Bengaluru: ವಿಮಾನದಲ್ಲಿ ಪರ್ಸ್ ಕಳೆದುಕೊಂಡು ಬಾಂಬ್‌ ಇದೆ ಎಂದ ವ್ಯಕ್ತಿ: ಬಂಧನ

ವಾಲೆಟ್‌ ಕಳೆದುಕೊಂಡಿದ್ದ ತಮ್ಮ ವಿಮಾನ ಪ್ರಯಾಣಿಕನಿಗೆ ಸರಿಯಾಗಿ ಸ್ಪಂದಿಸದ ಸಿಬ್ಬಂದಿ ವಿರುದ್ಧ ಕೋಪಗೊಂಡ ಪ್ರಯಾಣಿಕನೊಬ್ಬ ಬಾಂಬ್ ಬೆದರಿಕೆ ಒಡ್ಡಿದ್ದು, ಪೊಲೀಸರ ಅತಿಥಿಯಾಗಿ ಬಿಡುಗಡೆಯಾಗಿದ್ದಾನೆ. ಬೆಂಗಳೂರಿನಲ್ಲಿ ಈ ಘಟನೆ ನಡೆದಿದೆ.

ಮಂಗಳವಾರ ಸ್ಪೈಸ್‌ಜೆಟ್ ವಿಮಾನದಲ್ಲಿ ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣ ಮಾಡಿ, ವಿಮಾನದಲ್ಲಿ ತನ್ನ ವಾಲೆಟ್ ಅನ್ನು ಬಿಟ್ಟು ಬಂದ 32 ವರ್ಷದ ಉದ್ಯಮಿಯೊಬ್ಬರು ಏರ್‌ಲೈನ್‌ನ ಕಾಲ್ ಸೆಂಟರ್ ಸಿಬ್ಬಂದಿಗೆ ಅವರ ಪರ್ಸ್‌ನಲ್ಲಿ ಬಾಂಬ್ ಇತ್ತು ಎಂದು ಹೇಳಿದ್ದಕ್ಕಾಗಿ ಬಂಧಿಸಲಾಗಿದ್ದು, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

 Businessman in Trouble for Bomb Remark After Forgetting Wallet on Delhi to Bengaluru Flight

ರಾತ್ರಿ 9.20ಕ್ಕೆ ಬೆಂಗಳೂರಿನಲ್ಲಿ ವಿಮಾನ ಇಳಿಯಿತು ಎಂದು ಮೂಲಗಳು ತಿಳಿಸಿವೆ. ಥಣಿಸಂದ್ರದ ನಿವಾಸಿ ಜವಳಿ ವ್ಯಾಪಾರಿ ಶ್ರೇಯಾಂಶ್ ಚಮಾರಿಯಾ ಅವರು ರಾತ್ರಿ 10.15 ಕ್ಕೆ ಸ್ಪೈಸ್‌ಜೆಟ್ ಕಾಲ್ ಸೆಂಟರ್‌ಗೆ ಕರೆ ಮಾಡಿ ವಿಮಾನದಲ್ಲಿದ್ದ ತಮ್ಮ ವಾಲೆಟ್ ಬಗ್ಗೆ ಮಾಹಿತಿ ನೀಡಿದರು.

ಚಾಮರಿಯಾ ಅವರ ಪ್ರಕಾರ, ಸಿಬ್ಬಂದಿಯು ನಿರ್ಲಕ್ಷ್ಯದ ಪ್ರತಿಕ್ರಿಯೆಯಿಂದ ಅವರು ಅತೃಪ್ತರಾಗಿದ್ದರು ಮತ್ತು ಆದ್ದರಿಂದ, ಅವರು ತಮ್ಮ ವಾಲೆಟ್‌ನಲ್ಲಿ ಬಾಂಬ್ ಇದ್ದರೆ ಇದೇ ರೀತಿ ನಿರ್ಲಕ್ಷ್ಯದ ಉತ್ತರ ನೀಡುತ್ತಿದ್ದಿರಾ ಎಂದು ಕೇಳಿದ್ದಾರೆ.

ವಿಮಾನದಲ್ಲಿ ಪತ್ತೆಯಾದ ವಾಲೆಟ್

ದೂರಿನ ಪ್ರಕಾರ, ಕಾಲ್ ಸೆಂಟರ್ ಸಿಬ್ಬಂದಿ ಚಮರಿಯಾಗೆ ಬಾಂಬ್ ಎಲ್ಲಿದೆ ಎಂದು ಕೇಳಿದ್ದಾರೆ. ಅದು ನನ್ನ ಕಾಳಜಿಯಲ್ಲ ಎಂದು ಹೇಳಿದ್ದು, ವಾಲೆಟ್ ಎಲ್ಲಿದೆ ಎಂದು ನಾನು ಹೇಳಲ್ಲ, ಯಾವಾಗ ಸಿಡಿಯಬೇಕೋ ಆಗ ಸಿಡಿಯುತ್ತದೆ ಎಂದು ಹೇಳಿದ್ದಾರೆ.

ಬೆದರಿಕೆಯ ಬಗ್ಗೆ ಕಾಲ್ ಸೆಂಟರ್ ತಕ್ಷಣವೇ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ. ವಿಮಾನವನ್ನು ಪರಿಶೀಲಿಸಿದ ನಂತರ, ಅದು ವಂಚನೆ ಎಂದು ತಿಳಿಯಲಾಯಿತು. ರಾತ್ರಿ 11 ಗಂಟೆಗೆ ವಿಮಾನದಲ್ಲಿ ಅವರ ವಾಲೆಟ್ ಪತ್ತೆಯಾಗಿದೆ.

ಚಮರಿಯಾ ಅವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ತಾನು ಬಾಂಬ್ ಬೆದರಿಕೆಯನ್ನು ನೀಡುವ ಉದ್ದೇಶವನ್ನು ಹೊಂದಿರಲಿಲ್ಲ, ಆದರೆ ಕಾಲ್ ಸೆಂಟರ್ ತನ್ನ ದೂರನ್ನು ತ್ವರಿತವಾಗಿ ಪರಿಗಣಿಸದಿದ್ದಕ್ಕಾಗಿ ಕೋಪಗೊಂಡಿದ್ದಾಗಿ ಅವರು ಪೊಲೀಸರಿಗೆ ತಿಳಿಸಿದನು. ಅದರಲ್ಲಿ ಪ್ರಮುಖ ಐಡಿ ಪುರಾವೆಗಳು ಮತ್ತು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು ಇರುವುದರಿಂದ ಅವರು ಆತಂಕಕ್ಕೊಳಗಾಗಿದ್ದಾರು ಎಂದು ವರದಿಯಾಗಿದೆ. ಘಟನೆ ಕುರಿತಂತೆ ಸ್ಪೈಸ್‌ಜೆಟ್ ಇನ್ನೂ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+