ರಂಗೋಲಿ ಮೆಟ್ರೋ ಕಲಾಕೇಂದ್ರಕ್ಕೆ ಸಂಜೆ 7ರ ನಂತರ ಪ್ರವೇಶ ನಿರ್ಬಂಧ

ಬೆಂಗಳೂರು, ಅಕ್ಟೋಬರ್ 30: ಎಂಜಿ ರಸ್ತೆಯಲ್ಲಿರುವ ರಂಗೋಲಿ ಮೆಟ್ರೋ ಕಲಾಕೇಂದ್ರದಲ್ಲಿ ಸಂಜೆ 5 ಗಂಟೆಯ ಬಳಿಕ ಪ್ರವೇಶವನ್ನು ನಿಷೇಧಿಲಾಗಿದೆ. ಅಷ್ಟೇ ಅಲ್ಲದೆ ಕೇಂದ್ರದ ಸುತ್ತಮುತ್ತಲ ಪ್ರದೇಶದಲ್ಲಿ 25 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ.

ಉದ್ಯಾನದಲ್ಲಿ ಕಳ್ಳತನಗಳು ಹೆಚ್ಚಾಗಿದೆ, ಇತ್ತೀಚೆಗೆ ಉದ್ಯಾನಕ್ಕೆ ಬಂದಿದ್ದ ವ್ಯಕ್ತಿಯೊಬ್ಬ ಡ್ಯಾಗರ್ ತೋರಿಸಿ ಮಹಿಳೆಯನ್ನು ಬೆದರಿಸಿ ಚಿನ್ನದ ಸರ ಲೂಟಿ ಮಾಡಿದ್ದ, ಈತನನ್ನು ಸೆರೆಹಿಡಿದ ಬಳಿಕ ಪೊಲೀಸರು ಹೆಚ್ಚು ಸುರಕ್ಷತೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ದಿನನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ರಂಗೋಲಿ ಕಲಾ ಕೇಂದ್ರದಲ್ಲಿ ಜನರ ಓಡಾಟ ಹೆಚ್ಚಿದೆ. ಭಾನುವಾರ ಬಂತೆಂದರೆ ಉತ್ಸವದ ಮಾದರಿಯಲ್ಲಿ ಕಾರ್ಯಕ್ರಮಗಳು ನಡೆಯುತ್ತವೆ. ಸಂಜೆ ಮಕ್ಕಳೊಂದಿಗೆ ಬರುವ ಮಹಿಳೆಯರು ಕಲಾಕೇಂದ್ರ ಗ್ಯಾಲರಿಯಲ್ಲಿ ಮಕ್ಕಳನ್ನು ಆಟವಾಡಲು ಬಿಡುತ್ತಾರೆ. ಕೆಲವರು ಮೇಲಿನ ಉದ್ಯಾನದಲ್ಲಿ ವಿಹಾರ ಮಾಡುತ್ತಾರೆ. ಆದರೆ ಇತ್ತೀಚೆಗೆ ಕಳ್ಳತನವಾದ್ದರಿಂದ ಈ ಪ್ರದೇಶದ ಮೇಲೂ ಹದ್ದುಗಣ್ಣಿಡಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ.

CCTV surveillance to protect Rangoli metro art center

ಕಳ್ಳತನ ನಡೆದ ಬಳಿಕ ಸಂಜೆ 7 ಗಂಟೆಯವರೆಗೆ ಮಾತ್ರ ಉದ್ಯಾನಕ್ಕೆ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಸಂಜೆ 7 ಗಂಟೆಯಾದ ಕೂಡಲೇ ಉದ್ಯಾನದಲ್ಲಿ ಕುಳಿತ ಜನರನ್ನು ಹೊರಗೆ ಕಳುಹಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+