• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿಡಿ ಯುವತಿಯ ಆಡಿಯೋ ವೈರಲ್: ಡಿ.ಕೆ ಶಿವಕುಮಾರ್ ಹೆಸರು ಪ್ರಸ್ತಾಪ; ಆಡಿಯೋದಲ್ಲಿ ಏನಿದೆ?

|

ಬೆಂಗಳೂರು, ಮಾರ್ಚ್ 26: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸ್ಪೋಟಕ ತಿರುವು ಪಡೆದಿದ್ದು, ಸಿಡಿಗೆ ಸಂಬಂಧಿಸಿದ ಯುವತಿ ತನ್ನ ಕುಟುಂಬದವರ ಜೊತೆ ಮಾತನಾಡಿರುವ ಆಡಿಯೋ ತುಣುಕು ವೈರಲ್ ಆಗಿದೆ.

ಗೆಳೆಯ ಆಕಾಶ್ ಜೊತೆಗಿದ್ದ ವೇಳೆ ಯುವತಿ ತನ್ನ ತಮ್ಮನ ಜೊತೆ 6 ನಿಮಿಷ 59 ಸೆಕೆಂಡ್ ಗಳ ಆಡಿಯೋ ಹೊರಬಿದ್ದಿದ್ದು, "ನಾನು ನಂಬುವ ಕೃಷ್ಣನ ಮೇಲಾಣೆ, ವೈರಲ್ ಆದ ಸಿಡಿ ವಿಡಿಯೋದಲ್ಲಿ ಇರುವುದು ನಾನಲ್ಲ, ನನ್ನ ನಂಬು' ಎಂದು ತಮ್ಮನಿಗೆ ಮನವರಿಕೆ ಮಾಡಿದ್ದಾಳೆ.

ಹೊಸ ಆಡಿಯೋ ಔಟ್, ಡಿಕೆಶಿ ಹೆಸರು ಉಲ್ಲೇಖಿಸಿದ ಸಿಡಿ ಗರ್ಲ್

ಆಗ ಯುವತಿಯ ತಮ್ಮ ಇದೆಲ್ಲವೂ ನಿನಗೆ ಬೇಕಾ? ಎಂದು ಅವಳ ತಮ್ಮ ಪ್ರಶ್ನಿಸಿದಾಗ, ಅದಕ್ಕೆ ಯುವತಿ, ಖುದ್ದು ಡಿ.ಕೆ ಶಿವಕುಮಾರ್ ಮತ್ತು ಅವರ ಕಡೆಯವರೇ ಬರುತ್ತಿದ್ದಾರೆ ಎಂದು ಆಡಿಯೋ ತುಣುಕಿನಲ್ಲಿ ಹೇಳಿದ್ದಾಳೆ. ಈ ಆಡಿಯೋ ಕುರಿತು ಇನ್ನೂ ಯಾವುದೇ ಅಧಿಕೃತ ಹೇಳಿಕೆ ಮತ್ತು ಮಾಹಿತಿ ಬಂದಿಲ್ಲ.

ಆಡಿಯೋ ತುಣುಕಿನಲ್ಲಿ ಏನಿದೆ?

ತಮ್ಮ: ಏನ್ ಮಾಡಕತಿ?

ಯುವತಿ: ಇಲ್ಲೆ ಇದೀನಿ ನಾನು

ತಮ್ಮ: ಊಟ?

ಯುವತಿ: ಊಟ ಆಯ್ತಲೇ ಪಾ, ಚಿನ್ನಿ ನಿನ್ನ ಮೇಲೆ ಆಣಿ, ನಮ್ಮ ಮಮ್ಮಿ ಮೇಲೆ ಆಣಿ, ನಾನು ನಂಬೋ ಕೃಷ್ಣನ ಮೇಲೆ ಆಣಿ. ಅದು ನಾನಲ್ಲ. ನಿನಾದರೂ ನಂಬಲೇಪಾ. ಯಾರು ನಂಬಕತಿಲ್ಲ ನಂಗಾ..

ತಮ್ಮ: ನಂಬಿದೇನಿ ಲೇ ಪಾ

ಯುವತಿ: ನಾನು ನಂಬೇನಿ, ನೀ ನಂಬಿದಿ. ಬೇರೆ ಯಾರೂ ನಂಬಕತಿಲ್ಲ. ಎಲ್ರೂ ನನ್ ಮೇಲೆ ಡೌಟ್ ಮಾಡಕತ್ಯಾರ ಲೇ ಪಾ. ನಾನು ಹಂಗ ಇಲ್ಲಲೇ ಪಾ ಚಿನ್ನಿ..

ತಮ್ಮ: ಹ್ಹೂ.. ಇರಲೇಳು

ಯುವತಿ: ನ್ಯೂಸ್ ನ್ಯಾಗ ಏನ್ ತೋರಿಸಕತ್ಯಾರಲ್ಲ ಅದು ಗ್ರಾಫಿಕ್ಸ್ ದಾಗ ಚಿನ್ನಿ.

ತಮ್ಮ: ಗ್ರಾಫಿಕ್ಸಾ?

ಯುವತಿ: ಹ್ಹೂ.. ಲೇ ಪಾ ನಾನು ಯಾಕ ಅಂತ ಕೆಲಸಕ್ಕೆ ಹೋಗ್ತೇನಿ ಹೇಳು. ಒಂದ್ ಸ್ವಲ್ಪ ನೀನೇ ಯೋಚನೆ ಮಾಡು.

ತಮ್ಮ: ಮತ್ತ ನಿಂದು ವಾಯ್ಸ್ ಐತೆಲ್ಲಾ. ಆಡಿಯೋ ಎಲ್ಲಾ ಬೀಯರ್ ಕುಡಿತಿಯಾ, ಅದು ಕುಡಿತಿಯಾ ಅಂತಿದೆಯಲ್ಲ.

ಯುವತಿ: ಲೇ ಅದು ಅಲ್ಲ ಲೇ ಪಾ. ನನ್ನ ವಾಯ್ಸ್ ಬೇರೆ ಹುಡುಗಿ ಮಾತಾಡಿರೋದು. ವಿಡಿಯೋ ನಿಂಗ ಕಳಿಸ್ತೇನಿ.

ತಮ್ಮ: ಹ್ಮ.. ಕಳಿಸು ನಮ್ಗ..

ಯುವತಿ: ಅವರು ಬರ್ಲಿ ತಡಿ, ನನ್ನ ಹತ್ರ ಯಾವದೂ ವಿಡಿಯೋ ಇಲ್ಲ. ಡಿ.ಕೆ ಶಿವಕುಮಾರ್ ಕಡೆಯವರು ಯಾರೋ ಬರಾಕತಾರ. ಅವರೆಲ್ಲ ಬಂದ್ ಮೇಲೆ ಮಾತಾಡ್ತಾರ.

ತಮ್ಮ: ಯಾಕ್ ಬೇಕಲೇ ಪಾ. ಡಿಕೆ ಶಿವಕುಮಾರ್ ಅವರೆಲ್ಲ. ಮೂರು ಹೊತ್ತು ಊಟ ಮಾಡು ಸಾಕು.

ಆಕಾಶ್: ಹಲೋ ಬಾಯ್, ಟೆನ್ಶನ್ ತಗೋಬೇಡ. ಆರಾಮಗಿರು. ನಾವೀಗ ಅಲ್ಲೇ ಬಂದೀವಿ. ಒಂದ್ ಅರ್ಧ ಗಂಟೆ ಅವರು ಬರ್ತಾರ. ಆಮೇಲೆ ನಿಂಗ್ ಫೋನ್ ಮಾಡ್ತೇನಿ.

ತಮ್ಮ: ಬ್ರೋ.. ಪ್ಲೀಸ್ ಇಲ್ಲಿ ಮನೆಗೆಲ್ಲಾ ಟೆನ್ಶನ್ ಆಗೇತಿ ಬ್ರೋ.

ಯುವತಿ: ಹಲೋ..

ತಮ್ಮ; ವಿಡಿಯೋ ಕಳಿಸಾ

ಯುವತಿ: ಹ ಆಯ್ತು ಚಿನ್ನಿ ಕಳಿಸ್ತೇನಿ

ತಮ್ಮ: ನಿಂಗೆ ಏನರ ಕಾಲ್ ಬರಕತಾವ ಎನು ಮ್ಯಾಲೆ ಮ್ಯಾಲೆ, ಯಾವುದರ..

ಯುವತಿ: ಇಲ್ಲಾ, ಇಲ್ಲಾ. ಯಾವುದು ಬರಾಕತಿಲ್ಲ.

ತಮ್ಮ: ಲೇ.. ನಾಳೆ ಸ್ಟೇಟ್ಮೆಂಟ್ ಅದು ಕೊಡು ಅಂತಾರ.

ಯುವತಿ: ಲೇ ಅದೆಲ್ಲ ನಾ ಹೋಗಲ್ಲ ಲೇ

ಆಕಾಶ್: ಅಲ್ಲಿತನ ಹೋಗಲ್ಲ ಬಾಯ್, ನೀನು ಟೆನ್ಶನ್ ತಗೋಬೇಡ

ತಮ್ಮ: ಇಲ್ಲ ಬ್ರೋ ನಾಳೆ ಕೊಡ್ಬೇಕಾಗುತ್ತೆ. ಅವ ರಾಜೀನಾಮೆ ಕೊಡಬೇಕಲ್ಲಿ.

ಆಕಾಶ್: ಸ್ಟೇಟ್ಮೆಂಟ್ ಏನು?

ತಮ್ಮ: ಈಕೀನ ಕರಿತಾರೆ ಬ್ರೋ

ಆಕಾಶ್: ಬಾಯ್, ಈಕೆಗೆ ಅದೇನೂ ಗೊತ್ತೇ ಇಲ್ಲ.

ತಮ್ಮ: ಮೀಡಿಯಾದಗೆಲ್ಲ ಫೋನ್ ಹಚ್ಚಿ ಮಾತಾಡಿರೆಲ್ಲ

ಯುವತಿ: ಲೇ, ಮೀಡಿಯಾಗೆ ಫೋನ್ ಮಾಡಿದ್ದಲ್ಲ. ಯಾರೋ ಮಾತಾಡಿರೋದು, ನಂದು ವಾಯ್ಸ್ ಮಾಡಿಲೇಷನ್ ಮಾಡಾಕ ಬರುತೈತಿ. ಮಾಡಿಲೇಷನ್ ವಾಯ್ಸ್ ಅದು ಅಷ್ಟೆ. ಬೇರೆ ಎಲ್ಲೂ, ನಾನೆಲ್ಲೂ ಬರಲ್ಲ. ದಾಟ್ ಈಸ್ ನಾಟ್ ಮಿ. ನನಿಗೆ ಯಾರೂ ಅಂತನೂ ಗೊತ್ತಿಲ್ಲ.

ಯುವತಿ: ಯಾಕ ಅಷ್ಟು ಅಂಜಲಕತೀರಿ ಲೇ ಪಾ. ನೀವ್ ನಂಗ ಮನೆಯವರೇ ಸಪೋರ್ಟ್ ಮಾಡ್ಲಿಲ್ಲ ಅಂದ್ರ, ನಂಗೆ ಯಾರ ಮಾಡ್ತಾರ

ತಮ್ಮ: ಲೇ ನಾನ್ ಅದೀನಿ ಲೇ ಪಾ. ನಿನ್ನ ಜೊತೆ ಅದೀನಿ, ಆದ್ರ ನಿನ್ನ ಮೇಲೆ ಯಾರರ ಪ್ರೆಶರ್ ಹಾಕಿದರ ಏನ್ ಮಾಡೋದು ಹೇಳು.

ಯುವತಿ: ನನ್ನ ಮೇಲೆ ಯಾರೂ ಹಾಕಲ್ಲ. ಖುದ್ದು ಡಿಕೆ ನ ಬರಾಕತಾನ. ಮಾಡ್ತೇನಿ ತಡಿ ಚಿನ್ನಿ.

ತಮ್ಮ: ಹೊರಗ ಅದು ಅಡ್ಯಾಡ ಬೇಡ ಲೇ

ಯುವತಿ: ಇಲ್ಲಾ, ಇಲ್ಲಾ ಜಸ್ಟ್ ಅದು ಇಲ್ಲೆ ಬಂದೀವಿ, ಅವ್ರು ಬರತಾರ ಈಗ

ತಮ್ಮ: ಲೇ ಸ್ವಾತಿ ಮ್ಯಾಟರ್ ಕಟೆ ಸಿರೀಯೆಸ್ ಐತಿ. ನಾಳೆ ಅವ್ನು ಶಾಸಕ. ಅವ್ನು ನಾಳೆ ರಾಜೀನಾಮೆ ಕೊಡ್ಬೇಕಂತ.

ಯುವತಿ: ಇಬ್ರೂ ಹೋಂಟೀವಿ, ನನ್ ಜೊತೆ ಆಕಾಶ್ ಇರ್ತಾನ. ಅಷ್ಟರ ನಂಬತೀ

ತಮ್ಮ: ಆಯ್ತು. ಮಮ್ಮಿ ಜೋಡಿ ಮಾತಾಡು ಒಂದೆರಡು ಮಾತು.

ಮಹಿಳೆ: ಹಲೋ..

ಯುವತಿ: ಬೇ, ಅವ್ವಾ ನೀವರಾ ನಂಗ್ ನಂಬ್ರಿ

ಮಹಿಳೆ: ನಾನ್ ನಂಬೇನೆವಾ, ನಿಮ್ಮವ್ವಾಗ ಹೇಳು

ಯುವತಿ: ನಾನ್ಯಾಕ ಇಂತ ಕೆಲ್ಸ ಮಾಡ್ತೇನಿ, ನಿನ್ನ ಮ್ಯಾಲ ಆಣಿ ಮಾಡ್ತೇನಿ ಬೇ.

ಮಹಿಳೆ: ಅಯ್ತೆಳು, ಹ್ಹೂ. ಕೋಡ್ತೀನಿ ನೋಡು ಮಮ್ಮಿ ಕೈಯಾಗ

ಯುವತಿ: ಹ್ಹೂ ಕೊಡು

ತಾಯಿ: ಹಲೋ

ಯುವತಿ: ಮಮ್ಮೀ ನೀನೇ ನನ್ನನ್ ನಂಬು ಮಮ್ಮಿ

ತಾಯಿ: ನಂಬೀನೇ ಸ್ವಾತಿ. ಇಷ್ಟು ದಿನಾ ನಿನ್ನ ನಂಬೀನಿ

ಯುವತಿ: ನಿನ್ ಕಾಲು ಬಿಳ್ತೇನಿ ಮಮ್ಮಿ. ನವಾ ನನ್ನ ನಂಬಲಿಲ್ಲ ಅಂದ್ರ ಹೆಂಗ. ನಂಗ ಆಕಾಶ್ ಸಪೋರ್ಟ್ ಮಾಡ್ಯಾನ. ನನ್ ಫ್ರೆಂಡ್ಸ್ ಎಲ್ಲ ಸಪೋರ್ಟ್ ಮಾಡಕತ್ಯಾರ. ನಿವಾ ಮಾಡ್ತಲ್ಲ. ನಂಗ ಅಂಜಿಕೆ ಬರತೈತಿ.

ತಾಯಿ: ನಾನ್ ನಂಬೇನಿ , ನಾನು ನಂಬಿದ್ದಕ್ಕ ನಿನ್ನ ಬೆಂಗಳೂರಾಗ ಬಿಟ್ಟೇನಿ. ನನಗೆ ಗೊತೈತಿ ನನ್ನ ಮಗಳು ಹೆಂಗೆ ಅಂತ

ಯುವತಿ: ಅದೆಲ್ಲ ಗ್ರಾಫಿಕ್ಸ್ ಮಮ್ಮಿ (ಅಳು)

ತಾಯಿ: ನಿಂದು ಫೋಟೋ ಎಲ್ಲಾ ನಂದು ತೋರಿಸ್ಯಾನ, ಫೋಟೋದಾಗ ಮುಖ ಎಲ್ಲ ಐತಿ

ಯುವತಿ: ಅದೆಲ್ಲ ಡಿಲೀಟ್ ಆಗುತ್ತ ನಾಳೆ

ತಾಯಿ: ನಿನ್ ಒಂದು ಸ್ವಲ್ಪ ದಿನ ಊರಿಗೆ ಬಂದು ಬಿಡು

ಯುವತಿ: ಸ್ವಲ್ಪ ತಡಿ, ಎಲ್ಲಾ ಕ್ಲೀಯರ್ ಮಾಡ್ಕೊಂಡು ಬರತೀನಿ

ತಾಯಿ: ನನಗ ಅದು ಯಾವದು ಬ್ಯಾಡ, ನಾನು ನಿಂಗ್ ಮೊದ್ಲ ಹೇಳಿದ್ದೀಲ್ಲ. ನನ್ ಬಾಯಾಗ ಬ್ಯಾಡ ಅಂತ ಬಂದಿತ್ತಿಲ್ಲ. ಬಾ ಅಂತ ಹೇಳಿದ್ನಿಲ್ಲ. ಬ್ಯಾಡ ರಾಜಕೀಯ ಜೊತೆ ಹೋಗಬೇಡ. ಇನ್ನು ಏನು ಹೊಲಗೇರಿ ಆಗುತ್ತೋ ಗೊತ್ತಿಲ್ಲ.

ಯುವತಿ: ಹಂಗೆಲ್ಲ ತಲೆ ಕೆಡಿಸ್ಕೋಬೇಡ, ನಿನ್ ಕಾಲ ಬಿಳ್ತೇನಿ

ತಾಯಿ: ನಿಮ್ ಡ್ಯಾಡಿ ಹೇಳಿದರ ಸತ್ತ ಹೋಕ್ಕತಿ

ಯುವತಿ: ಡ್ಯಾಡಿಗೆ ಏನು ಹೇಳಿ

ತಾಯಿ: ನಿಮ್ ಡ್ಯಾಡಿಗೆ ಏನು ಹೇಳಿಲ್ಲ

ಯುವತಿ: ಡ್ಯಾಡಿಗೆ ಏನು ಹೇಳಬೇಡ

ತಾಯಿ: ಡ್ಯಾಡಿ ವಿಡಿಯೋ ಏನರ ನೋಡಿದರ, ಗ್ಯಾರಂಟಿ ಸತ್ತೋಕತಿ. ದಯವಿಟ್ಟು ಬಂದ ಬಿಡವ್ವಾ. ಬಿಟ್ಟ ಬಂದು ಬಿಡು.

ಯುವತಿ: ಹ್ಹೂ ಆಯ್ತು.

ತಮ್ಮ: ಹಲೋ..

ಯುವತಿ: ಚಿನ್ನಿ ಅವರಬ್ಬರಿಗೂ ಹ್ಯಾಂಡಲ್ ಮಾಡಲೇ ಪಾ ಪ್ಲೀಸ್

ತಮ್ಮ: ಹ್ಹೂ.. ನಿನ್ ಆರಾಮ್ಸೆ ಇರಲೇ ಪಾ. ಅವ ಬಂದು ಎಲ್ಲಾ ವಿಡಿಯೋ ತೋರಿಸಿದ ಲೇ ಪಾ. ಫೇಸ್ ಎಲ್ಲಾ ಕ್ಲೀಯರ್ ಐತಿ. ನಿನ್ನ ಮಾತಾಡಿರೊದು ಐತಿ ಅದರಲ್ಲಿ.

ಯುವತಿ: ಲೇ ಅದು ನಾ ಅಲ್ಲಲೇ ಪಾ. ಚಿನ್ನಿ ಅದೆಲ್ಲ ಗ್ರಾಫಿಕ್ಸ್

ತಮ್ಮ: ಏನ್ ಗ್ರಾಫಿಕ್ಸ್ ಲೇ, ಯಾರರ ನಂಬುತಾರ ಸ್ವಾತಿ

ಯುವತಿ: ಆಯ್ತು ನಾ ಎಲ್ಲ ಕ್ಲೀಯರ್ ಮಾಡಿಸ್ತೇನೆ. ಅವಾಗರ ನಂಬ್ತಿ?

ತಮ್ಮ: ಲೇ ಅವು ವಿಡಿಯೋ ಭಯಂಕರ ವೈರಲ್ ಆಗ್ತಾವು ಇನ್ನು

ಯುವತಿ: ಹ್ಹೂ.. ಅಯ್ತು ಮಾಡ್ತೇನಿ

ತಮ್ಮ: ಈಗ ಯಾರ ಜೋಡಿ ಮಾತಾಡ್ತಿ

ಯುವತಿ: ನಾನು ಡಿ.ಕೆ ಶಿವಕುಮಾರ್ ಜೋಡಿ ಮನಿಗೆಲ್ಲ ಬಂದೀನಿ.

ತಮ್ಮ: ಹೌದಾ

ಯುವತಿ: ಹ್ಹೂ.. ಮಾಡ್ತೇನಿ ಇರು, ಮಾಡ್ತೇನಿ

ತಮ್ಮ: ಲೇ , ಫುಲ್ ಸೆಕ್ಯುರಿಟಿಲಿ ಇರು. ನಿಮ್ ಲೋಕೇಶನ್ ಕಳ್ಸು ನಾಕು ಮಂದಿಗೆ

ಯುವತಿ: ಹ್ಹೂ. ಆಯ್ತು, ಆಯ್ತು

ತಮ್ಮ: ಲೇ ಬಾಲ ಡೇಂಜರ್ ಇದು, ನೀನು ಆಕಾಶ್ ಜೊತೆ ಇದಾನ ಅಂತ ಏನಿಲ್ಲ. ನಾಳೆ ಒಂದ್ ದೊಡ್ಡದಾಗುತ್ತೆ. ರಾಜಕೀಯ ಇದರಾಗ. ನಾಳೆ ಸರ್ಕಾರ ಬೀಳಿಸ್ತಾರ.

ಯುವತಿ: ಹ್ಹೂ ಆಯ್ತು

ತಮ್ಮ: ನಿನ್ ಆರಾಮಾಗಿರು, ಮನ್ಯಾಗೆಲ್ಲ ನಾನ್ ನೋಡ್ಕೊಂತೇನಿ. ನಾಳೆ ಯಾವುದೇ ಕಾರಣಕ್ಕೂ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ನೂರು ಸಲ ಯೋಚನೆ ಮಾಡು.

ಯುವತಿ: ಹ್ಹೂ.. ಆಯ್ತು

ತಮ್ಮ: ಹೇಳಿಕೆಗೆ ಕರೆದರೆ ನೂರು ಸಲ ಯೋಚನೆ ಮಾಡು. ಅವನ ವಿರುದ್ಧ ಕೊಟ್ಟರೆ ಏನು ಆಗುತ್ತೆ, ಪರವಾಗಿ ಕೊಟ್ಟರೆ ಏನ ಆಗುತ್ತೆ, ಬಾಳ ಯೋಚನೆ ಮಾಡಿ ಕೊಡು. ಅವ್ರು ನಮ್ಮಂಗ ನಾರ್ಮಲ್ ಜನ ಅಲ್ಲ.

ಯುವತಿ: ಹ್ಹೂ.. ಆಯ್ತು ಚಿನ್ನಿ ಮಾಡ್ತೀನಿ ತಡಿ

ತಮ್ಮ: ನಿಂಗೆ ಏನರ ಪ್ರಾಬ್ಲಮ್ಮು ಮಾಡಾತರ ಹೇಳಲೇ ಪಾ

ಯುವತಿ: ಯಾರು ಮಾಡತಿಲ್ಲ ಚಿನ್ನಿ, ಅವ್ರೇ ಖುದ್ದು ಬಂದು ಮಾತಾಡ್ತಾರ ಈಗ

ತಮ್ಮ: ಯಾರು ಬರ್ತಾರ?

ಯುವತಿ: ಹ್ಹೂ ಆಯ್ತು, ಆಮೇಲೆ ಮಾತಾಡ್ತೇನಿ ತಗೋ..

ತಮ್ಮ: ಆರಾಮಿರಿ ಲೇ. ನಿನ್ ಆಮೇಲೆ ರಾತ್ರಿ ಕಾಲ್ ಮಾಡು ನಂಗ

ಯುವತಿ: ಹ್ಹೂ ಮಾಡ್ತೇನಿ. ಫೋನ್ ಸೈಲೆಂಟ್ ಇಡಬೇಡ. ಫೋನ್ ಮಾಡಿದಾಗ ರಸೀವ್ ಮಾಡು

ತಮ್ಮ: ಹ್ಹೂ ಆಯ್ತು

ಯುವತಿ: ಇವತ್ತು ಮಲ್ಕೊಬೇಡ

   DK ಶಿವಕುಮಾರ್ ಹೆಸರು ಹೇಳಿದ ಸಿಡಿ ಲೇಡಿ | Oneindia Kannada

   ತಮ್ಮ: ಹ್ಹೂ..

   English summary
   An audio clip of CD young woman talking to her family about CD case is viral.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X