಗ್ರಹ ಮಾಡುತ್ತೇವೆ ಎನ್ನುವುದು ಮುಖ್ಯ ಫಲವತ್ತಾದ ಭೂಮಿ ಮುಳುಗದಂತೆ ನೋಡಬೇಕು. ಪ್ರತಿಯೊಂದು ಹಂತದಲ್ಲಿ ನಾವು ಜಾಗೃತರಾಗಿ ಕೆಲಸ ಮಾಡಬೇಕು. ಈ ಯೋಜನೆಯ ಪ್ರತಿ ಹಂತದಲ್ಲಿ ಏನು ನಡೆಯುತ್ತದೆ ಎನ್ನುವುದು ಗೊತ್ತಾದಾಗ ನಾವು ಏನು ಮಾಡಬೇಕು ಎನ್ನುವುದು ತಿಳಿಯುತ್ತದೆ ಎಂದರು.
ನದಿ ಜೋಡಣೆಯಿಂದ ಉ.ಕ.ಕ್ಕೆ ತೊಂದರೆ ಆಗಲ್ಲ
ಬದಲಾದ ಯೋಜನೆಯಿಂದ ಉತ್ತರ ಕನ್ನಡ ಜಿಲ್ಲೆಗೆ ಯಾವುದೇ ತೊಂದರೆ ಯಾಗುವುದಿಲ್ಲ ಅಂತ ಅವರಿಗೆ ಮನವರಿಕೆ ಮಾಡಬೇಕು. ಪ್ರಾಮಾಣಿಕತೆ ಇದ್ದರೆ ಎಲ್ಲ ಸಮಸ್ಯೆಗೂ ಪರಿಹಾರ ಇದೆ. ಸುಮಾರು 26 ಟಿಎಂಸಿ ನೀರನ್ನು ನಾವು ಯಾವ ರೀತಿ ಪಡೆದುಕೊಳ್ಳಬೇಕು ಎನ್ನುವುದನ್ನು ಚಿಂತನೆ ಮಾಡಬೇಕು. ಇದು ಒಂದೇ ದಿನದಲ್ಲಿ ಅಗುವುದಿಲ್ಲ. ಸುದೀರ್ಘ ಪ್ರಕ್ರಿಯೆ ಇದೆ. ಅದಕ್ಕಾಗಿ ನಾವು ಸಿದ್ದರಾಗಬೇಕು.
ಬೇರೆ ರಾಜ್ಯದವರಂತೆ ನಾವು ಒಟ್ಟಾಗಬೇಕು
ಆಲಮಟ್ಟಿ ಎತ್ತರ ಹೆಚ್ಚಳ ಮಾಡಲು ಮಹಾರಾಷ್ಟ್ರದ ಎಲ್ಲ ಪಕ್ಷದ ಸದಸ್ಯರು ಒಟ್ಟಾಗಿ ವಿರೋಧಿಸಿದ್ದಾರೆ. ಕಾವೇರಿ ವಿಚಾರದಲ್ಲಿ ತಮಿಳುನಾಡಿನ ಎಲ್ಲ ಪಕ್ಷದ ಮುಖಂಡರು ಒಟ್ಟಾಗಿ ಬರುತ್ತಾರೆ. ನಮ್ಮ ರೈತರಿಗೆ ಕುಡಿಯುವ ನೀರು ಸಿಗುವಂತೆ ಮಾಡಲು ಎಲ್ಲರೂ ಸೇರಿ ಕೆಲಸ ಮಾಡಬೇಕು. ಅದಕ್ಕಾಗಿ ಎಲ್ಲಾ ಶಾಸಕರು, ರೈತ ಸಂಘದ ಸದಸ್ಯರು, ಸ್ವಾಮೀಜಿಗಳ ಆಶೀರ್ವಾದದಿಂದ ಒಂದು ಸಮಿತಿ ಮಾಡಿ ಮುಂದಿನ ಕಾರ್ಯ ಮಾಡಬೇಕು ಎಂದರು.
-
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಹೊಸ 800 ಕೆಪಿಎಸ್ ಶಾಲೆ, ಇಂಗ್ಲಿಷ್ ಭಾಷಾ ತರಬೇತಿ: ಕರ್ನಾಟಕ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭರಪೂರ ಘೋಷಣೆ -
Karnataka Budget 2026: 100 ಹೊಸ ಸ್ಕೈವಾಕ್, ಟನಲ್ ರಸ್ತೆ ಸೇರಿ ಕರ್ನಾಟಕ ಬಜೆಟ್ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು? -
ರೈತರಿಗೆ ಮಾಲ್, ಮಂಡ್ಯ ಸಾವಯ ಕೃಷಿ: ಅಡಿಕೆ - ತೆಂಗು ಬೆಳಗಾರರಿಗೂ ಬಂಪರ್, ಮೇಕೆದಾಟು ಯೋಜನೆಗೆ ಅಸ್ತು -
Karnataka Property: ಇ-ಆಸ್ತಿ, ಏಕೀಕೃತ ಆಸ್ತಿ ತೆರಿಗೆ ಸಂಯೋಜನೆ: ಕರ್ನಾಟಕದಲ್ಲಿ ಆಸ್ತಿ ನಿರ್ವಹಣೆಗೆ ಹೊಸ ನಿಯಮ -
Karnataka Budget 2026: ಕರ್ನಾಟಕ ಬಜೆಟ್ 2026: ಬಜೆಟ್ ಗ್ರಾತ ಕಳೆದ ಬಾರಿಗಿಂತ 40 ಸಾವಿರ ಕೋಟಿ ರೂ. ಹೆಚ್ಚಳ -
ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ, ವಿಶೇಷವೇನು












Click it and Unblock the Notifications