ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚೀನಾ ಗಡಿಯಲ್ಲಿ ಏನೊ ಮಸಲತ್ತು ನಡೆಯುತ್ತಿದೆ ಎಂದ ಸುರೇಶ್

|
Google Oneindia Kannada News

ಬೆಂಗಳೂರು, ಜೂ. 21: ಭಾರತ-ಚೀನಾ ಗಡಿ ವಿಚಾರವಾಗಿನ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಇದೀಗ ಮತ್ತಷ್ಟು ಚರ್ಚೆ ಆಗುತ್ತಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸಂಸದ ಡಿ.ಕೆ. ಸುರೇಶ್ ಮೂಲಭೂತ ಪ್ರಶ್ನೆ ಎತ್ತಿದ್ದಾರೆ.

Recommended Video

ಜಗತ್ತಿಗೆ ಕಾದಿದೆಯಾ ಆಪತ್ತು..?ನಿಜವಾಗುತ್ತಾ ಮಾಯನ್ ಕ್ಯಾಲೆಂಡರ್ ಭವಿಷ್ಯ?? | Mayan Calendar | Oneindia Kannada

ಭಾರತ-ಚೀನಾ ಗಡಿಭಾಗದಲ್ಲಿ ಸೈನಿಕರ ಘರ್ಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಚೀನಾ ಸೈನಿಕರು ಗಡಿ ದಾಟಿಲ್ಲ ಅಂದರೆ ನಮ್ಮ ಸೈನಿಕರು ಹುತಾತ್ಮರಾಗಿದ್ದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ನಮ್ಮ ಸೈನಿಕರು ಅವರ ಕಡೆ ಹತ್ಯೆಯಾಗಿದ್ದಾರಾ? ನಮ್ಮ ಗಡಿಯೊಳಗೆ ಸತ್ತಿದ್ದಾರಾ ಗೊತ್ತಾಗಬೇಕಲ್ಲ? ಇದರಲ್ಲೇನೋ ಮಸಲತ್ತು ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ಹಾವೇರಿ: ಹಾವೇರಿ: "ದಾಳಿ ಮಾಡಿದ ದೇಶಕ್ಕೆ ಪ್ರತ್ಯುತ್ತರ ಕೊಡೋದು ನಮ್ಮ ಕರ್ತವ್ಯ'

ಇಡೀ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆಯಾ ಎಂದು ಡಿ.ಕೆ. ಸುರೇಶ್ ಸಂಶಯ ವ್ಯಕ್ತಡಿಸಿದ್ದಾರೆ. ಯಾಕಾಗಿ ನಮ್ಮ 20 ಸೈನಿಕರು ಹುತಾತ್ಮರಾದರು? ನಮ್ಮ ಕಾಂಗ್ರೆಸ್ ಪಕ್ಷದ ಕೇಂದ್ರದ ನಾಯಕರು ಪದೇ ಪದೇ ಅದಕ್ಕೇ ಕೇಳುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಅದನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಸಿದ್ದಾರೆ.

Central Government move on death of soldiers on Indo-China border is skeptical: MP DK Suresh

ಕನಕಪುರದಲ್ಲಿ ಕೋವಿಡ್ ಹೆಚ್ಚಳ: ಕನಕಪುರದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಾಗುತ್ತಿದೆ. ಅಲ್ಲಿನ ವೈದ್ಯರು ಹಾಗೂ ವ್ಯಾಪಾರಿಯಿಂದ ಸೋಂಕು ಹರಡಿದೆ. ಪ್ರತಿನಿತ್ಯ ನೂರಾರು ಜನರನ್ನ ವೈದ್ಯರು ನೋಡಿದ್ದಾರೆ. ವ್ಯಾಪಾರಿ ಅಂಗಡಿಗೂ ನೂರಾರು ಜನ ದಿನಾಲೂ ಭೇಟಿ ನೀಡಿದ್ದಾರೆ. ಹೀಗಾಗಿ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಅಧಿಕಾರಿಗಳ, ಜನಪ್ರತಿನಿಧಿಗಳ ಸಭೆ ಕರೆದಿದ್ದೇವೆ. ಕೊರೊನಾ ವೈರಸ್ ಸೋಂಕು ನಿಯಂತ್ರಣದ ಬಗ್ಗೆ ಚರ್ಚೆ ಮಾಡ್ತೇವೆ ಎಂದು ಬೆಂಗಳೂರಿನಲ್ಲಿ ಸಂಸದ ಡಿ.ಕೆ. ಸುರೇಶ್ ಹೇಳಿಕೆ ಕೊಟ್ಟಿದ್ದಾರೆ.

English summary
Prime Minister Narendra Modi's statement on the India-China border issue is now being debated. DK Suresh has spoken on the same issue. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X