ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೇಂದ್ರ ಸರ್ಕಾರದಿಂದ ಫಾಸ್ಟ್ಯಾಗ್ ಮೂಲಕ ಹಗಲು ದರೋಡೆ: ಆಪ್

|
Google Oneindia Kannada News

ಬೆಂಗಳೂರು, ಫೆಬ್ರವರಿ.18: ದೇಶದಲ್ಲಿ ಹಗಲು ದರೋಡೆಯನ್ನು ಡಿಜಿಟಲೀಕರಣ ಮಾಡಿರುವ ಸರ್ಕಾರವು ಫಾಸ್ಟ್ಯಾಗ್ ಮೂಲಕ ಯೋಜಿತ ದರೋಡೆಗೆ ಇಳಿದಿದೆ. "ಇಂಡಿಯಾ ಶೈನಿಂಗ್ ರಸ್ತೆಗಳಿಗೆ, ಮೇಕ್ ಇನ್ ಇಂಡಿಯಾ ಫಾಸ್ಟ್ಯಾಗ್" ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ಘಟಕದ ಉಪಾಧ್ಯಕ್ಷ ಸುರೇಶ್ ರಾಥೋಡ್ ಲೇವಡಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾರಿಗೆ ಇಲಾಖೆ ರಸ್ತೆ ಶುಲ್ಕ ವಸೂಲಿ ಮಾಡುತ್ತಿದೆ. ಆದರೂ‌ ಟೋಲ್ ಶುಲ್ಕವನ್ನು ಯಾಕೆ ಕಟ್ಟಬೇಕು ಎಂದು ಪ್ರಶ್ನಿಸಿದರು. ನಮ್ಮದೆ ರೈತರ ನೆಲ ಕಸಿದುಕೊಂಡು, ನಮ್ಮದೇ ತೆರಿಗೆಯಿಂದ ನಿರ್ಮಾಣ ಮಾಡಿದ ರಸ್ತೆಗಳಿಗೆ ಈಗಾಗಲೇ ರಸ್ತೆ ತೆರಿಗೆ ಎಂದು ಕಟ್ಟುತ್ತಲೇ ಇದ್ದೇವೆ. ಆದರೂ ಟೋಲ್ ಫೀ ಏಕೆ? ಎಂದು ಪ್ರಶ್ನೆ ಮಾಡಿದರು.

ಫಾಸ್ಟ್ಯಾಗ್ ಸೃಷ್ಟಿಸಿದ ಗೊಂದಲ: ಟೋಲ್ ಪ್ಲಾಜಾಗಳಲ್ಲಿ ಗದ್ದಲಫಾಸ್ಟ್ಯಾಗ್ ಸೃಷ್ಟಿಸಿದ ಗೊಂದಲ: ಟೋಲ್ ಪ್ಲಾಜಾಗಳಲ್ಲಿ ಗದ್ದಲ

ಕೇಂದ್ರ ಸರ್ಕಾರವು ರಸ್ತೆ ನಿರ್ಮಾಣ ಕಂಪೆನಿಗಳ ಅಡಿಯಾಳಾಗಿದ್ದು, 18 ವರ್ಷವಿದ್ದ ಟೋಲ್ ಸಂಗ್ರಹದ ಗುರಿಯನ್ನು 30 ವರ್ಷಕ್ಕೆ ಏರಿಕೆ ಮಾಡಿದೆ. ಕೇಂದ್ರ ಸರ್ಕಾರದ ಹಗಲು ದರೋಡೆಗೆ ಇದೊಂದು ಉದಾಹರಣೆ ಸಾಕು ಎಂದರು.

Central Govt Is Doing Daylight robbery From Fastag, Says AAP

ಪ್ರತಿನಿತ್ಯ 105 ಕೋಟಿಗೂ ಅಧಿಕ ಟೋಲ್ ವಸೂಲಿ:

ಭಾರತದಲ್ಲಿ ದಿನವೊಂದಕ್ಕೆ 105 ಕೋಟಿ‌ಗೂ ಅಧಿಕ ಟೋಲ್ ವಸೂಲಿಯಾಗುತ್ತಿದೆ. ಇಷ್ಟು ವರ್ಷಗಳ ಕಾಲ ವಸೂಲಿ ಮಾಡಿದ ಹಣ ಎಲ್ಲಿ ಹೋಯಿತು. ಟೋಲ್ ರಸ್ತೆ ಬಳಸಲು ಇಷ್ಟ ಪಡದವರಿಗೆ ಪರ್ಯಾಯ ಸರ್ವೀಸ್ ರಸ್ತೆಗಳನ್ನು ನಿರ್ಮಿಸಿ ಕೊಡುವ ಜವಾಬ್ದಾರಿ‌ ರಸ್ತೆ ನಿರ್ಮಾಣ ಕಂಪೆನಿಗಳ ಮೇಲಿದೆ. ಆದರೂ ಬಹುತೇಕ ಕಡೆ ಈ ನಿಯಮ ಪಾಲಿಸಿಲ್ಲ. ಉದಾಹರಣೆಗೆ- ನೆಲಮಂಗಲ- ತುಮಕೂರು ಹೆದ್ದಾರಿ ಅತ್ಯಂತ ಕಳಪೆಯಾಗಿದ್ದು, ಹೆದ್ದಾರಿ ಎಂಬ ಪದಕ್ಕೆ ಅವಮಾನ ಎನ್ನುವಂತಿದೆ. ಹೀಗಿದ್ದರೂ ಟೋಲ್ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾರ್ವಜನಿಕರಿಂದ ಹಣ ದೋಚುವ ಕೃತ್ಯ:

ಕರ್ನಾಟಕದಲ್ಲಿ ಬೆರಳೆಣಿಕೆಯಷ್ಟು ರಸ್ತೆಗಳು ಮಾತ್ರ ಟೋಲ್ ಮುಕ್ತವಾಗಿವೆ. ಎಲ್ಲಾ ಕಡೆಗಳಲ್ಲೂ ಜನಸಾಮಾನ್ಯರ ಹಣವನ್ನು ದೋಚಲಾಗುತ್ತಿದೆ. ರಾಜ್ಯ ಹೆದ್ದಾರಿಗಳಲ್ಲೂ ಟೋಲ್ ಸಂಗ್ರಹಕ್ಕೆ ಸಿಎಂ ಯಡಿಯೂರಪ್ಪ ಮೊದಲ ಬಾರಿ ಅಧಿಕಾರ ಹಿಡಿದಾಗ ಮುನ್ನುಡಿ ಬರೆದಿದ್ದರು. ರಾಷ್ಟ್ರೀಯ ಹೆದ್ದಾರಿ ಸುಲಿಗೆಗೆ ಬೇಸತ್ತಿರುವ ಜನ, ಎಲ್ಲಾ ರಾಜ್ಯ ಹೆದ್ದಾರಿಗಳಲ್ಲಿ ಸಂಚರಿಸಲು ಹಣ ಕಟ್ಟಬೇಕಾದ ದಿನ ದೂರವಿಲ್ಲ, ಒಟ್ಟಾರೆ ಜನರ ಸುಲಿಗೆಯೇ ಇವರ ಮಂತ್ರವಾಗಿದೆ ಎಂದು ಸುರೇಶ್ ರಾಥೋಡ್ ಕಿಡಿ ಕಾರಿದರು.

Recommended Video

ಈಶಾನ್ಯ ರಾಜ್ಯಗಳಲ್ಲಿ ಪ್ರವಾಸೋದ್ಯಮದ ಹೊಸ ಶಕೆ-ನಮಾಮಿ ಬ್ರಹ್ಮಪುತ್ರ ಉತ್ಸವದಲ್ಲಿ ಮೋದಿ ಭಾಗಿ | Oneindia Kannada

ರಾಜಕೀಯ ಚಟುವಟಿಕೆಗಳ ಉಸ್ತುವಾರಿ ಫಣಿರಾಜ್ ಎಸ್‌.ವಿ ಮಾತನಾಡಿ, ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದಿದ್ದರೆ ಎಲ್ಲಾ ಟೋಲ್ ಪ್ಲಾಜಾಗಳ ಬಂದ್‌ ಚಳವಳಿ ಪ್ರಾರಂಭಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಪತ್ರಿಕಾಗೋಷ್ಠಿಯಲ್ಲಿ ದತ್ತಾತ್ರೇಯ ವಾರ್ಡ್ ಮಹಿಳಾ ಘಟಕದ ಅಧ್ಯಕ್ಷೆ ಉಷಾ ಮೋಹನ್, ಅಗರ ವಾರ್ಡ್ ಅಧ್ಯಕ್ಷೆ ಪಲ್ಲವಿ ಚಿದಂಬರ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

English summary
Central Govt Is Doing Daylight robbery From Fastag, Says AAP
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X