ಅಪಹರಣವಾಗಿದ್ದ ಮಗು ಒಂದು ವರ್ಷದ ಬಳಿಕ ಮಡಿಲು ಸೇರುವಾಗ ನಡೆದ ಕಣ್ಣೀರ ಕಥೆ
ಬೆಂಗಳೂರು, ಆ. 28: ಆ ತಾಯಿ 9 ತಿಂಗಳಿನಿಂದ ನರಕ ಯಾತನೆ ಅನುಭವಿಸುತ್ತಿದ್ದಳು. ಜನ್ಮ ಕೊಟ್ಟಿದ್ದ ಒಂದು ಮಗು ಕಾಯಿಲೆಗೆ ತುತ್ತಾಗಿ ಸಾವನ್ನಪ್ಪಿದ್ದ. ಎದೆ ಮಟ್ಟಕ್ಕೆ ಬೆಳೆದಿದ್ದ ಮೂರು ವರ್ಷದ ಮಗು ಅಪಹರಣ ವಾಗಿ 9 ತಿಂಗಳಾದರೂ ಸಿಕ್ಕಿರಲಿಲ್ಲ. ವೈದ್ಯರ ಬಳಿ ಹೋದ್ರೆ ಇನ್ನು ನಿಮಗೆ ಮಕ್ಕಳು ಆಗುವುದಿಲ್ಲ ಎಂಬ ಸತ್ಯವನ್ನು ಹೇಳಿದ್ದರು. ಜನ್ಮ ಕೊಟ್ಟ ಇಬ್ಬರು ಮಕ್ಕಳು ಇಲ್ಲದೇ ಕಣ್ನೀರಿನಲ್ಲಿ ಕೈತೊಳೆಯುತ್ತಿದ್ದ ತಾಯಿಗೆ 9 ತಿಂಗಳ ಹಿಂದೆ ಅಪಹರಣಕ್ಕೆ ಒಳಗಾಗಿದ್ದ ಮಗು ಮಡಿಲು ಸೇರಿದ್ದಾನೆ. ಆತನನ್ನು ನೋಡಿದ ಆ ತಾಯಿ ಸಂತೋಷ ವರ್ಣಿಸಲು ಅಸಾಧ್ಯ.ಇದಕ್ಕೆ ಕಾರಣವಾಗಿದ್ದು ಬ್ಯಾಟರಾನಪುರ ಪೊಲೀಸರು.

ಎರಡೂ ಮಕ್ಕಳು ಇಲ್ಲದ ಬದುಕು
ಆಕೆ ಹೆಸರು ಅರಬಿಂದ್ ತಾಜ್, ಆಕೆಯ ಗಂಡನ ಹೆಸರು ಆಯಾಜ್ ಪಾಷಾ, ಇಬ್ಬರೂ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯ ಜೆಜೆನಗರದಲ್ಲಿ ವಾಸವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದರು. ಕಾಯಿಲೆಗೆ ತುತ್ತಾಗಿದ್ದ ಒಂದು ಸಾವು ಸಾವನ್ನಪ್ಪಿತ್ತು. ಒಂದು ಮಗು ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಇದ್ದ ಒಬ್ಬ ಮಗನೇ ನನ್ನ ದೇವರು ಎಂದು ಪ್ರೀತಿಸುತ್ತಿದ್ದಳು. ಎದೆಗಪ್ಪಿಕೊಂಡೇ ದಿನ ಕಳೆಯುತ್ತಿದ್ದ ಎರಡು ವರ್ಷದ ಕಂದಮ್ಮ ಕಳೆದ ನವೆಂಬರ್ 11 ರಂದು ಮನೆ ಮುಂದೆ ಆಟ ಆಡುತ್ತಿರುವಾಗಲೇ ಕಣ್ಮರೆಯಾಗಿದ್ದ. ಮಗು ಅಪಹರಣ ಆಗಿರುವ ಬಗ್ಗೆ ಬ್ಯಾಟರಾಯನಪುರ ಪೊಲೀಸರಿಗೆ ದೂರು ನೀಡಿದ್ದಳು.

ಮತ್ತೆ ಮಗು ಮಾಡಿಕೊಳ್ಳವ ಆಸೆ ಕಮರಿತು
ಇದ್ದ ಮಗು ಒಬ್ಬ ಕಾಯಿಲೆಗೆ ತುತ್ತಾಗಿ ದೂರವಾಗಿದ್ದ. ಇನ್ನೊಬ್ಬ ಮಗ ಅಪಹರಣಕ್ಕೆ ಒಳಗಾದ ನಂತರ ಇಬ್ಬರು ಮಕ್ಕಳ ಕರುಳು ಬಳ್ಳಿ ಇಲ್ಲದಂತಾಗಿತ್ತು. ಲಾಕ್ ಡೌನ್ ನಿಂದ ಕೆಲಸ ಕಳೆದುಕೊಂಡಿದ್ದ ಗಂಡ ಹೆಂಡತಿ ಶೋಕದಲ್ಲಿ ಮುಳಗಿದ್ದರು. ಇಬ್ಬರು ಮಕ್ಕಳನ್ನು ದೇವರು ಕಿತ್ತುಕೊಂಡು ಬಿಟ್ಟ ಎಂದು ಕಣ್ಣೀರಲ್ಲಿ ಬದುಕುತ್ತಿದ್ದರು. ಬೇರೆ ಮಗು ಮಾಡಿಕೊಳ್ಳುವ ಆಸೆ ಹೊತ್ತು ವೈದ್ಯರನ್ನು ಸಂಪರ್ಕಿಸಿದರು. ಆದರೆ ನಿಮಗೆ ಇನ್ನು ಮಕ್ಕಳು ಆಗುವುದಿಲ್ಲ ಎಂದು ವೈದ್ಯರು ಹೇಳಿ ಬಿಟ್ಟಿದ್ದರು.
ಇನ್ನು ಜೀವನವೇ ಇಲ್ಲ ಎಂದು ತಾಯಿ ದಿನವೂ ತನ್ನ ಮಕ್ಕಳ ನೆನಪಲ್ಲಿ ಕಣ್ಣೀರು ಹಾಕುತ್ತಿದ್ದಳು. ಪದೇ ಪದೇ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ಹೋಗಿ ಪೊಲೀಸರ ಮುಂದೆ ಗೋಳಾಡುತ್ತಿದ್ದಳು. ನಿಮ್ಮಿಂದ ನನ್ನ ಮಗು ಪತ್ತೆ ಮಾಡಲು ಸಾಧ್ಯವಿಲ್ಲ. ಪ್ರಕರಣವನ್ನು ಬೇರಡೆಗೆ ವರ್ಗಾಯಿಸಿ ಎಂದು ಹೆತ್ತ ತಾಯಿ ಪೊಲೀಸರ ಮುಂದೆ ನೋವು ತೋಡಿಕೊಂಡು ಬಂದಿದ್ದಳು. ಈ ಪ್ರಕರಣವನ್ನು ಪತ್ತೆ ಮಾಡುಂತೆ ಬ್ಯಾಟರಾಯನಪುರ ಇನ್ಸಪೆಕ್ಟರ್ ಎಂ.ಎನ್. ನಾಗರಾಜ್ ಪೊಲೀಸ್ ಸಿಬ್ಬಂದಿಗೆ ಸೂಚಿಸಿದ್ದರು. ಮಗು ಕಳೆದುಕೊಂಡಿದ್ದ ಆ ತಾಯಿನ ನೋವನ್ನು ಮನವರಿಕೆ ಮಾಡಿಕೊಟ್ಟಿದ್ದರು.

ಬೈಕ್ ಕಳ್ಳತನ ಪ್ರಕರಣದಲ್ಲಿ ಸಿಕ್ಕಿದ ಅಪರಹಣಕಾರ
ಬೈಕ್ ಕಳ್ಳತನ ಸಂಬಂಧ ವೃತ್ತಿಪರ ಅರೋಪಿಗಳನ್ನು ಕರೆದು ವಿಚಾರಣೆ ಮಾಡುವ ಕೆಲಸದಲ್ಲಿ ಪೊಲೀಸರು ಕಾರ್ಯ ನಿರತವಾಗಿದ್ದರು. ಕಾರ್ತೀಕ್ ಎಂಬ 22 ವರ್ಷದ ಬೈಕ್ ಕಳ್ಳನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆಯಾಜ್ ಪಾಷಾ ಮಗುವನ್ನು ಅಪಹರಣ ಮಾಡಿರುವ ಕಥೆಯನ್ನು ಬಾಯಿ ಬಿಟ್ಟಿದ್ದಾನೆ. ವೃತ್ತಿಯಲ್ಲಿ ಮನೆ ಮಂದೆ ತರಕಾರಿ ಮಾರುತ್ತಿದ್ದ ಕಾರ್ತೀಕ್ ಹೊಸೂರು, ಸರ್ಜಾಪುರದಲ್ಲಿ ಕೆಲವರಿಗೆ ಪರಿಚಯವಾಗಿದ್ದ. ಸುನಿತಾ ಎಂಬ ಮಹಿಳೆಗೆ ಮಕ್ಕಳು ಇರಲಿಲ್ಲ. ಇದನ್ನು ತಿಳಿದಿದ್ದ ಕಾರ್ತಿಕ್ ಮಗುವನ್ನು ಅಪಹರಿಸಿ ಮರಾಟ ಮಾಡಿ ಹಣ ಮಾಡುವ ಪ್ಲಾನ್ ರೂಪಿಸಿದ್ದಾನೆ.

ಲವ್ವರ್ ಮನೆಗೆ ಬಂದು ಮಗು ಅಪಹರಣ
ಶಾಮಣ್ಣ ಗಾರ್ಡನ್ ಬಳಿ ಆಯಾಜ್ ಪಾಷಾ ಮನೆ ಪಕ್ಕದಲ್ಲಿಯೇ ನೆಲೆಸಿದ್ದ ತನ್ನ ಲವ್ವರ್ ಮನೆಗೆ ಕಾರ್ತಿಕ್ ಹೋಗಿ ಬರುತ್ತಿದ್ದ. ತನ್ನ ಹೆಂಡತಿ ಅಂತಲೇ ಬಿಂಬಿಸಿಕೊಂಡು ಹೋಗಿ ಬರುತ್ತಿದ್ದ. ಸರ್ಜಾಪುರದ ನಿವಾಸಿ ಸುಮಿತ್ರಾಗೆ ಮಕ್ಕಳು ಇಲ್ಲದಿರುವುದನ್ನು ತಿಳಿದಿದ್ದ ಕಾರ್ತಿಕ್ ಮನೆ ಮುಂದೆ ಆಟವಾಡುತ್ತಿದ್ದ ಆಯಾಜ್ ಪಾಷಾ ಮಗುವನ್ನು ಅಪಹರಿಸಿಕೊಂಡು ಪರಾರಿಯಾಗಿದ್ದ. ಸರ್ಜಾಪುರದಲ್ಲಿ ಸುಮಿತ್ರಾ ಎಂಬುವರನ್ನು ಭೇಟಿ ಮಾಡಿ" ನನಗೆ ನಾಲ್ಕು ಜನ ಮಕ್ಕಳಿದ್ದಾರೆ.
ಸಾಕಲು ಆಗುತ್ತಿಲ್ಲ ಒಂದು ಮಗುವನ್ನು ನಾನು ದತ್ತು ಕೊಡುತ್ತೇನೆ ಎಂದು ಸಿಮಿತ್ರಾ ಕೈಗೆ ಇಟ್ಟಿದ್ದ. ನನ್ನ ಮೂರು ಮಕ್ಕಳಿಗಾಗಿ 60 ಸಾವಿರ ಹಣ ಬೇಕು ಎಂದು ಪಡೆದುಕೊಂಡಿದ್ದ. ಕೆಲವೇ ದಿನದಲ್ಲಿ ನನ್ನ ಪತ್ನಿ ಸಮೇತ ಬಂದು ಮಗುವನ್ನು ದತ್ತು ಕೊಡುವ ಬಗ್ಗೆ ಒಡಂಬಡಿಕೆ ಮಾಡಿಕೊಡುವುದಾಗಿ ಹೇಳಿ ಹಣ ಪಡೆದು ಕಾರ್ತೀಕ್ ನಾಪತ್ತೆಯಾಗಿದ್ದ.
Recommended Video

ತಾಯಿ ಮಗು ಒಂದಾದ ಕ್ಷಣ
ಕಾರ್ತಿಕ್ ವಿಚಾರಣೆ ಬಳಿಕ ಅರಬಿಂದ್ ತಾಜ್ ನನ್ನು ಮಗುವನ್ನು ಗುರುತು ಮಾಡಲು ಸರ್ಜಾಪುರ ಸಮಿಪದ ಸುಮಿತ್ರಾ ಮನೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಹಿಂದೂ ಸಮುದಾಯದ ಮನೆಯಲ್ಲಿ ಮಗು ಬೆಳೆಯುತ್ತಿದೆ. ಉರ್ದು ಒಂದು ಪದ ಬರಲ್ಲ. ಅದು ಮುಸ್ಲಿಂ ಸಮುದಾಯದ ಮಗು ಎಂದು ಹೇಳಲಿಕ್ಕು ಅಸಾಧ್ಯ ಎಂಬಂತೆ ಕನ್ನಡ ಮಾತನಾಡುತ್ತಿತ್ತು. ಯಾವಾಗ ತಾಯಿ ನೋಡಿದ ಕೂಡಲೇ ಕಣ್ಣೀರು ಹಾಕಿದರೋ, ಒಂದು ವರ್ಷದಿಂದ ನೋಡದ ತಾಯಿಯನ್ನು ಮುದ್ದು ಕಂದಮ್ಮ ಗುರುತು ಹಿಡಿದು ಮಡಿಲು ಸೇರಿತು. ಈ ದೃಶ್ಯ ನೋಡಿದ ಬ್ಯಾಟರಾಯನಪುರ ಪೊಲೀಸರ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು. ಅತ್ತ ಮಗು ಜನ್ಮ ಕೊಟ್ಟ ತಾಯಿ ಮಡಿಲು ಸೇರಿತ್ತಿದ್ದಂತೆ ಸಾಕು ತಾಯಿ ಸುಮಿತ್ರಾಗೂ ಕಣ್ಣೀರಲ್ಲಿ ನೀರು. ಕೊನೆಗೂ ಮಗುವನ್ನು ಪೊಲೀಸರು ತಮ್ಮ ವಶಕ್ಕೆ ಪಡೆದು ಕಾನೂನು ಪ್ರಕ್ರಿಯೆ ಮುಗಿಸಿ ಜನ್ಮ ಕೊಟ್ಟ ತಾಯಿಯ ಮಡಿಲು ಸೇರಿಸಿದ್ದಾರೆ. ಮಗುವನ್ನು ಪತ್ತೆ ಮಾಡಿದ ಪೊಲೀಸರಿಗೆ ತಲೆ ಭಾಗಿ ವಂದನೆ ಅರ್ಪಿಸಿದ್ದಾಳೆ.
ಕಳ್ಳತನ, ದರೋಡೆ, ಸುಲಿಗೆಕೋರ ಪ್ರಕರಣ ಪತ್ತೆ ಮಾಡಿದರೆ ಪೊಲೀಸರಿಗೆ ಮೇಲಾಧಿಕಾರಿಗಳಿಂದ ಶಹಬ್ಬಾಸ್ ಗಿರಿ ಸಿಗುತ್ತದೆ. ಆದರೆ, ಈ ರೀತಿಯ ಕರುಳು ಬಳ್ಳಿಯನ್ನು ಒಂದು ಮಾಡಿದ ಬ್ಯಾಟರಾಯನಪುರ ಪೊಲೀಸರ ಕಾರ್ಯ ಶೈಲಿಯನ್ನು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ನೂರು ಕೇಸು ಪತ್ತೆ ಮಾಡಿದರೂ ಈ ಖುಷಿ ಸಿಗಲ್ಲ. ಆದರೆ, ಒಂದು ತಾಯಿ ಮಗುವಿನ ಪ್ರೀತಿ ಒಂದು ಮಾಡಿದ ಈ ಪ್ರಕರಣ ಬದುಕಿನಲ್ಲಿ ಮರೆಯಲಾರದ ಕೆಲಸ ಎಂದು ಖುಷಿ ಪಡುತ್ತಾರೆ ಬ್ಯಾಟರಾಯನಪುರ ಪೊಲೀಸರು.












Click it and Unblock the Notifications