ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿ. ವೈ. ರಾಘವೇಂದ್ರ ಡಮ್ಮಿ ಕ್ಯಾಂಡಿಡೇಟ್: ಸಿದ್ದರಾಮಯ್ಯ ಲೇವಡಿ

|
Google Oneindia Kannada News

Recommended Video

ಬಿ ಎಸ್ ವೈ ಮಗ ಬಿ ವೈ ರಾಘವೇಂದ್ರರನ್ನ ಡಮ್ಮಿ ಕ್ಯಾಂಡಿಡೇಟ್ ಎಂದ ಸಿದ್ದರಾಮಯ್ಯ | Oneindia Kannada

ಬೆಂಗಳೂರು, ಅಕ್ಟೋಬರ್ 26: ಉಪ ಚುನಾವಣೆಯ ಕಾವು ಏರುತ್ತಿದ್ದಂತೆಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚಟುವಟಿಕೆ ಜೋರಾಗಿದೆ. ಚುನಾವಣಾ ಪ್ರಚಾರಕ್ಕಾಗಿ ನಿರಂತರವಾಗಿ ಓಡಾಡುತ್ತಿರುವ ಅವರು, ಬಿಜೆಪಿ ವಿರುದ್ಧ ನಿತ್ಯವೂ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ.

ಪ್ರಚಾರದ ಸಂದರ್ಭದ ಭಾಷಣಗಳ ನಡುವೆ ಟ್ವಿಟ್ಟರ್‌ನಲ್ಲಿಯೂ ಸಿದ್ದರಾಮಯ್ಯ ಕಾರ್ಯಪ್ರವೃತ್ತರಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೂ ಅವರು ಟ್ವಿಟ್ಟರ್‌ಅನ್ನು ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಲು ಹೆಚ್ಚು ಬಳಸಿಕೊಂಡಿದ್ದರು.

ಸುಳ್ಳೇ ಯಡಿಯೂರಪ್ಪ ಮನೆ ದೇವರು: ಶಿವಮೊಗ್ಗದಲ್ಲಿ ಸಿದ್ದರಾಮಯ್ಯ ಲೇವಡಿಸುಳ್ಳೇ ಯಡಿಯೂರಪ್ಪ ಮನೆ ದೇವರು: ಶಿವಮೊಗ್ಗದಲ್ಲಿ ಸಿದ್ದರಾಮಯ್ಯ ಲೇವಡಿ

ಈಗ ಉಪ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕೈ ಜೋಡಿಸಿರುವುದರಿಂದ ಸಿದ್ದರಾಮಯ್ಯ ಅವರ ಗಮನ ಬಿಜೆಪಿ ವಿರುದ್ಧ ಕೇಂದ್ರೀಕರಿಸಿದೆ. ನರೇಂದ್ರ ಮೋದಿ, ಅಮಿತ್ ಶಾ, ಯಡಿಯೂರಪ್ಪ, ಈಶ್ವರಪ್ಪ, ಶ್ರೀರಾಮುಲು ಸೇರಿದಂತೆ ಪಕ್ಷದ ರಾಷ್ಟ್ರೀಯ, ರಾಜ್ಯ ನಾಯಕರು ಮತ್ತು ಸ್ಥಳೀಯ ಮುಖಂಡರ ಮೇಲೆ ಟೀಕಾಪ್ರಹಾರ ನಡೆಸಲು ಅವರು ಟ್ವಿಟ್ಟರ್‌ಅನ್ನು ವ್ಯಾಪಕವಾಗಿ ಬಳಸಿಕೊಳ್ಳುತ್ತಿದ್ದಾರೆ.

ವಿರೋಧ ಪಕ್ಷವಾದ ಬಿಜೆಪಿ ವಿರುದ್ಧ ಅವರು ಶುಕ್ರವಾರ ಟ್ವಿಟ್ಟರ್‌ನಲ್ಲಿ ಹರಿಹಾಯ್ದಿದ್ದು, ಅವರ ಕೆಲವು ಟ್ವೀಟ್‌ಗಳು ಹೀಗಿವೆ..

ಯಡಿಯೂರಪ್ಪ-ಈಶ್ವರಪ್ಪ ಒಂದಾಗಲಿಲ್ಲವೇ?

ಸಮ್ಮಿಶ್ರ ಸರ್ಕಾರವನ್ನು ಅಪವಿತ್ರ ಮೈತ್ರಿ ಎನ್ನುವ ಯಡಿಯೂರಪ್ಪನವರು ಈ ಹಿಂದೆ ಜೆಡಿಎಸ್ ಜೊತೆ ಸಮ್ಮಿಶ್ರ ಸರ್ಕಾರ ರಚನೆ ಮಾಡಿರಲಿಲ್ಲವೇ? ಯಡಿಯೂರಪ್ಪನವರು ಕೆಜೆಪಿ ಸ್ಥಾಪನೆ ಮಾಡಿ ನಮ್ಮಪ್ಪನಾಣೆ ಬಿಜೆಪಿ ಸೇರಲ್ಲ ಎಂದಿದ್ದರು, ಯಡಿಯೂರಪ್ಪ ಪಕ್ಷ ತೊರೆದಾಗ ಪಕ್ಷದಿಂದ ಶನಿ ಹೋಯಿತು ಎಂದು ಈಶ್ವರಪ್ಪನವರು ಹೇಳಿರಲಿಲ್ಲವೇ? ಈಗವರು ಒಂದಾಗಿಲ್ಲವೇ?

2018ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣ ತಿಳಿಸಿದ ಸಿದ್ದರಾಮಯ್ಯ2018ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣ ತಿಳಿಸಿದ ಸಿದ್ದರಾಮಯ್ಯ

ಡಮ್ಮಿ ಕ್ಯಾಂಡಿಡೇಟ್

ಮರು ಚುನಾವಣೆಯ 5 ಕ್ಷೇತ್ರಗಳಲ್ಲಿ ಬಿಜೆಪಿ ಸೋಲಲಿದೆ. ಶಿವಮೊಗ್ಗದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಜಿಲ್ಲೆಯಲ್ಲಿ ಮಧು ಬಂಗಾರಪ್ಪ ಪರವಾಗಿ ಕಂಡುಬರುತ್ತಿರುವ ಜನಸ್ಪಂದನೆಯನ್ನು ಗಮನಿಸಿದರೆ, ಯಡಿಯೂರಪ್ಪನವರ ಪುತ್ರ ಬಿ.ವೈ ರಾಘವೇಂದ್ರ ಅವರೇ ಮೇಲ್ನೋಟಕ್ಕೆ ಡಮ್ಮಿ ಕ್ಯಾಂಡಿಡೇಟ್ ಎಂದು ಅನಿಸುತ್ತಿದೆ.

ಸಿದ್ದರಾಮಯ್ಯ ಜೊತೆ ರಾಹು, ಕೇತು, ಶನಿ ಪ್ರಚಾರ: ಈಶ್ವರಪ್ಪ ಲೇವಡಿಸಿದ್ದರಾಮಯ್ಯ ಜೊತೆ ರಾಹು, ಕೇತು, ಶನಿ ಪ್ರಚಾರ: ಈಶ್ವರಪ್ಪ ಲೇವಡಿ

ನಾನೂ ಒಬ್ಬ ಹಿಂದು

ಮೃದು ಅಥವಾ ಕಠೋರ ಹಿಂದು ಎಂಬುದು ಇಲ್ಲ. ನಾನೂ ಕೂಡ ಹಿಂದೂ. ನಮ್ಮನ್ನು ಹಿಂದೂ ವಿರೋಧಿಗಳು ಎಂದು ಬಿಂಬಿಸಲು ಕರ್ನಾಟಕ ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ದುರದೃಷ್ಟವಶಾತ್ ಸಂಭವಿಸಿದ ಸಾವುಗಳನ್ನು ರಾಜಕೀಯ ಲಾಭಕ್ಕಾಗಿ ಅವರು ಬಳಸಿಕೊಂಡರು. ಅದಕ್ಕಾಗಿ ಅವರಿಗೆ ನಾಚಿಕೆಯಾಗಬೇಕು.

ಮೋದಿ ಮುಂದೆ ರಾಜ್ಯ ಬಿಜೆಪಿ ನಾಯಕರು ಬಾಯಿಯನ್ನೇ ಬಿಡಲ್ಲ:ಸಿದ್ದರಾಮಯ್ಯಮೋದಿ ಮುಂದೆ ರಾಜ್ಯ ಬಿಜೆಪಿ ನಾಯಕರು ಬಾಯಿಯನ್ನೇ ಬಿಡಲ್ಲ:ಸಿದ್ದರಾಮಯ್ಯ

ಮೋದಿ ದುರಾಡಳಿತ

ಸಿಬಿಐಗೆ ಸಂಬಂಧಿಸಿದ ಇತ್ತೀಚಿನ ಘಟನಾವಳಿಗಳು ನರೇಂದ್ರ ಮೋದಿ ಅವರ ದುರಾಡಳಿತಕ್ಕೆ ಇನ್ನೊಂದು ಉದಾಹರಣೆಯಷ್ಟೇ. ಪ್ರಜಾಪ್ರಭುತ್ವದ ಸ್ತಂಭಗಳನ್ನು ನಾಶಪಡಿಸುವುದಕ್ಕಾಗಿಯೇ ತಾವು ಇರುವುದು ಎಂದು ಬಿಜೆಪಿ ಭಾವಿಸಿದೆ. ಜನರು ವ್ಯವಸ್ಥೆಯ ಕುರಿತು ತಮ್ಮ ನಂಬಿಕೆ ಮತ್ತು ವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ.

English summary
Former Chief Minister Siddaramaiah criticized BJP in his series of tweets and called BY Raghavendra as a dummy candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X