• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಫ್ಟ್‌ವೇರ್ ಕಂಪೆನಿ ಹೆಸರಿನಲ್ಲಿ ಅಮೆರಿಕಾ ಪ್ರಜೆಗಳಿಗೆ ವಂಚಿಸುತ್ತಿದ್ದ 11 ಆರೋಪಿಗಳ ಸೆರೆ

|
Google Oneindia Kannada News

ಬೆಂಗಳೂರು, ಜು. 08: ಸಾಫ್ಟ್‌ವೇರ್ ಕಂಪನಿ ಹೆಸರಿನಲ್ಲಿ ದೋಖಾ ಕಚೇರಿ ತೆಗೆದು ಅಮೆರಿಕಾ ಸೇರಿದಂತೆ ವಿದೇಶಿ ಪ್ರಜೆಗಳಿಗೆ ವಂಚನೆ ಮಾಡುತ್ತಿದ್ದ ದೊಡ್ಡ ಮಟ್ಟದ ಸೈಬರ್ ವಂಚಕ ಜಾಲವನ್ನು ವೈಟ್‌ ಫೀಲ್ಡ್ ವಿಭಾಗದ ಪೊಲೀಸರು ಪತ್ತೆ ಮಾಡಿದ್ದಾರೆ.

ಈ ಸಂಬಂಧ ಹನ್ನೊಂದು ಆರೋಪಿಗಳನ್ನು ಬಂಧಿಸಿದ್ದು, ವೈಟ್‌ಫೀಲ್ಡ್ ವಿಭಾಗ ಪೊಲೀಸರ ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಮಹದೇವಪುರ ಹಾಗೂ ವೈಟ್‌ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಕೇಸು ದಾಖಲಿಸಿದ್ದು, ಮೂರು ಕೋಟಿ ಮೌಲ್ಯದ ಲ್ಯಾಪ್‌ಟಾಪ್, ಕಂಪ್ಯುಟರ್ಗಳನ್ನು ವಶಪಡಿಸಿಕೊಂಡಿದ್ದಾರೆ.

ರೈತರಿಗೆ ಕೃಷಿ ಸೌಕರ್ಯ ನೀಡುತ್ತಿರುವ 'ಸಿಂಗಲ್ ವಿಂಡೋ ರಿಜಿಸ್ಟ್ರೇಷನ್' ಸಾಫ್ಟ್‌ವೇರ್ರೈತರಿಗೆ ಕೃಷಿ ಸೌಕರ್ಯ ನೀಡುತ್ತಿರುವ 'ಸಿಂಗಲ್ ವಿಂಡೋ ರಿಜಿಸ್ಟ್ರೇಷನ್' ಸಾಫ್ಟ್‌ವೇರ್

ವೈಟ್ ಫೀಲ್ಡ್‌ನ ಗಾಯತ್ರಿ ಟೆಕ್ ಪಾರ್ಕ್‌ನಲ್ಲಿ ಏಥಿಕಲ್ ಇನ್ ಫೋ ಪ್ರೈ ಲಿ ಹೆಸರಿನಲ್ಲಿ ಕಂಪನಿ ತೆರೆದಿದ್ದ ವಂಚಕರು, ನಕಲಿ ಕಾಲ್‌ಸೆಂಟರ್‌ಗಳನ್ನು ತೆರೆದು ವಿದೇಶಿ ಪ್ರಜೆಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಕಳೆದ ಎರಡು ವರ್ಷದಿಂದ ಈ ಜಾಲವನ್ನು ವಿಸ್ತರಿಸಿದ್ದರು. ಇದರ ಕಿಂಗ್‌ಪಿನ್‌ಗಳಾದ ರಿಷಿವ್ಯಾಸ್ ಪ್ರತೀಕ್, ಪರೀಶ್, ಹೇತ್ ಪಟೇಲ್, ಕಿರಣ್, ಸೈಯ್ಯದ್, ಸೇರಿ ಹನ್ನೊಂದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನೂರಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.ಇನ್ನೂ ಈ ಆರೋಪಿಗಳು ಗುಜಾರಾತ್ ಮೂಲದವರಾಗಿದ್ದು ಕಳೆದ ಎರಡು ವರ್ಷಗಳಿಂದ ಈ ಅಕ್ರಮ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಇಂತಹ ಮಹತ್ವದ ಕಾರ್ಯಾಚರಣೆಯನ್ನು ವೈಟ್‌ ಫೀಲ್ಡ್ ವಿಭಾಗದ ಡಿಸಿಪಿ ಎಸ್. ಗಿರೀಶ್ ಅವರ ನೇತೃತ್ವದಲ್ಲಿ ನಡೆದಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ವೈಟ್ ಫೀಲ್ಡ್ ನ ಗಾಯತ್ರಿ ಟೆಕ್ ಪಾರ್ಕ್ ನಲ್ಲಿ ಏಥಿಕಲ್ ಇನ್ ಫೋ ಪ್ರೈ,ಲಿ ಹೆಸರಿನಲ್ಲಿ ನಕಲಿ ಕಂಪನಿ ತೆರದಿದ್ದ ಆರೋಪಿಗಳು ನೂರಾರು ಟೆಲಿಕಾರ್ ಗಳ ಮೂಲಕ ಅಮೆರಿಕಾ ಪ್ರಜೆಗಳನ್ನು ಸಂಪರ್ಕ ಮಾಡ್ತಿದ್ರು. ನಿಮ್ಮ‌ಖಾತೆಯಿಂದ ಹಣ ವರ್ಗಾವಣೆ ಆಗಿದೆಯಾ ಅಂತ ಮಾತು ಶುರು ಮಾಡ್ತಿದ್ದ ಆರೋಪಿಗಳ ಹಣ ವಾಪಸ್ ಬರಬೇಕು ಅಂದ್ರೆ ಒಂದಷ್ಟು ಪ್ರೊಸಿಜರ್ ಫಾಲೋ ಮಾಡಬೇಕು ಅಂತ ನಂಬಿಸಿ ಮೋಸ ಮಾಡಿದ್ದರು. ಹಂತ ಹಂತವಾಗಿ ಬ್ಯಾಂಕ್ ಹೆಸರನ್ನು ಬಳಕೆ ಮಾಡಿ ಗ್ರಾಹಕರಿಂದ ಅಮೆಜಾನ್ ನಲ್ಲಿ ಲಕ್ಷ ಲಕ್ಷ ಗಿಫ್ಟ್ ಕಾರ್ಡ್ ಗೆ ಖರೀದಿ‌ ಮಾಡಿಸಿ ಹಣ ಸಂಪಾದನೆ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.

ಬೃಹತ್ ಜಾಲವನ್ನ ಪತ್ತೆ

ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಅಮೇರಿಕಾ ಪ್ರಜೆಗಳಿಗೆ ಬ್ಯಾಂಕ್ ಹೆಸರಿನಲ್ಲಿ ವಂಚನೆ ಮಾಡ್ತಿದ್ದ ಬೃಹತ್ ಜಾಲವನ್ನ ಪತ್ತೆ ಮಾಡಲಾಗಿದೆ. ಸಾಫ್ಟ್ ವೇರ್ ಕಂಪನಿ ಸೋಗಿನಲ್ಲಿ ಅಮೇರಿಕ ಪ್ರಜೆಗಳನ್ನ ಟ್ರ್ಯಾಪ್ ಮಾಡಿ ಅನ್‌ ಲೈನ್ ವಂಚನೆ ಮಾಡುತ್ತಿದ್ದರು. ಇನ್ನೂ ಈ ಆರೋಪಿಗಳು ತಮ್ಮ ಕಂಪನಿ ಉದ್ಯೋಗಿಗಳನ್ನು ಶಾಲಾ ವಾಹನಗಳಲ್ಲಿ ಸಾಗಿಸುತ್ತಿದ್ದರು ಎಂಬುದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.

Gang defrauding foreign customers with online tech services busted

ಸದ್ಯ ಪ್ರಕರಣ ಹಿನ್ನೆಲೆ ಅಮೆರಿಕಾ ರಾಯಭಾರಿ ಬಳಿ‌ ಮಾಹಿತಿ ಪಡೆಯಲು ಮುಂದಾಗಿದ್ದೇವೆ. ಆರೋಪಿಗಳು ಯುಎಸ್ ಪ್ರಜೆಗಳನ್ನು ಟಾರ್ಗೇಟ್ ಮಾಡ್ತಿದ್ದ ಉದ್ದೇಶ ಏನು? ಇವರಿಗೆ ಈ ನಂಬರ್ ಯಾರು ಕೊಡುತ್ತಿದ್ದರು ಎಂದು ವಿಚಾರಣೆ ನಡೆಸ್ತಿದ್ದಾರೆ.‌ ಇನ್ನೂ ಕಂಪನಿ ಯಲ್ಲಿ ‌ಕೋಟಿ ಕೋಟಿ ವಂಚನೆ ಮಾಡಿರೋ ಶಂಕೆ ವ್ಯಕ್ತವಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಡಾ. ಸುಬ್ರಮಣೇಶ್ವರ್ ರಾವ್ ತಿಳಿಸಿದ್ದಾರೆ. ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸಿಐಡಿ ಹೆಗಲೇರುವ ಸಾಧ್ಯತೆಯಿದೆ. ಮಹದೇವಪುರ ಹಾಗೂ ವೈಟ್‌ ಫೀಲ್ಡ್ ಪೊಲೀಸ್ ಠಾಣೆಗಳಲ್ಲಿ ಎರಡು ಪ್ರತ್ಯೇಕ ಕೇಸು ದಾಖಲಾಗಿವೆ.

Recommended Video

   Zameer Ahmed Khan ವಿರುದ್ಧ FIR!! ಆಸ್ತಿ ಡೀಟೇಲ್ಸ್ ನೋಡಿ ED ಅಧಿಕಾರಿಗಳೇ ಶಾಕ್ *Karnataka | OneIndia Kannada
   English summary
   Gang defrauding foreign customers with online tech services busted by Whitefield police. Arrested 11 accused.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X