ಬೆಂಗಳೂರು ಬಂದ್: ನಮ್ಮ ಬೆಂಬಲ ಸೆಪ್ಟೆಂಬರ್ 26ಕ್ಕೆ ಅಲ್ಲ, 29ಕ್ಕೆ: ಓಲಾ ಉಬರ್ ಅಸೋಸಿಯೇಷನ್ ಅಧ್ಯಕ್ಷ ಹೀಗೆ ಅಂದಿದ್ದೇಕೆ?
ಬೆಂಗಳೂರು, ಸೆಪ್ಟೆಂಬರ್, 25: ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ನಿಲ್ಲಿಸುವಂತೆ ಒತ್ತಾಯಿಸಿ ನಾಳೆ (ಸೆಪ್ಟೆಂಬರ್ 26)ರಂದು ಬೆಂಗಳೂರು ಬಂದ್‌ಗೆ ಕನ್ನಡ ಪರ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿದ್ದವು. ಆದರೆ ಇದೀಗ ನಾಳೆಯ ಬಂದ್‌ಗೆ ನಮ್ಮ ಬೆಂಬಲವಿಲ್ಲ. ಸೆಪ್ಟೆಂಬರ್ 29ರಂದು ನಡೆಯುವ ಬಂದ್‌ಗೆ ಮಾತ್ರ ನಮ್ಮ ಎಂದು ಓಲಾ ಉಬರ್ ಅಸೋಸಿಯೇಶನ್ ಅಧ್ಯಕ್ಷ ತನ್ವೀರ್ ಪಾಷಾ ತಿಳಿಸಿದ್ದಾರೆ. ಹಾಗಾದರೆ ಇದರ ಹಿಂದಿರುವ ಉದ್ದೇಶ ಏನೆಂದು ಇಲ್ಲಿ ತಿಳಿಯಿರಿ.
ಈ ಬಗ್ಗೆ ಬೆಂಗಳೂರು ಬಂದ್ ಬಗ್ಗೆ ಸ್ಪಷ್ಟನೆ ನೀಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಉಬರ್ ಅಸೋಸಿಯೇಶನ್ ಅಧ್ಯಕ್ಷ ತನ್ವೀರ್ ಪಾಷಾ ಅವರು ಹಾಗೂ ಆದರ್ಶ್ ಆಟೋ ಹೇಳಿಕೆ ಯೂನಿಯನ್ ಅಧ್ಯಕ್ಷ ಮಂಜುನಾಥ್, ನಾವು ಬಂದ್‌ಗೆ ಬೆಂಬಲ ನೀಡುವುದಿಲ್ಲ ಅಂತಾ ಹೇಳಿಲ್ಲ. ನಾಳೆಯ ಬಂದ್‌ಗೆ ನಮ್ಮ ಬೆಂಬಲವಿಲ್ಲ ಅಷ್ಟೇ. ಸೆಪ್ಟೆಂಬರ್ 29ರಂದು ನಡೆಲಿರುವ ಬಂದ್‌ಗೆ ಬೆಂಬಲ ಸೂಚಿಸಿದ್ದೇವೆ ಎಂದಿದ್ದಾರೆ.

ಎರಡು ದಿನ ಬಂದ್ ಮಾಡುವ ಪರಿಸ್ಥಿತಿಯಲ್ಲಿ ನಮ್ಮ ಚಾಲಕರ ವರ್ಗ ಇಲ್ಲ. ಆರ್ಥಿಕ ಸಂಕಷ್ಟದ ಸುಳಿಯಲ್ಲಿದ್ದೇವೆ. ಎರಡು ದಿನ ದುಡಿಮೆ ಕಳೆದು ಕೊಳ್ಳಲು ಸಾಧ್ಯವಿಲ್ಲ ಎಂಬ ಕೂಗು ನಮ್ಮ ಸಂಘಟನೆಗಳ ಚಾಲಕರದ್ದಾಗಿದೆ. ಹಾಗಾಗಿ ಕನ್ನಡಪರ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ 29ನೇ ತಾರೀಖಿನ ಕರ್ನಾಟಕ ಬಂದ್‌ಗೆ ಮಾತ್ರ ನಮ್ಮ ಬೆಂಬಲ ಎಂದು ಉಬರ್ ಅಸೋಸಿಯೇಶನ್ ಅಧ್ಯಕ್ಷ ತನ್ವೀರ್ ಪಾಷಾ ಅವರು ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications