ವಸತಿ ಕಟ್ಟಡಗಳ ಏಕರೂಪ ಪ್ರೊರೇಟ್ ಶುಲ್ಕ ಹೆಚ್ಚಳ

ಬೆಂಗಳೂರು,ಮೇ 31: ವಸತಿ ಕಟ್ಟಡಗಳಿಗೆ ಚದರ ಮೀಟರ್‌ಗೆ ಏಕರೂಪವಾಗಿ 400 ರೂ ಪ್ರೊರೇಟ್ ಶುಲ್ಕ ಹೆಚ್ಚಿಸಲು ಜಲಮಂಡಳಿ ತೀರ್ಮಾನಿಸಿದೆ.

30/40 ನಿವೇಶದನಲ್ಲಿ ನಿರ್ಮಾಣವಾದ ಮೂರು ಅಡುಗೆ ಕೋಣೆ ಹೊಂದಿರುವ ಎಲ್ಲಾ ವಸತಿ ಕಟ್ಟಡಗಳಿಗೆ ಇದು ಅನ್ವಯವಾಗಲಿದೆ. ಕಟ್ಟಡದಲ್ಲಿ ಪ್ರೊರೇಟ್ ಶುಲ್ಕವು 2ನೇ ಮಹಡಿಯಿಂದ ಅನ್ವಯವಾಗುತ್ತಿತ್ತು, ನೆಲಮಹಡಿ ಮತ್ತು ಒಂದನೇ ಮಹಡಿಗೆ ಪ್ರೊರೇಟ್ ಶುಲ್ಕ ಅನ್ವಯವಾಗುತ್ತಿರಲಿಲ್ಲ.

ಆದರೆ ನೆಲ ಮಹಡಿ ಅಥವಾ ಒಂದನೇ ಮಹಡಿಯಲ್ಲೇ ಮೂರು ಅಡುಗೆ ಕೋಣೆಗಳನ್ನು ನಿರ್ಮಿಸಲು ಆರಂಭಿಸಿದ್ದರು. ಮೂರು ಅಡುಗೆ ಕೋಣೆಯಿರುವ ಎಲ್ಲಾ ವಸತಿ ಕಟ್ಟಡಗಳಿಗೆ 400 ರೂ ಶುಲ್ಕ ವಿಧಿಸಲು ನಿರ್ಧರಿಸಲಾಗಿದೆ.

BWSSB awaiting nod to effect hike in pro rata charges

ಪ್ರಸ್ತಾವನೆಯನ್ನು ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರದಲ್ಲಿ ವಿಸ್ತೃತವಾಗಿ ಚರ್ಚೆಯಾದ ನಂತರವೇ ಆದೇಶ ಹೊರಡಿಸಲಾಗುತ್ತದೆ. 110 ಹಳ್ಳಿಗಳಿಗೆ ಕಾವೇರಿ ನೀರಿನ ಸಂಪರ್ಕ ನೀಡುತ್ತಿರುವ ಸಮಯದಲ್ಲೇ ಈ ಬದಲಾವಣೆಯಾಗಿದೆ.

ಜಲಮಂಡಳಿಯು ನೀರಿನ ಶುಲ್ಕ ಶೇ.30ರಿಂದ 35ರವರೆಗೆ ಏರಿಕೆ ಮಾಡಲು ನಿರ್ಧರಿಸಿತ್ತು ಆದರೆ ನೀರಿನ ಅಭಾವವಿರುವ ಕಾರಣ ಈ ನಿರ್ಣಯವನ್ನು ಸಧ್ಯಕ್ಕೆ ಕೈಬಿಟ್ಟಿದೆ, ಜೂನ್ 24ರಂದು ನಡೆಯುವ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+