ಬೆಂಗಳೂರಿನಲ್ಲಿ ಪುರಾತನ ಹೋಟೆಲ್ 60 ಕೋಟಿಗೆ ಮಾರಾಟ!

ಬೆಂಗಳೂರು, ಸೆಪ್ಟೆಂಬರ್ 5: ಬೆಂಗಳೂರು ಕೇಂದ್ರ ಭಾಗದಲ್ಲಿರುವ ಪುರಾತನ ಕಟ್ಟಡಗಳಿಗೆ ಭಾರಿ ಬೇಡಿಕೆ ಬಂದಿದ್ದು ಇತ್ತೀಚಿನ ದಿನಗಳಲ್ಲಿ ಅತಿಹೆಚ್ಚು ಅಂದರೆ 60 ಕೋಟಿ ರೂ,ಗಳಿಗೆ ಹಳೆಯ ಕಟ್ಟಡವೊಂದು ಮಾರಾಟವಾಗಿದ್ದು ಬೆಂಗಳೂರಿನಲ್ಲಿ ಇನ್ನೂಕೂಡ ಆಸ್ತಿಗಳಿಗೆ ಮೌಲ್ಯವಿದೆ ಎಂದು ಸಾಬೀತಾಗಿದೆ.

ಬೆಂಗಳೂರು ಕೇಂದ್ರ ಭಾಗದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಕಾವೇರಿ ಕಾಂಟಿನೆಂಟಲ್ ಕಟ್ಟಡವು 60 ಕೋಟಿ ರೂ.ಗಳಿಗೆ ಮಾರಾಟವಾಗಿದ್ದು, 41 ಸಾವಿರ ಚದರಡಿ ವಿಸ್ತೀರ್ಣ ಹೊಂದಿದೆ. ಒಂದು ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿದ್ದ ಈ ಕಟ್ಟಡವು ಇತ್ತೀಚಿನ ದಿನಗಳಲ್ಲಿ ಮಾರಾಟವಾದ ಕಟ್ಟಡಗಳಲ್ಲಿ ದುಬಾರಿ ಕಟ್ಟಡ ಎನಿಸಿದೆ.

ರಮೇಶ್ ಸುಂದರ ಮೂರ್ತಿಯವರ ಕುಟುಂಬಕ್ಕೆ ಸೇರಿದ ಈ ಕಟ್ಟಡವನ್ನು ಗ್ಲೋಬಲ್ ಟೆಕ್ನಾಲಜಿ ಪ್ರಮೋಟರ್ ಸತೀಶ್ ಚಂದ್ರ ಖರೀದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Cauvery continental sold for rs 60 crores

ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಕಂಪನಿಯೊಂದು 45ಕೋಟಿಗೆ ಕೇಳಿತ್ತು ಆದರೆ ಸತೀಶ್ ಚಂದ್ರ 60ಕೋಟಿ ನೀಡಲು ಸಿದ್ಧವಿದ್ದ ಕಾರಣ ಈ ಕಟ್ಟಡವನ್ನು ಅವರಿಗೆ ನೀಡಲಾಯಿತು.

1970ರಲ್ಲಿ ಈ ಕಟ್ಟದ ಉದ್ಘಾಟನೆ ನಡೆದಿತ್ತು. ಅಂದು ಸಚಿವೆಯಾಗಿದ್ದ ಸರೋಜಿನಿ ಮಹಿಷಿ ಈ ಕಟ್ಟಡವನ್ನು ಉದ್ಘಾಟಿಸಿದ್ದರು. ಇತ್ತೀಚೆಗೆ ಮಾರಾಟವಾದ ಕಟ್ಟಗಳ ಪೈಕಿ ಈ ಕಟ್ಟಡ ಅತಿಹೆಚ್ಚು ಬೆಲೆಗೆ ಮಾರಾಟವಾಗಿದೆ. ಯುಬಿ ಸಿಟಿಯ ಎದುರಿರುವ 10ಸಾವಿರ ಚದರಡಿ ಪ್ರದೇಶವು 45 ಕೋಟಿ ರೂ.ಗೆ ಮಾರಾಟವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+