ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ಅಪಾರ್ಟ್ ಮೆಂಟ್ ಗಳಿಗೆ ಮಾತ್ರ ಎಸ್ ಟಿಪಿ ಅಳವಡಿಕೆ ಸಾಧ್ಯತೆ!

|
Google Oneindia Kannada News

ಬೆಂಗಳೂರು, ಜನವರಿ 04: ನಗರದಲ್ಲಿ ಈಗಾಗಲೇ ನಿರ್ಮಾಣವಾಗಿರುವ ಅಪಾರ್ಟ್ ಮೆಂಟ್ ಗಳಿಗೆ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಕಡ್ಡಾಯ ಮಾಡುವುದನ್ನು ಕೈಬಿಡಲು ಜಲಮಂಡಳಿ ಮುಂದಾಗಿದೆ.

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ದಂಡ ವಿಧಿಸುವ ಕ್ರಮದಿಂದ ಜಲಮಂಡಳಿ ಈಗಾಗಲೇ ಹಿಂದೆ ಸರಿದಿದೆ. 2017ರ ಜನವರಿಯಲ್ಲಿ 20 ಕ್ಕೂ ಹೆಚ್ಚು ಮನೆಗಳುರುವ ಅಪಾರ್ಟ್ ಮೆಂಟ್ ಗಳಿಗೆ ಎಸ್ ಟಿ ಪಿ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದಾಗ ಹಳೇ ಅಪಾರ್ಟ್ ಮೆಂಟ್ ಗಳಲ್ಲಿ ಎಸ್ ಟಿ ಪಿ ಅಳವಡಿಕೆ ಕಷ್ಟ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ಅಪಾರ್ಟ್‌ಮೆಂಟ್‌ಗಳಲ್ಲಿಎಸ್‌ಟಿಪಿ ಕಡ್ಡಾಯ ನಿಯಮ ವಾಪಸ್ಅಪಾರ್ಟ್‌ಮೆಂಟ್‌ಗಳಲ್ಲಿಎಸ್‌ಟಿಪಿ ಕಡ್ಡಾಯ ನಿಯಮ ವಾಪಸ್

ಈ ಹಿನ್ನೆಲೆಯಲ್ಲಿ ಆದೇಶ ಮಾರ್ಪಾಡಿಗೆ ಮುಂದಾಗಿದ್ದ ಸರ್ಕಾರ 50 ಕ್ಕೂ ಅಧಿಕ ಮನೆಗಳಿರುವ ಅಪಾರ್ಟ್ ಮೆಂಟ್ ಗಳಿಗೆ ಎಸ್ ಟಿಪಿ ಕಡ್ಡಾಯಗೊಳಿಸಿತ್ತು. ಅದಕ್ಕೆ ಡಿ.31ರವರೆಗೆ ಗಡುವು ವಿಧಿಸಿತ್ತು. ಆದರೆ ಅಪಾರ್ಟ್ ಮೆಂಟ್ ನಿವಾಸಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

BWSSB expected to issue order on STP compulsory for new Apartments only

ಅನಿವಾರ್ಯ ಕಡೆಗಳಲ್ಲಿ ಮಾತ್ರ ಎಸ್ ಟಿಪಿ: ಒಳಚರಂಡಿ ಸಂಪರ್ಕವಿಲ್ಲದ ಕಡೆಗಳಲ್ಲಿ ಮಾತ್ರವೇ ಎಸ್ ಟಿಪಿಯನ್ನು ಕಡ್ಡಾಯಗೊಳಿಸುವ ಯೋಜನೆ ಹೊಂದಲಾಗಿದೆ. ಈ ಕುರಿತು ಒಕ್ಕೂಟಗಳೊಂದಿಗಿನ ಸಭೆಯಲ್ಲಿ ಸಚಿವ ಜಾರ್ಜ್ ವಿಷಯ ಪ್ರಸ್ತಾಪಿಸಿದ್ದರು. ಆದರೆ, ಈ ಆದೇಶಕ್ಕೂ ಹಲವು ಗೊಂದಲಗಳ ಎದುರಾಗುವ ಸಾದ್ಯತೆ ಹಿನ್ನೆಲೆಯಲ್ಲಿ ಚರ್ಚೆಗಳು ನಡೆದಿವೆ.

ಬೆಂಗಳೂರಿನಲ್ಲಿ ಎಸ್ ಟಿಪಿ ವಿರೋಧಿಸಿ ಬಿಜೆಪಿ ಪ್ರತಿಭಟನೆಬೆಂಗಳೂರಿನಲ್ಲಿ ಎಸ್ ಟಿಪಿ ವಿರೋಧಿಸಿ ಬಿಜೆಪಿ ಪ್ರತಿಭಟನೆ

ಒಳ ಚರಂಡಿ ಸಂಪರ್ಕವಿಲ್ಲದ ಪ್ರದೇಶಗಳಲ್ಲಿ ಜಲಮಂಡಳಿ ಸೇವೆಯೂ ಇಲ್ಲದಿರುವುದರಿಂದ ಅಂತಹ ಪ್ರದೇಶದಲ್ಲಿ ದಂಡ ವಿಧಿಸುವುದು ಹೇಗೆ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಪ್ರಸ್ತುತ ಈ ವಿಚಾರಕ್ಕೆ ಸಂಬಂಧಿಸಿದಂತೆ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಸಲಹೆಗಳನ್ನು ಪಡೆದುಕೊಂಡು ಹೊಸ ಆದೇಶ ಹೊರ ಬೀಳಲಿದೆ. ಈ ಸಂಬಂಧ ಜಲಮಂಡಳಿ ಸಹ ಆದೇಶ ಮಾರ್ಪಾಡು ಕುರಿತು ಪ್ರಸ್ತಾವನೆ ಸಕ್ಕಾರಕ್ಕೆ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.

ಅಪಾರ್ಟ್ ಮೆಂಟ್ ನಿವಾಸಿಗಳ ಹೋರಾಟಕ್ಕೆ ಮಣಿದ ಜಲಮಂಡಳಿ: ಮಾತುಕತೆಗೆ ಆಹ್ವಾನಅಪಾರ್ಟ್ ಮೆಂಟ್ ನಿವಾಸಿಗಳ ಹೋರಾಟಕ್ಕೆ ಮಣಿದ ಜಲಮಂಡಳಿ: ಮಾತುಕತೆಗೆ ಆಹ್ವಾನ

ಹೊಸ ಅಪಾರ್ಟ್ ಮೆಂಟ್ ಗಳಿಗಷ್ಟೇ ಆದೇಶ: ಎಸ್ ಟಿಪಿ ಕಡ್ಡಾಯ ಕುರಿತು ಹೊರಡಿಸಿರುವ ಆದೇಶಗಳಲ್ಲಿ ಹಳೇ ಕಟ್ಟಡ ಅಥವಾ ಹೊಸ ಕಟ್ಟಡಗಳಿಗೆ ದಂಡ ವಿಧಿಸುವ ಅಥವಾ ವಿಧಿಸದಿರುವ ಸ್ಪಷ್ಟ ಉಲ್ಲೇಖವಿರಲಿಲ್ಲ. ಹಳೆಯ ಕಟ್ಟಡಗಳಿಗೂ ವಿಧಿಸುವುದರ ಮೂಲಕ ನಗರದ ತ್ಯಾಜ್ಯ ನೀರು ಸಂಸ್ಕರಣೆಗೆ ಹೆಚ್ಚಿನ ಒತ್ತು ನೀಡುವ ಯೋಜನೆಯನ್ನು ಜಲಮಂಡಳಿ ಹೊಂದಿತ್ತು.

ಆದರೆ, ತಂತ್ರಜ್ಞಾನಕ್ಕೆ ದುಬಾರಿ ವೆಚ್ಚವಾಗುವುದರೊಂದಿಗೆ ಸಾರ್ವಜನಿಕರಿಗೂ ಹೊರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಆದೇಶ ಮಾರ್ಪಾಡುಗೊಳಿಸುತ್ತಿದ್ದು, ಹೊಸ ಕಟ್ಟಡಗಳಿಗಷ್ಟೇ ಆದೇಶ ಕಡ್ಡಾಯಗೊಳಿಸುವ ಸಾದ್ಯತೆ ಇದೆ.

English summary
After strong opposition by the citizens of Bengaluru BWSSB has withdrawn retrospective order on Sewage Treatment Plant mandatory for apartments which have more than 50 houses, now the board is expected to issue new order on the issue to only effect on new apartments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X