#NoBandhInBengaluru, ನೋ ಎಣ್ಣೆ ಪಾರ್ಟಿ: ಪೊಲೀಸ್

ಬೆಂಗಳೂರು, ಸೆ.19: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಮೇಲುಸ್ತುವಾರಿ ಸಮಿತಿ ನಿರ್ಣಯ ಪ್ರಕಟಿಸಿರುವುದು ತಿಳಿದಿರಬಹುದು. ಈ ವಿಷಯವನ್ನು ದುರ್ಬಳಕೆ ಮಾಡಿಕೊಂಡು ಕೆಲ ಕಿಡಿಗೇಡಿಗಳು ಬೆಂಗಳೂರಿನ ಬಂದ್ ಇದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಬೆಂಗಳೂರು ನಗರ ಪೊಲೀಸರು #NoBandhInBengaluru ಎಂದು ಟ್ವೀಟ್ ಮಾಡಿದ್ದಾರೆ

ಸಿಎಂ ಅವರ ಅಧಿಕೃತ ನಿವಾಸದಲ್ಲಿ ಸೋಮವಾರ ಸಂಜೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್, ನಗರ ಪೊಲೀಸ್ ಆಯುಕ್ತ ಎನ್ ಎಸ್ ಮೇಘರಿಕ್ ಸೇರಿದಂತೆ ಹಿರಿಯ ಅಧಿಕಾರಿಗಳು ತುರ್ತು ಸಭೆ ನಡೆಸಿದರು. ಈ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ಕಾಪಾಡುವಂತೆ ಗೃಹ ಸಚಿವ ಜಿ ಪರಮೇಶ್ವರ್ ಅವರು ಸೂಚನೆ ನೀಡಿದರು. [ಕಾವೇರಿ ಕೊಳ್ಳದಲ್ಲಿ ಭುಗಿಲೆದ್ದ ಆಕ್ರೋಶ, ಹೆದ್ದಾರಿ ಬಂದ್]

Bengaluru city police commissioner orders closure of all liquor outlets

ಅದರಂತೆ ಪೊಲೀಸರು ತಮ್ಮ ಅಧಿಕೃತ ಟ್ವಿಟ್ಟರ್ ಐಡಿಯಿಂದ ನಿರಂತರವಾಗಿ ಬೆಂಗಳೂರಿನಲ್ಲಿ ಶಾಂತ ಪರಿಸ್ಥಿತಿ ಇದೆ ಎಂದು ಟ್ವೀಟ್ ಮಾಡುತ್ತಲೇ ಇದ್ದಾರೆ.

#NoBandhInBengaluru ಬೆಂಗಳೂರು ನಗರ ಶಾಂತಿಯುತವಾಗಿದ್ದು ನಾಗರೀಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಲು ಕೋರಿದೆ,ಯಾವುದೇ ತುರ್ತು ಸಂದರ್ಭಗಳಲ್ಲಿ ಡಯಲ್100ಗೆ ಕರೆ ಮಾಡಿ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಬುಧವಾರ(ಸೆ. 21) 1 ಗಂಟೆ ತನಕ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಸೆ, 25 ರ ತನಕ ಸಿಆರ್ ಪಿಸಿ ಸೆಕ್ಷನ್ 144 ಜಾರಿಯಲ್ಲಿರುತ್ತದೆ. [ವದಂತಿಗೆ ಕಿವಿ ಕೊಡಬೇಡಿ, ಸೆ.20ರಂದು ಬೆಂಗಳೂರು ಬಂದ್ ಇಲ್ಲ]

15 ಸಾವಿರ ಪೊಲೀಸರು, ಸಿವಿಎಲ್, ಸಿಎಆರ್, ಕೆಎಸ್ ಆರ್ ಪಿ, ಸಿಪಿಎಂಎಫ್ ಎಲ್ಲರೂ ನಿಮ್ಮ ರಕ್ಷಣೆಗೆ ಇದ್ದಾರೆ ಎಂದು ನಾಗರಿಕರಿಗೆ ಪೊಲೀಸರು ಅಭಯ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+