ಸಿಡಿ ಸ್ಫೋಟ ಪ್ರಕರಣ: ರಮೇಶ್ ಜಾರಕಿಹೊಳಿ ಮೊಬೈಲ್ ಜಪ್ತಿ ಮಾಡಿದ ಎಸ್ಐಟಿ !
ಬೆಂಗಳೂರು, ಮಾರ್ಚ್ 25: ಅಶ್ಲೀಲ ಸಿಡಿ ಪ್ರಕರಣ ಕುರಿತು ಬಿರುಸಿನ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ವಶಕ್ಕೆ ಪಡೆದಿದ್ದಾರೆ. ಸಂತ್ರಸ್ತೆ ಎನ್ನಲಾದ ಯುವತಿಗೆ ರಮೇಶ್ ಜಾರಕಿಹೊಳಿ ಕರೆ ಮಾಡಿದ್ದರೆ ? ಇಲ್ಲವೇ ಆಕೆಯೇ ಇವರಿಗೆ ಕರೆ ಮಾಡಿದ್ದರೇ ಎಂಬುದರ ಸತ್ಯಾನ್ವೇಷಣೆಗೆ ಎಸ್ಐಟಿ ಇಳಿದಿದೆ. ರಮೇಶ್ ಜಾರಕಿಹೊಳಿಯೇ ಸ್ವತಃ ಯುವತಿಗೆ ಕರೆ ಮಾಡಿರುವ ಬಗ್ಗೆ ಮಾಹಿತಿಯನ್ನು ಎಸ್ಐಟಿ ಅಧಿಕಾರಿಗಳು ಕಲೆ ಹಾಕುತ್ತಿದ್ದು, ರಮೇಶ್ ಜಾರಕಿಹೊಳಿಗೆ ಹೊಸ ತಲೆನೋವು ಶುರುವಾಗಿದೆ.
Recommended Video
ಅಶ್ಲೀಲ ಸಿಡಿಗೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿಯನ್ನು ವಿಶೇಷ ತನಿಖಾ ತಂಡದ ಅಧಿಕಾರಿಗಳು ಎರಡು ಭಾರಿ ವಿಚಾರಣೆ ನಡೆಸಿದ್ದರು. ಈ ವೇಳೆ ಅದೊಂದು ನಕಲಿ ಸಿಡಿ. ನನ್ನನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಜಾರಕಿಹೊಳಿ ಹೇಳಿಕೆ ದಾಖಲಿಸಿಕೊಂಡಿದ್ದ ಎಸ್ಐಟಿ ಅಧಿಕಾರಿಗಳು ಇದೀಗ ಮೊಬೈಲ್ ಜಪ್ತಿ ಮಾಡಿದ್ದಾರೆ. ಸಿಡಿ ಲೇಡಿ ಜತೆ ವಿಡಿಯೋ ಸಂಭಾಷಣೆ ಮಾಡಿರುವ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆಯಲ್ಲಿ ಮೊಬೈಲ್ ನಲ್ಲಿ ಕರೆಗಳ ವಿವರ, ಸಂದೇಶ ವಿಡಿಯೋ ಕರೆಗಳ ವಿವರ ಡಿಲೀಟ್ ಮಾಡಿದ್ದಲ್ಲಿ, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಮೊಬೈಲ್‌ನಲ್ಲಿರುವ ದತ್ತಾಂಶವನ್ನು ಮರಳಿ ತೆಗೆದು ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ.

ಮೊಬೈಲ್‌ಗೆ ಸ್ಕ್ರೀನ್ ಲಾಕ್ ಬಳಸಲಾಗಿದೆಯಾ ? ಅಥವಾ ಪಾಸ್ ವರ್ಡ್ ಇಟ್ಟುಕೊಂಡಿದ್ದರೇ ? ಸಂತ್ರಸ್ತೆ ಯುವತಿ ನಂಬರ್ ಸೇವ್ ಆಗಿದೆಯೇ ? ಇಬ್ಬರ ನಡುವೆ ನಡೆದಿರುವ ಕರೆಗಳ ಸಂಭಾಷಣೆ, ಮೊದಲು ಯಾರು ಕರೆ ಮಾಡಿದ್ದಾರೆ ಎಂಬ ವಿವರಗಳನ್ನು ರಮೇಶ್ ಮೊಬೈಲ್‌ನಲ್ಲಿ ಪಡೆಯಲಿದ್ದಾರೆ. ಒಂದು ವೇಳೆ ಸಿಡಿ ಲೇಡಿಯ ಜತೆ ಕರೆ, ವಿಡಿಯೋ ಕರೆ, ಸಂದೇಶಗಳ ರವಾನೆ ಕುರಿತು ತಪಾಸಣೆ ನಡೆಸಲಿದ್ದಾರೆ. ಇಬ್ಬರ ನಡುವೆ ಸಂಪರ್ಕ ಕುರಿತು ತನಿಖೆ ನಡೆಸಲಿದ್ದಾರೆ. ಪ್ರಕರಣ ವರದಿಯಾಗಿ 23 ದಿನ ಕಳೆದರೂ ಯುವತಿ ಪತ್ತೆಯಾಗಿಲ್ಲ. ಇದರ ಬೆನ್ನಲ್ಲೇ ಜಾರಕಿ ಹೊಳಿ ಮೊಬೈಲ್‌ನ ಮಾಹಿತಿ ಕಲೆ ಹಾಕುವ ಕಾರ್ಯದಲ್ಲಿ ಎಸ್ಐಟಿ ಅಧಿಕಾರಿಗಳು ನಿರತರಾಗಿದ್ದಾರೆ.












Click it and Unblock the Notifications