Amruthadhaare Serial: ಕೇಡಿ ವಿಲನ್ ಜೈದೇವ್ ಬದುಕೇ ಉಲ್ಟಾ: ಈಗ ಬೇಬಿ ಮನೆಯಲ್ಲಿ ಕೆಲಸದಾಳು, ಪ್ರೇಕ್ಷಕರಿಗೆ ಶಾಕ್ - ಹೊಸ ಟ್ವಿಸ್

Amruthadhaare Serial: ಕನ್ನಡದ ಪ್ರಮುಖ ಸೀರಿಯಲ್‌ಗಳಲ್ಲಿ ಒಂದಾಗಿರುವ ಅಮೃತಧಾರೆ ಸೀರಿಯಲ್ ರೋಚಕ ತಿರುವು ಪಡೆದುಕೊಂಡಿದೆ. ಅಮೃತಧಾರೆ ಸೀರಿಯಲ್‌ನಲ್ಲಿ ವಿಲನ್ ಕೇಡಿ ಜೈದೇವ್ ಅಕ್ಷರಶಃ ಬೀದಿಗೆ ಬಿದ್ದಿದ್ದಾನೆ. ಜೈದೇವ್‌ನ ಇದೀಗ ತನ್ನ ಎರಡನೇ ಪತ್ನಿಯ ಮನೆಯಲ್ಲಿ ಕೆಲಸದಾಳಾಗಿದ್ದೇನೆ. ಪೊಲೀಸ್ ಸ್ಟೇಷನ್‌ನಿಂದ ಸುಸ್ತಾಗಿ ಹೊರಗೆ ಬಂದು ಎಲ್ಲಿಯೂ ಊಟ ಸಿಗದೆ ನಿದ್ದೆಯೂ ಮಾಡದ ಜೈದೇವ್‌ಗೆ ಬೇಬಿ ಇನ್ನಷ್ಟು ಕೆಲಸ ಕೊಟ್ಟಿದ್ದಾಳೆ.

ಜೈ ಊಟ ಮಾಡಿದ್ಯಾ ಅಂತ ಕೇಳಿದ್ದು, ಇದಕ್ಕೆ ಇಲ್ಲ ಅಂತ ಜೈದೇವ್ ಹೇಳಿದ್ದಾನೆ. ಇದಕ್ಕೆ ಬೇಬಿ ಹಸಿವಿನಿಂದ ಇರೋಕೆ ಆಗುತ್ತಾ ಬಾ ಊಟ ಮಾಡು ಅಂತ ಕರೆದಿದ್ದಾಳೆ. ಆದರೆ ಆಗಲೇ ಕೆಲಸದವರು ಎರಡು ದಿನ ರಜೆ ಕೇಳಿದ್ರು ಆದರೆ ರಜೆ ಕೊಟ್ಟರೆ ಕೆಲಸ ಮಾಡದೆ ಬಿಟ್ಟು ಹೋಗಿದ್ದಾರೆ. ನೋಡು ಬಾಕ್ಸ್‌ ಎಲ್ಲ ಬಿದ್ದಲ್ಲೇ ಇದೆ. ಈಗ ಈ ಬಾಕ್ಸ್‌ನ ನಾನೇ ಮೇಲಿಡಬೇಕು ಎಲ್ಲ ನನ್ನ ಕರ್ಮ ಅಂತ ಬೇಬಿ ಹೇಳಿದ್ದಾಳೆ. ಅದಕ್ಕೆ ಜೈದೇವ್‌ ಬೇಬಿ ಅದನ್ನೆಲ್ಲ ನಾನೇ ಮೇಲೆ ತೆಗೆದುಕೊಂಡು ಹೋಗಿ ಇಡ್ತೀನಿ ಅಂತ ಜೈದೇವ್ ಹೇಳಿದ್ದಾನೆ. ಅದಕ್ಕೆ ಬೇಬಿ ನೀನು ಈ ಕೆಲಸ ಎಲ್ಲ ಮಾಡ್ತೀಯ ಅಂತ ಕೇಳಿದ್ದಾಳೆ. ಇನ್ನ ಮೇಲೆ ಈ ಕೆಲಸ ಎಲ್ಲ ನಾನೇ ಮಾಡಬೇಕಲ್ವ ಅಂತ ಜೈದೇವ್‌ ಕೇಳಿದ್ದಾನೆ. ಎಲ್ಲ ನಾನೇ ಮಾಡ್ತೀನಿ ಅಂತ ಹೇಳಿದ್ದಾನೆ. ಕಷ್ಟಪಟ್ಟು ಬಾಕ್ಸ್‌ಗಳನ್ನು ಸ್ಟೋರೂಮ್‌ಗೆ ಕೇಡಿ ತೆಗೆದುಕೊಂಡು ಹೋಗಿದ್ದಾನೆ. ನೋಡ್ತಾ ಇರು ನಾನು ನಿನ್ನನ್ನು ಹೇಗೆಲ್ಲ ಯೂಸ್ ಮಾಡಿಕೊಳ್ತೀನಿ ಅಂತ ಜೈದೇವ್ ಹೇಳಿದ್ದಾನೆ.

Amruthadhaare Serial

ಮಹಿಮಾ ಗರ್ಭಿಣಿ

ಇನ್ನು ಮಹಿಮಾ ಗರ್ಭಿಣಿಯಾಗಿದ್ದಾರೆ. ಗೌತಮ್ ಮನೆಗೆ ಭೇಟಿ ನೀಡಿರುವ ಮಹಿಮಾ ಎಲ್ಲರೊಂದಿಗೆ ಮಾತನಾಡಿರುವುದು ಹೊಸ ಎಪಿಸೋಡ್‌ನಲ್ಲಿ ಇದೆ. ಆದರೆ ಮನೆಗೆ ಬಂದ ಮಹಿಮಾಗೆ ಗೌತಮ್ ಸಣ್ಣದಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ರೀತಿಯ ಸಂದರ್ಭದಲ್ಲಿ ನೀನು ಹೆಚ್ಚು ಪ್ರವಾಸ ಮಾಡಬಾರದು ಎಲ್ಲಿಯೂ ಓಡಾಡಬಾರದು ಅಂತ ಹೇಳಿದ್ದಾರೆ. ಅದಕ್ಕೆ ಮಹಿಮಾ ನನ್ನು ಇಷ್ಟೊಂದು ರಿಸ್ಟ್ರಿಕ್ ಮಾಡಬೇಡಿ, ನನ್ನ ಇಷ್ಟದಂತೆ ಬಿಡಿ ಅಂತ ಹೇಳಿದ್ದಾಳೆ. ಇದಕ್ಕೆ ಗೌತಮ್ ನಿನ್ನ ಇಷ್ಟದ ಪ್ರಕಾರವೇ ಇರು ಆದರೆ ಈ ರೀತಿಯ ಸಮಯದಲ್ಲಿ ಹೆಚ್ಚು ಕಾಳಜಿ ವಹಿಸಬೇಕು ಅಂತ ಸಲಹೆ ನೀಡಿದ್ದಾರೆ. ಇದಕ್ಕೆ ಮಹಿಮಾ ಆಯ್ತು ಅಣ್ಣ ಈ ಹಿಂದೆ ಮಾಡಿದ ತಪ್ಪನ್ನು ಈಗ ಮಾಡಲ್ಲ ಅಂತ ಹೇಳಿದ್ದಾರೆ.

ಮಿಂಚು - ಅಪ್ಪು ಮುದ್ದಿನ ಕಿತ್ತಾಟ

ಇನ್ನು ಅಮೃತಧಾರೆ ಸೀರಿಯಲ್‌ನಲ್ಲಿ ಮಿಂಚು ಹಾಗೂ ಅಪ್ಪು ನಡುವಿನ ಮುದ್ದಿನ ಕಿತ್ತಾಟವು ಭೂಮಿಕಾ ಹಾಗೂ ಗೌತಮ್‌ಗೆ ಬಿಸಿ ತುಪ್ಪವಾಗಿದೆ. ಅಪ್ಪ - ಅಮ್ಮನಿಗೆ ಯಾರ ಮೇಲೆ ತುಂಬಾ ಇಷ್ಟ ಇದೆ ಎನ್ನುವುದನ್ನು ತಿಳಿದುಕೊಳ್ಳುವುದಕ್ಕೆ ಇಬ್ಬರೂ ಮಕ್ಕಳು ಸರ್ಕಸ್ ಮಾಡುತ್ತಿದ್ದಾರೆ. ಅಪ್ಪುವಿನ ವರ್ತನೆಗೆ ಗೌತಮ್ ದಿವಾನ್ ಅವರು ಸಣ್ಣದಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಪ್ಪುವಿಗೆ ಗೌತಮ್‌ ನೋಡಪ್ಪ ನೀನು ಹಿಂಗೆ ಮಾಡಿದರೆ ನಾನು ಮಾತೇ ಆಡಲ್ಲ ಅಂತ ಹೇಳಿದ್ದಾರೆ. ಏನು ಕೊಡಿಸುವುದು ಇಲ್ಲ, ಎಲ್ಲಿಗೂ ಕರ್ಕೊಂಡೂ ಹೋಗುವುದಿಲ್ಲ ಎಂದು ಮಿಂಚು - ಅಪ್ಪುಗೆ ಗೌತಮ್ ಹೇಳಿದ್ದಾರೆ. ಅಪ್ಪುಗೆ ಹೇಳಿದ್ದೇಲ್ಲವೂ ನಿನಗೂ ಅನ್ವಯಿಸುತ್ತದೆ ಮಿಂಚು ಅಂತ ಹೇಳಿದ್ದಾರೆ. ಒಳ್ಳೆಯ ಮಕ್ಕಳಾಗಿ ಇರ್ತೀರಾ ತಾನೆ ಅಂತ ಹೇಳಿದ್ದಾರೆ. ಇದಕ್ಕೆ ಮಿಂಚು ಸರಿ ಪಪ್ಪ ಅಂತ ಹೇಳಿದ್ದು, ಅದಕ್ಕೆ ಭೂಮಿಕಾ ಸರಿ ಪಪ್ಪ ಅಲ್ಲ ಸಾರಿ ಪಪ್ಪ ಅಂತ ಹೇಳಿ ಅಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+