Anushka Sharma: ಬೆಂಗಳೂರು ಕಂಪನಿಯ ಜಾಹೀರಾತಿನಲ್ಲಿ ಅನುಷ್ಕಾ ಶರ್ಮಾ ಮಿಂಚು, ವಿಶ್ವದ ಸುಂದರಿ ಎಂದ ಫ್ಯಾನ್ಸ್
Actress Anushka Sharma: ಬಾಲಿವುಡ್ ನಟಿ ಹಾಗೂ ಅಬ್ಬರದ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರು ವರ್ಷಗಳ ಬಳಿಕ ಮತ್ತೆ ಬೆಳ್ಳಿ ತೆರೆಗೆ ಬಂದಿದ್ದಾರೆ. ತಮ್ಮ ಸೌಂದರ್ಯದ ಮೂಲಕವೇ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ಅಸಲಿಗೆ ಇದು ಸಿನಿಮಾಗಾಗಿ ಬಂದಿದ್ದಲ್ಲ, ಬದಲಾಗಿ ಆಭರಣ ಜಾಹೀರಾತಿನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅನುಷ್ಕಾರ ಲುಕ್, ಗ್ಲಾಮರ್‍ಗೆ ಫಿದಾ ಆಗಿರುವ ಫ್ಯಾನ್ಸ್ 'ವಿಶ್ವದ ಸುಂದರ ಹುಡುಗಿ' ಎಂದೆಲ್ಲ ಬಣ್ಣಿಸಿದ್ದಾರೆ.
ಕೊನೆಯದಾಗಿ ನಟ ಶಾರುಖ್ ಖಾನ್ ಅವರೊಂದಿಗೆ "ಝೀರೋ' ಸಿನಿಮಾದಲ್ಲಿ 2018ರಲ್ಲಿ ನಟಿಸಿದ್ದರು. ಅದಾದ ಬಳಿಕ ಅವರು ತಮ್ಮ ದಾಂಪತ್ಯ ಜೀವನ, ಉದ್ಯಮಗಳಲ್ಲಿ ಬ್ಯೂಸಿಯಾಗಿದ್ದರು. ಆಗಾಗ ಪತಿ ವಿರಾಟ್ ಕೊಯ್ಲಿ ಬೆಂಬಲಿಸಲು ಕ್ರಿಕೆಟ್ ಮೈದಾನಗಳಲ್ಲಿ ಕಾಣಸಿಕೊಂಡಿದ್ದು ಬಿಟ್ಟರೆ ದೊಡ್ಡ ಪರದೆಯಲ್ಲಿ ಕಾಣಿಸಿರಲಿಲ್ಲ. ವಿಶೇಷವೆಂದರೆ ಇದೀಗ ಬೆಂಗಳೂರು ಮೂಲದ ಆಭರಣ ಕಂಪನಿ GIVA (ಗಿವಾ)ದ "ಹೀರ್' ಆಭರಣದ ಜಾಹೀರಾತಿನಲ್ಲಿ ಅನುಷ್ಕಾ ಶರ್ಮಾ ಕಾಣಿಸಿಕೊಡಿದ್ದಾರೆ. ಅವರ ಚೆಂದದ ನೋಟಕ್ಕೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ.

ಮೇ 12ರಂದು ಜಾಹೀರಾತು ಬಿಡುಗಡೆ, ಮಿಂಚಿದ ಅನುಷ್ಕಾ
ಮೇ 12ರಂದು ಯೂಟ್ಯೂಬ್‌ನಲ್ಲಿ ಅನುಷ್ಕಾರ ಆಭರಣ ಜಾಹೀರಾತನ್ನು ಬಿಡುಗಡೆ ಮಾಡಲಾಗಿದೆ. ಇದರ ವಿಡಿಯೋ ಇನ್‌ಸ್ಟಾಗ್ರಾಮ್ ಹಾಗೂ ರೆಡ್ಡಿಟ್‌ನಲ್ಲಿ ಕಂಪನಿ ಹಂಚಿಕೊಳ್ಳಲಾಗಿದೆ. ವರ್ಷಗಳ ಬಳಿಕ ನಟಿಯನ್ನು ಕಂಡ ಅವರ ಅಭಿಮಾನಿಗಳು ಸಾಕಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ನೆಚ್ಚಿನ ನಟಿಯನ್ನು ಹೊಗಳಿದ್ದಾರೆ.
ಪೋಸ್ಟ್‌ಗೆ ಕಾಮೆಂಟುಗಳ ಸುರಿಮಳೆ
ಹಣೆಯ ಮೇಲೆ ಕೆಂಪು ಬಿಂದಿ, ಹಸಿರು ಸೀರೆಯೂಟ್ಟು, ಗಿವಾ (GIVA)ಆಭರಣ ಧರಿಸಿ ಕಾಣಿಸಿಕೊಂಡಿದ್ದಾರೆ. ಅವರನ್ನು ನೋಡುತ್ತಿದ್ದಂತೆ ಅಭಿಮಾನಿಗಳು ಕಾಮೆಂಟ್‌ಗಳ ಸುರಿಮಳೆ ಸುರಿಸಿದ್ದಾರೆ. 'ಇವರಿಗೆ 38 ವರ್ಷವೆಂದು ಹೇಳುತ್ತೀದ್ದೀರಾ, ತುಂಬಾ ಸುಂದರ ಅನುಷ್ಕಿ' ಎಂದು ನೆಟ್ಟಿಗರೊಬ್ಬರು ಆಶ್ಚರ್ಯದಿಂದ ಪ್ರತಿಕ್ರಿಯಿಸಿದ್ದಾರೆ. 'ತುಂಬಾ ವರ್ಷಗಳ ಬಳಿಕ ನೋಡುತ್ತಿದ್ದೇನೆ. ವಿಭಿನ್ನವಾಗಿ ಕಾಣಿಸುತ್ತಿದ್ದಾರೆ' ಎಂದು ಇನ್ನೊಬ್ಬರು ಹೇಳಿದ್ದಾರೆ. 'ಅವರ ಮುಖದಲ್ಲಿ ಏನೋ ಬದಲಾದಂತಿದೆ' ಎಂದರೆ, ನಾಲ್ಕನೇಯರು 'ಗುರುತಿಸಲಾಗದಂತೆ ಅನುಷ್ಕಾ ಬದಲಾಗಿದ್ದಾರೆ, 'ಎರಡು ಮಕ್ಕಳ ತಾಯಿ ಆದರೂ ಮೊದಲಿನಂತೆಯೇ ಅದ್ಭುವಾಗಿ ಕಾಣುತ್ತಿದ್ದಾರೆ.' 'ವಿಶ್ವದ ಸುಂದರ ಹುಡುಗಿ' ಎಂದು ಮನದಾಳದ ಅಭಿಪ್ರಾಯಗಳನ್ನು ಫ್ಯಾನ್ಸ್ ಹೊರ ಹಾಕಿದ್ದಾರೆ.
ಕುಟುಂಬದ ಜವಾಬ್ದಾರಿ ನಿರ್ವಹಿಸುವಲ್ಲಿ, ಮಕ್ಕಳ ಪಾಲನೆ ಪೋಷಣೆಯಲ್ಲಿ ಅನುಷ್ಕಾ ತೊಡಗಿಕೊಂಡಿದ್ದಾರೆ. ಪತಿ ವಿರಾಟ್ ನನ್ನು ಹುರಿದುಂಬಿಸಲು ಕ್ರಿಕೆಟ್ ಮೈದಾನದಲ್ಲಿ ಆಗಾಗ ಕಾಣಿಸುತ್ತಾರೆ. ಇದರ ಹೊರತು ಯಾವುದೇ ಸಿನಿಮಾಗಳಲ್ಲಿ ನಟಿ ಕಾಣಿಸಿಕೊಂಡಿರಲಿಲ್ಲ. ಇದೀಗ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಅನುಷ್ಕಾರ ವೃದ್ಧಾಪ್ಯ, ತಾಯ್ತನದ ಕುರಿತು ಚರ್ಚೆಗಳು ಆದಾಗಲೂ ಫ್ಯಾನ್ಸ್ ನಟಿಯ ಬೆಂಬಲಕ್ಕೆ ನಿಂತಿದ್ದರು.
ರಿಲೀಸ್ ಆಗದ ಅನುಷ್ಕಾ ಶರ್ಮಾರ ಹೊಸ ಸಿನಿಮಾ
ಹಿಂದಿಯ 'ಝೀರೋ' ಸಿನಿಮಾ ಬಳಿಕ 'ಚಕ್ಡಾ ಎಕ್ಸ್‌ಪ್ರೆಸ್' ಸಿನಿಮಾದಲ್ಲಿ ಅನುಷ್ಕಾ ಅಭಿನಯಿಸಿದ್ದಾರೆ. ಅದರ ಶೂಟಿಂಗ್ 2022ರಲ್ಲಿ ಪೂರ್ಣಗೊಂಡಿದೆ. ಆದರೆ ಸಿನಿಮಾ ಬಿಡುಗಡೆ ಇನ್ನೂವರೆಗೂ ಆಗಿಲ್ಲ. ಅದಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.














Click it and Unblock the Notifications