Chinnaswamy Stampede: ವಿಸ್ಕಿ ಪ್ರಚಾರ ಮಾಡುವುದಕ್ಕೆ ಆರ್‌ಸಿಬಿ ಕಾರ್ಯಕ್ರಮನಾ?; ಸಿಎಂ, ಡಿಸಿಎಂ ವಿರುದ್ಧ ಸಿಟಿ ರವಿ ಆಕ್ರೋಶ
M.Chinnaswamy Stadium Stampede: ಆರ್‌ಸಿಬಿ ಟ್ರೋಫಿ ಗೆದ್ದ ಹಿನ್ನೆಲೆ ಬೆಂಗಳೂರಿನಲ್ಲಿ ವಿಜಯೋತ್ಸವ ಆಯೋಜಿಸಲಾಗಿತ್ತು. ಈ ವೇಳೆ ಕಾಲ್ತುಳಿತ ಸಂಭವಿಸಿ 11 ಮಂದಿ ಸಾವನ್ನಪ್ಪಿದ್ದರು. ಇದೇ ವೀಚಾರ ಇಟ್ಟುಕೊಂಡು ವಪಕ್ಷಗಳು ಕಾಂಗ್ರೆಸ್ ವಿರುದ್ಧ ಕೆಂಡಕಾರುತ್ತಲಿವೆ. ಹಾಗೆಯೇ ಇದೀಗ ಸಿ.ಟಿ.ರವಿ ಅವರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರಕ್ಕೂ ಆರ್‌ಸಿಬಿಗೂ ಏನ್ ಸಂಬಂಧ? ಯಾವ ಆಧಾರದ ಮೇಲೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮ ಮಾಡಿದರು? ರಾಯಲ್ ಚಾಲೆಂಜರ್ಸ್ ಅಂದರೆ ವಿಸ್ಕಿ ಪ್ರಚಾರಕ್ಕೆ ಅಂತಾ ವಿಜಯ್ ಮಲ್ಯ ಅವರು ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ವಿಸ್ಕಿ ಪ್ರಚಾರ ಮಾಡುವುದಕ್ಕೆ ಕಾರ್ಯಕ್ರಮ ಮಾಡಿದರಾ ಎಂದು ಸಿ.ಟಿ.ರವಿ ಆಕ್ರೋಶ ವ್ಯಕ್ಯಪಡಿಸಿದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ನಮ್ಮ ರಾಜ್ಯವನ್ನು ಪ್ರತಿನಿಧಿಸಿತ್ತಾ? ತಂಡದಲ್ಲಿ ರಾಜ್ಯದ ಆಟಗಾರರು ಯಾರದ್ರು ಇದ್ದಾರಾ? ಮಾಲೀಕರು ಕರ್ನಾಟಕದವರು ಇದ್ರಾ? ಸರ್ಕಾರಕ್ಕೆ ಮಾಡುವುದಕ್ಕೆ ಬೇರೆ ಏನೂ ಕೆಲಸ ಇರಲಿಲ್ಲವಾ? ಎಂದು ಪ್ರಶ್ನೆಗಳ ಸುರಿಮಳೆಗೈದುದ್ದಾರೆ. ಅಲ್ಲದೆ, ಸರ್ಕಾರ ಅನುಮತಿ ಕೊಡದಿದ್ದರೆ ಅಭಿಮಾನಿಗಳು ಅವತ್ತಿನ ದಿನ ಕ್ರೀಡಾಂಗಣಕ್ಕೆ ಬರುತ್ತಿರಲಿಲ್ಲ. ಇದು ಸರ್ಕಾರದ ಉದ್ದೇಶಪೂರ್ವಕ ನಿರ್ಲಕ್ಷ್ಯವಾಗಿದೆ. ಆದ್ದರಿಂದ ರಾಜೀನಾಮೆ ಕೇಳುತ್ತಿರುವುದು ಎಂದು ಆಕ್ರೋಶ ಹೊರಹಾಕಿದರು.
ಈ ಕಾರ್ಯಕ್ರಮವನ್ನು ವಿಧಾನಸೌಧದದಲ್ಲಿ ಸಂಭ್ರಮಾಚರಣೆ ಮಾಡಿದ್ದು ಆರ್ಗನೈಸೈಡ್ಕ್ರೈಂ. ಅಹಮದಾಬಾದ್‌ನಲ್ಲಿ ನಡೆದಿರುವುದು ಆಕಸ್ಮಿಕ ಘಟನೆ. ಬೇರೆ ರಾಜ್ಯಗಳಲ್ಲಿ ಆರ್ಗನೈಸೈಡ್ ಕ್ರೈಂ ನಡೆದಿದ್ರೆ, ಅಲ್ಲಿ ಹೋಗಿ ರಾಜೀನಾಮೆ ಕೇಳಲಿ ಎಂದು ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
ಇನ್ನು ರಾಮಲಿಂಗಾರೆಡ್ಡಿ ಅವರಿಗೆ ಮನುಷ್ಯತ್ವ ಇದರೆ 11 ಜನರ ಸಾವಿನ ಸಂಕಟ ಕೇಳಲಿ. ಅವರ ಮನೆಗೆ ಹೋಗಿ ನೋಡಲಿ. ಇವರು ಅನುಮತಿ ಕೊಟ್ಟಿದ್ದಕ್ಕೆ ಕ್ರೀಡಾಂಗಣಕ್ಕೆ ಬಂದಿದ್ದು. ಸಿಎಂ, ಡಿಸಿಎಂಗೂ ಮನುಷ್ಯತ್ವ ಇಲ್ಲ. ಒಬ್ಬರು ದೋಸೆ ತಿನ್ನಲು ಹೋಗುತ್ತಾರೆ, ಮತ್ತೊಬ್ಬರು ಕಪ್‌ಗೆ ಮುತ್ತಿಡುತ್ತಾರೆ ಎಂದು ಸಿದ್ದಾರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಐಪಿಎಲ್ ವ್ಯಾಪಾರದ ಆಟ: ಇತ್ತೀಚೆಗಷ್ಟೇ ಐಪಿಎಲ್ ಬಗ್ಗೆ ಮಾತನಾಡಿದ ಅವರು, ಈ ಕ್ರಿಕೆಟ್ ಹಣಕ್ಕಾಗಿ ನಡೆಯುತ್ತಿದೆ. ಇಂದು ಆರ್‌ಸಿಬಿ ತಂಡದಲ್ಲಿ ಆಟಗಾರರು ಇದ್ದಾರೆ. ಆದರೆ ಹಣ ಕೊಟ್ಟರೆ ನಾಳೆ ಅವರು ಜೆಸಿಬಿ ಕಡೆಗೆ ಹೋಗುತ್ತಾರೆ. ಇದೆಲ್ಲವೂ ಹಣದ ಆಟ ಆಗಿದೆ ಎಂದು ಸಿಟಿ ರವಿ ಅವರು ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕನ್ನಡಿಗ ಆಟಗಾರರು ಎಷ್ಟಿದ್ದಾರೆ. ತಂಡದಲ್ಲಿ ಕನ್ನಡಿಗ ಆಟಗಾರರ ಸಂಖ್ಯೆ ಸೀಮಿತ ಆಗಿದೆ. ಇದು ಅನೇಕ ಅಭಿಮಾನಿಗಳು ಹಾಗೂ ಸ್ಥಳೀಯ ನಾಯಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯವನ್ನು ಮುನ್ನೆಲೆಗೆ ತಂದು ಆರ್‌ಸಿಬಿ ತಂಡವು ಕರ್ನಾಟಕದ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದರು.
ಇದೇ ವೇಳೆ ಮುಂದುವರೆದು ಮಾತನಾಡಿದ ಅವರು ಹಿಂದೆ ರಣಜಿ ಟ್ರೋಫಿಯಲ್ಲಿ ಪ್ರಾದೇಶಿಕ ಪ್ರೀತಿ ಮತ್ತು ಅಭಿಮಾನ ಕಾಣುತ್ತಿತ್ತು. ಆದರೆ ಇಂದಿನ ಐಪಿಎಲ್ ಕೇವಲ ವ್ಯಾಪಾರದ ಆಟವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್‌ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications