ಕೇಂದ್ರದ ಮುಂದಿರುವುದು ಈಗ ಒಂದೇ ಒಂದು ಆಯ್ಕೆ: ಗುಲಾಂ ನಬಿ

ಬೆಂಗಳೂರು, ಜನವರಿ 4: ಈಗ ಸರ್ಕಾರದ ಮುಂದಿರುವುದು ಕೇವಲ ಒಂದೇ ಒಂದು ಆಯ್ಕೆ, ಜನರ ಭಾವನೆ ಆಧಾರದಲ್ಲಿ ಧ್ರುವೀಕರಣ ಮಾಡುವುದು ಮಾತ್ರ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನತೆ ಬಡಿದಾಡುವಂತೆ ಮಾಡುವ ಬಿಲ್ ಗಳನ್ನು ಸರ್ಕಾರ ತರುತ್ತಿದೆ. ಆದರೆ ನಾನು ದೇಶದ ಜನರಿಗೆ ಸೆಲ್ಯೂಟ್ ಮಾಡ್ತೇನೆ,ಜನ ತಡವಾಗಿಯಾದರೂ ಎಚ್ಚೆತ್ತಿದ್ದಾರೆ.ಜನರನ್ನ‌ ಮೋದಿ ಬಳಸಿಕೊಂಡಿದ್ದಾರೆ ಅನ್ನೋದನ್ನು ಜನ ಅರ್ಥ ಮಾಡಿಕೊಂಡಿದ್ದಾರೆ ಎಂದರು.

ಮಹಾರಾಷ್ಟ್ರ ಹಾಗೂ ಹರಿಯಾಣ ಚುನಾವಣೆಯಲ್ಲಿ ಮೋದಿ ಮತ್ತು ಶಾ ಪದೇ ಪದೇ ಕಾಶ್ಮಿರದ ಬಗ್ಗೆ ಮಾತನಾಡಿದ್ದರು, ಆದರೆ ಆ ಚುನಾವಣೆಯಲ್ಲಿ ಸೋತರು, ಹೆಚ್ಚೆಚ್ಚು ವಿವಾದಿತ ಬಿಲ್ ಗಳು ತಂದಷ್ಟು ಬಿಜೆಪಿ ಚುನಾವಣೆ ಸೋಲುತ್ತೆ.

Central Government Have Only One Option Now

ನಾವು ಒಗ್ಗಟ್ಟಾಗಿ ಗಾಂಧಿ ಜತೆ ಹೋರಾಟ ಮಾಡಿದ್ದೇವೆ. ಒಗ್ಗಟ್ಟಾಗಿಯೇ ಬ್ರಿಟಿಷರ ವಿರುದ್ದ ಹೋರಾಟ ಮಾಡಿದ್ದೇವೆ. ಒಗ್ಗಟ್ಟಾಗಿಯೇ ಮೂಲಭೂತ ಸೌಕರ್ಯ ನಿರ್ಮಾಣ ಮಾಡಿದ್ದೇವೆ, ಆದರೆ ಬಿಜೆಪಿ ಎಲ್ಲರನ್ನೂ ಒಡೆಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ನಮ್ಮ ದೇಶದ ದಿಕ್ಕುತಪ್ಪಿಸಲಾಗುತ್ತಿದೆ. ಆರ್ಟಿಕಲ್ 370 ವಾಪಸ್ ಪಡೆದ ಬಳಿಕ ದೇಶ ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾಗಿದೆ. ವಿಶ್ವಸಂಸ್ಥೆ ಜರ್ಮನಿ ಸೇರಿದಂತೆ ಅನೇಕ ದೇಶಗಳ ಭಾರತದ ವಿರುದ್ಧ ದನಿ ಎತ್ತಿವೆ. ನೋಟ್ ಬಂದಿಯಿಂದ ನಿರುದ್ಯೋಗ ಸೃಷ್ಟಿಯಾಗಿದೆ.ಭಾರತದಲ್ಲಿ ಯಾರು ಕೂಡ ಹೂಡಿಕೆಗೆ ಮುಂದಾಗುತ್ತಿಲ್ಲ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+