ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು:ಡ್ರಗ್ಸ್‌ ಪೆಡ್ಲಿಂಗ್ ನಿಂದ ಸಂಪಾದಿಸಿದ್ದ ಕೋಟಿ ಮೌಲ್ಯ ಆಸ್ತಿ ಮುಟ್ಟುಗೋಲು!

|
Google Oneindia Kannada News

ಬೆಂಗಳೂರು , ಸೆಪ್ಟೆಂಬರ್17: ಮಾದಕ ಸರಬರಾಜು ದಂಧೆಯಿಂದ ಕೋಟಿ ಕೋಟಿ ಗಳಿಸಿದ್ದ ಆರೋಪಿಯ ಆಸ್ತಿಯನ್ನ ಸಿಸಿಬಿ ಪೊಲೀಸರು ಮುಟ್ಟುಗೋಲು ಹಾಕುವ ಮೂಲಕ ದಂಧೆಕೋರರಿಗೆ ಶಾಕ್ ನೀಡಿದೆ. ಮೃತ್ಯುಂಜಯ ಎಂಬ ಆರೋಪಿ ಮಾದಕ ಸರಬರಾಜು ದಂಧೆಯಿಂದ ಗಳಿಸಿದ್ದ 1 ಕೋಟಿ 60 ಲಕ್ಷ ಮೌಲ್ಯದ ಆಸ್ತಿಯನ್ನು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ‌.

2007ರಿಂದಲೂ ಸುಮಾರು 9 ಎನ್.ಡಿ.ಪಿ.ಎಸ್ ಪ್ರಕರಣಗಳಲ್ಲಿ ಆರೋಪಿಯಾಗಿರುವ ಮೃತ್ಯುಂಜಯ ಇದೇ ವರ್ಷ ಜುಲೈನಲ್ಲಿ ಕೆ.ಆರ್.ಪುರಂ ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರಿಂದ ಬಂಧಿತನಾಗಿದ್ದ. ಬಂಧಿತನಿಂದ 80 ಲಕ್ಷ ಮೌಲ್ಯದ ವಿವಿಧ ಮಾದರಿಯ ಮಾದಕ ಪದಾರ್ಥಗಳನ್ನ ವಶಕ್ಕೆ ಪಡೆಯಲಾಗಿತ್ತು.

ಆರೋಪಿ ಹೆಸರಿನಲ್ಲಿ ಕೋಟಿ ಮೌಲ್ಯದ ಆಸ್ತಿ
ಆರೋಪಿಯ ಹೆಸರಿನಲ್ಲಿದ್ದ ಹೊಸಕೋಟೆ ಟೌನ್ ನ 1 ವಾಣಿಜ್ಯ ನಿವೇಶನ, ಕೋಲಾರದ ಕೆಂಚಿಪುರ ಹಾಗೂ ಕಂಬಿಪುರದಲ್ಲಿರು 2 ನಿವೇಶನಗಳು, 6 ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ 44,387/- ರೂ ಜಪ್ತಿ ಮಾಡಲಾಗಿದೆ. ಆರೋಪಿಯ ಪತ್ನಿಯ ಬ್ಯಾಂಕ್ ಖಾತೆಗಳಿಗೆ ವಿವಿಧ ಮೂಲದಿಂದ 5 ಕೋಟಿಗೂ ಅಧಿಕ ಹಣ ಅಕ್ರಮವಾಗಿ ಸಂದಾಯವಾಗಿರುವುದು ಸಹ ಪತ್ತೆಯಾಗಿದ್ದು ತನಿಖೆ ಮುಂದುವರೆಸಲಾಗಿದೆ.

CCB in attaching the property of drug offender for worth 1 crore 60 lakhs in Bengaluru

ಸಿಸಿಬಿ ಪೊಲೀಸರ ಮೊದಲ ಆಸ್ತಿಮುಟ್ಟುಗೊಲು ಪ್ರಕರಣ
ಸಿಸಿಬಿ ಪೊಲೀಸರು ಎನ್‌ಡಿಪಿಎಸ್ ಕಾಯ್ದೆ ಅಧ್ಯಾಯ 5a, 68e & Fರಲ್ಲಿನ ಅಧಿಕಾರವನ್ನು ಬಳಸಿ ಗಾಂಜ ಕಳ್ಳಸಾಗಣೆ ದಂಧೆಯಿಂದ ಆರೋಪಿ ಅಕ್ರಮವಾಗಿ ಗಳಿಸಿದ್ದ ಮುಟ್ಟುಗೋಲು ಹಾಕಿದ್ದರೆ. 50 ಲಕ್ಷ ಮೌಲ್ಯದ ಚರಾಸ್ಥಿ ಸ್ಥಿರಾಸ್ಥಿಗಳನ್ನು ಮುಟ್ಟುಗೋಲು ಆದೇಶ ಹೊರಡಿಸಿ ಸಕ್ಷಮ ಪ್ರಾಧಿಕಾರದ ಅನುಮೋದನೆಯನ್ನು ಪಡೆಯುವಲ್ಲಿಯೂ ಯಶಸ್ವಿಯಾಗಿದ್ದರು.

ಗಾಂಜಾ ಮಾರಾಟದ ಅರೋಪದಲ್ಲಿ ಮಲ್ಲೇಶ್ ಎಂಬಾತನನ್ನು ಬಂಧಿಸಲಾಗಿತ್ತು. ಈತ ಕಳೆದ 10-12 ವರ್ಷಗಳಿಂದ ನಿರಂತರವಾಗಿ ಗಾಂಜಾ ಕಳ್ಳಸಾಗಣೆ ಮೂಲಕ ಮಾರಾಟವನ್ನು ಮಾಡುತ್ತಿದ್ದ. ಈ ಬಗ್ಗೆ ನಿಖರ ಮಾಹಿತಿಯನ್ನು ಪಡೆದಿದ್ದ ಸಿಸಿಬಿ ಪೊಲೀಸರು ಮಲ್ಲೇಶ್‌ನನ್ನು ಬಂಧಿಸಿದ್ದರು. ಮಲ್ಲೇಶ್ 2014 ರಿಂದ 2022ವರೆಗೂ ಗಾಂಜಾವನ್ನು ಮಾರಾಟವನ್ನು ಮಾಡಿದ್ದಾನೆ. ಈತನ ವಿರುದ್ದ 7ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.

CCB in attaching the property of drug offender for worth 1 crore 60 lakhs in Bengaluru

ಬೆಂಗಳೂರು ಗ್ರಾ. ಪೊಲೀಸರು ಕಲಿಸಿದ್ದ ಪಾಠ
ಬೆಂಗಳೂರು ಗ್ರಾಮಾಂತರ ಪೊಲೀಸರು ಅಂಜಯ್ ಕುಮಾರ್ ಎಂಬಾತನ ಆಸ್ತಿ ಪಾಸ್ತಿಯನ್ನು ಈ ಹಿಂದೆ ಮೊದಲ ಬಾರಿಗೆ ಜಪ್ತಿ ಮಾಡಿದ್ದರು. ನಗರ ಸಿಸಿಬಿ ಪೊಲೀಸರು ಮೊದಲ ಬಾರಿಗೆ ಗಾಂಜಾ ಪೆಡ್ಲಿಂಗ್ ಮಾಡಿದ್ದ ಮಲ್ಲೇಶ್ ನ ಆಸ್ತಿ ಪಾಸ್ತಿ ಜಪ್ತಿ ಮಾಡಿದ್ದರು. ರಾಜ್ಯದಲ್ಲಿ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದವರ ಆಸ್ತಿ ಮುಟ್ಟುಗೋಲಿನ ಮೂರನೇ ಪ್ರಕರಣ ಮೃತ್ಯುಂಜಯ ಎಂಬ ಆರೋಪಿಯದ್ದಾಗಿದೆ.

English summary
CCB police gave a shock to the traffickers by confiscating the property of the accused who had earned crores from the drug supply trade. The accused Mrityunjaya has confiscated the property worth 1 crore 60 lakhs earned from the drug supply business with the permission of the competent authority, Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X