Get Updates
Get notified of breaking news, exclusive insights, and must-see stories!

ಕಾವೇರಿ ವಿವಾದ: ತಮಿಳುನಾಡು ಸಿಎಂ ಜತೆ ಮಾತನಾಡಲು ಸಿದ್ದರಾಮಯ್ಯಗೆ ಹೆಚ್ಚಾದ ಒತ್ತಡ

ಬೆಂಗಳೂರು, ಸೆಪ್ಟಂಬರ್ 29: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕಾವೇರಿ ನದಿ ನೀರು ಹಂಚಿಕೆ ವಿವಾದ ಭುಗಿಲೆದ್ದಿದೆ. ಇತ್ತ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮತ್ತು ಸುಪ್ರೀಂ ಕೋರ್ಟ್‌ ನೀರು ಬಿಡುವ ಬಗ್ಗೆ ನಿರ್ದೇಶನ ನೀಡುತ್ತಿದೆ. ನೀರು ಹರಿಸಲು ಸಾಧ್ಯವಿರದ ಹೊತ್ತಿನಲ್ಲಿ ಸಮಸ್ಯೆ ಪರಿಹಾರಕ್ಕೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಜೊತೆ ಮಾತುಕತೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೆಚ್ಚಾಗುತ್ತಿದೆ.

ಕರ್ನಾಟಕವು ತಮಿಳುನಾಡಿಗೆ 10,000 ಕ್ಯೂಸೆಕ್ ನೀರು ಬಿಡುವಂತೆ CWMA ನಿರ್ದೇಶನ ನೀಡಿದ ಬಳಿಕ ಕಳೆದ ಆಗಸ್ಟ್‌ ತಿಂಗಳಲ್ಲಿ ಕಾವೇರಿ ವಿವಾರ ಉಲ್ಬಣಿಸಿತು. ವಿರೋಧ ಪಕ್ಷಗಳು (BJP-JDS) ಮತ್ತು ರೈತ ಸಂಘಗಳು ಸಿದ್ದರಾಮಯ್ಯ ತಮಿಳುನಾಡಿಗೆ ಚರ್ಚೆ ನಡೆಸಬೇಕೆಂದು ಒತ್ತಾಯಿಸುತ್ತಿವೆ.

Cauvery Dispute: CM Siddaramaiah Should Talk To CM MK Satalin of Tamil Nadu: BJP Said

ತಮಿಳುನಾಡಿಗೆ ಕಾವೇರಿ ಜಲಾನಯನ ಪ್ರದೇಶದಲ್ಲಿನ ಈ ವರ್ಷದ ವಾಸ್ತವಾಂಶಗಳನ್ನು ಅರ್ಥ ಮಾಡಿಸಬೇಕು. ಮಾನವೀಯ ನೆಲೆಯಲ್ಲಿ ಹೆಚ್ಚಿನ ನೀರು ಬಿಡುಗಡೆಗೆ ಒತ್ತಾಯಿಸದಂತೆ ಸಿದ್ದರಾಮಯ್ಯ ಅವರು ಮನವೊಲಿಸಬೇಕು. ಇದೇ ರೀತಿಯ ಪರಿಸ್ಥಿತಿ ಎದುರಾದಾಗ ಉಭಯ ರಾಜ್ಯಗಳ ಸಿಎಂಗಳು ಪರಸ್ಪರ ಮಾತುಕತೆ ನಡೆಸಿದ ಹಿಂದಿನ ನಿದರ್ಶನಗಳು ಇವೆ ಎಂದು ವಿಪಕ್ಷಗಳು ಉಲ್ಲೇಖಿಸಿವೆ.

ಕರ್ನಾಟಕದ ಸರ್ಕಾರ ತಮಿಳುನಾಡು ರಾಜ್ಯ ಸರ್ಕಾರದ ಜೊತೆಗೆ ಮಾತನಾಡಲು ಪ್ರಯತ್ನಿಸಬೇಕು ಎಂದು ಮಾಜಿ ಜಲಸಂಪನ್ಮೂಲ ಸಚಿವ ಬಿಜೆಪಿ ನಾಯಕ ಗೋವಿಂದ ಕಾರಜೋಳ ಆಗ್ರಹಿಸಿದರು.

ತಮಿಳುನಾಡು ಸಿಎಂಗೆ ವಾಸ್ತವ ಸ್ಥಿತಿ ತಿಳಿಸಿ

ರಾಜ್ಯದಲ್ಲಿರುವ ವಾಸ್ತವ ಪರಿಸ್ಥಿತಿಗಳನ್ನು ವಿವರಿಸಲು ಮಾತುಕತೆ ನಮಗೆ ಅವಕಾಶ ನೀಡುತ್ತದೆ. ಸಭೆಯು ಅಪೇಕ್ಷಿತ ಫಲಿತಾಂಶಗಳನ್ನು ನೀಡದಿರಬಹುದು, ಆದರೆ ನೀವು ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಹೀಗಾದರೆ ಸಮಸ್ಯೆಗೆ ಮುಕ್ತಿ ಸಿಗುವುದಿಲ್ಲ. INDIA ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್ ಮತ್ತು ಡಿಎಂಕೆ ನಡುವಿನ ಸೌಹಾರ್ದ ಸಂಬಂಧ ಸರ್ಕಾರವು ಜೂನ್‌ನಲ್ಲಿಯೇ ಈ ವಿಷಯದ ಬಗ್ಗೆ ರಾಜಕೀಯ ಸಮಾಲೋಚನೆ ನಡೆಸಬೇಕಿತ್ತು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

Cauvery Dispute: CM Siddaramaiah Should Talk To CM MK Satalin of Tamil Nadu: BJP Said

ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮಾತನಾಡಲು ಮುಂದಾದರೆ ಎಂಕೆ ಸ್ಟಾಲಿನ್ ಮಾತನಾಡಲು ಒಪ್ಪಿಕೊಳ್ಳಬಹುದು. ಮಾತುಕತೆಗಳು ಯಾವುದೇ ಫಲಿತಾಂಶವನ್ನು ನೀಡದಿರಬಹುದು. ಆದರೆ ರಾಜ್ಯ ಸಂಕಷ್ಟದಲ್ಲಿರುವಾಗ ಪ್ರಯತ್ನಿಸುವುದರಲ್ಲಿ ತಪ್ಪೇನು? ಎಂದು ವಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿಯವರ ಮಧ್ಯಸ್ಥಿಕೆ ವಹಿಸಿದರೆ ಸಮಸ್ಯೆ ಪರಿಹಾರವಾಗುತ್ತಿದೆ ಎಂದು ಮಾತ್ರ ಸರ್ಕಾರ ಹೇಳುತ್ತಿದೆ.

ಮಾತುಕತೆಯಿಂದ ಸಮಸ್ಯೆ ಬಗೆಹರಿಯಲ್ಲ?

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ಅವರು, ತಮಿಳುನಾಡು ಜೊತೆಗೆ ಮಾತುಕತೆಯ ಸಲಹೆಗಳು ಕೆಲಸಕ್ಕೆ ಬರುವುದಿಲ್ಲ. ಉಭಯ ಮುಖ್ಯಮಂತ್ರಿಗಳು ಮಾತನಾಡಿದರೆ ಸಮಸ್ಯೆ ಪರಿಹಾರವಾಗುವುದಿಲ್ಲ. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ ಮತ್ತು ರಾಷ್ಟ್ರದ ಮುಖ್ಯಸ್ಥರಾಗಿ ಪ್ರಧಾನ ಮಂತ್ರಿಯವರು ಉಪಕ್ರಮವನ್ನು ತೆಗೆದುಕೊಳ್ಳಬೇಕು ಮತ್ತು ಎರಡೂ ರಾಜ್ಯಗಳನ್ನು ಸಂಧಾನಕ್ಕೆ ತರಬೇಕು ಎಂದು ಅವರು ತಿಳಿಸಿದರು.

ಇದೆಲ್ಲ ಗಮನಿಸಿದರೆ ಸದ್ಯಕ್ಕೆ ಈ ಸಮಸ್ಯೆ ಹೀಗೆ ಜೀವಂತವಾಗಿರುವ ನೀರಿಕ್ಷೆಗಳು ಇವೆ ಎಂಬ ಮಾತುಗಳು ಕೇಳಿ ಬಂದಿವೆ. ಕಾರಣ ಉತ್ತಮ ಮಳೆಯಾದರೆ ಯಾವುದೇ ಸಮಸ್ಯೆಗಳು ಇರುವುದಿಲ್ಲ. ಮಳೆ ಕೊರತೆ ಆದಾಗ ತಮಿಳುನಾಡು ಖ್ಯಾತೆ ತೆಗೆಯುತ್ತದೆ. ರಾಜ್ಯದಲ್ಲಿ ವಾಸ್ತವ ಸ್ಥಿತಿ ಮನದಟ್ಟು ಮಾಡಿದರೆ, ಸಂಕಷ್ಟ ಸೂತ್ರ ಅನುಸರಿಸಿದರೆ ಮಾತ್ರ ಸಮಸ್ಯೆ ನಿರಾಳವಾಗುತ್ತದೆ ಎಂದು ಕೆಲ ನಾಯಕರು ಸರ್ಕಾರಕ್ಕೆ ಒತ್ತಾಯಿಸಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+