HRA Exemptions: ಕೇಂದ್ರ ಬಜೆಟ್‌ನಲ್ಲಿ ಬೆಂಗಳೂರಿಗೆ ಮನೆ ಬಾಡಿಗೆ ಭತ್ಯೆ ವಿನಾಯಿತಿ ಘೋಷಣೆ?
ಬೆಂಗಳೂರು, ಜುಲೈ 22: ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ನಾಳೆ ಜುಲೈ 23ರಂದು 'ಕೇಂದ್ರ ಬಜೆಟ್- 2024-25' ಮಂಡಿಸಲಿದ್ದಾರೆ. ಮೆಟ್ರೋ ಮಹಾನಗರಗಳ ಸಾಲಿನಲ್ಲಿರುವ ಕರ್ನಾಟಕ ರಾಜಧಾನಿ ಬೆಂಗಳೂರನ್ನು ಮನೆ ಬಾಡಿಗೆ ಭತ್ಯೆ (HRA) ತರಿಗೆ ವಿನಾಯಿತಿ ನೀಡುವಂತೆ ಮನವಿ ಮಾಡಲಾಗುತ್ತಲೇ ಬರಲಾಗಿದೆ. ಈ ಭಾರಿ ಘೋಷಣೆ ಆಗುವ ನಿರೀಕ್ಷೆಗಳು ದಟ್ಟವಾಗಿದೆ.
2024ರ ಬಜೆಟ್ ಚರ್ಚೆಗಳು ಪ್ರಾರಂಭವಾಗುತ್ತಿದ್ದಂತೆ, ಸಮಗ್ರ ತೆರಿಗೆ ಪರಿಹಾರ ಕ್ರಮಗಳ ಬೇಡಿಕೆಗಳ, ನಿರೀಕ್ಷೆಗಳು ಹೆಚ್ಚಾಗುತ್ತಲೇ ಹೋಗುತ್ತದೆ. ಈ ಪೈಕಿ ಬೆಂಗಳೂರಿನಲ್ಲಿ ಎಚ್‌ಆರ್‌ಎ ವಿನಾಯಿತಿ ನೀಡಬೇಕು ಎಂಬುದು ಆಗಿದೆ.

ಉದ್ಯೋಗಿಯೊಬ್ಬರು HRA ಸ್ವೀಕರಿಸುವ ಮತ್ತು ಬಾಡಿಗೆ ಪಾವತಿಸುವ ಉದ್ಯೋಗಿಗಳು ಹಳೆಯ ಆದಾಯ ತೆರಿಗೆ ಪದ್ಧತಿಯ ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಬಹುದು. ವಿನಾಯಿತಿ ದರವು ಉದ್ಯೋಗಿ ಮೆಟ್ರೋ ನಗರದಲ್ಲಿ ವಾಸಿಸುತ್ತಿದ್ದಾರೆಯೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
50% HRA ವಿನಾಯಿತಿಯ 4 ನಗರಗಳು
HRA ಪಡೆಯುವ ಉದ್ಯೋಗಿ ಬಾಡಿಗೆ ಮನೆಯಲ್ಲಿ ವಾಸಿಸದಿದ್ದರೆ, ಆತ ಸಂಪೂರ್ಣ ಭತ್ಯೆಯು ತೆರಿಗೆಗೆ ಒಳಪಡುತ್ತದೆ. ಸದ್ಯ ಮೆಟ್ರೋ ನಗರಗಳಾದ ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ ಉದ್ಯೋಗಿಗಳಿಗೆ ಅನುಕೂಲವಾಗುವಂತೆ ಶೇಕಡಾ 50% HRA ವಿನಾಯಿತಿಗೆ ಅರ್ಹತೆ ಪಡೆದಿವೆ. ಆದರೆ ಬೆಂಗಳೂರು ಸೇರಿದಂತೆ ಇತರ ನಗರಗಳು 40% ವರ್ಗಕ್ಕೆ ಸೇರುತ್ತವೆ.
ಬೆಂಗಳೂರು ಮೆಟ್ರೋ ಪಾಲಿಟನ್ ಸಿಟಿ ಆದರೂ ಸಹ ಎಚ್‌ಆರ್‌ಎ ತೆರಿಗೆ ವಿನಾಯಿತಿಯಂತಹ ವಿಷಯಗಳಲ್ಲಿ ವರ್ಗಿಕರಣಗೊಳ್ಳದೇ, ನಾನ್-ಮೆಟ್ರೋಪಾಲಿಟನ್ ಪ್ರದೇಶಗಳ ರೀತಿ ಇರುವುದು ಸರಿಯಲ್ಲ. ಶೀಘ್ರವೇ ಈ ಮನವಿಯನ್ನು ಮರುಪರಿಶೀಲಿಸುವುದು ಅತ್ಯಗತ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಮೆಟ್ರೋ ಸಿಟಿಗಳ ಸಾಲಿನಲ್ಲಿರುವ ನಗರಗಳು
1992 ರ ಸಂವಿಧಾನ (ಎಪ್ಪತ್ತನಾಲ್ಕನೇ ತಿದ್ದುಪಡಿ) ಕಾಯಿದೆಯು ರಾಷ್ಟ್ರೀಯ ರಾಜಧಾನಿ ಪ್ರದೇಶ (NCR), ಮುಂಬೈ, ಕೋಲ್ಕತ್ತಾ, ಬೆಂಗಳೂರು, ಪುಣೆ, ಹೈದರಾಬಾದ್ ಮತ್ತು ಚೆನ್ನೈಗಳನ್ನು ಮೆಟ್ರೋ ನಗರಗಳಾಗಿ ಗುರುತಿಸಲಾಗಿದೆ.
ಜನಸಂಖ್ಯೆ, ಸಾರಿಗೆ, ಆರ್ಥಿಕವಾಗಿ ಅಭಿವೃದ್ಧಿ ಹೊಂದಿರುವ ಅಹಮದಾಬಾದ್, ಸೂರತ್ ಮತ್ತು ಕಾನ್ಪುರದಂತಹ ನಗರಗಳನ್ನು ಸಹ ಮಹಾನಗರಗಳೆಂದು ಪರಿಗಣಿಸಬಹುದು. ಈ ಬೆಳವಣಿಗೆಯ ಹೊರತಾಗಿಯೂ, ಇಲ್ಲಿನ ಉದ್ಯೋಗಿಗಳಿಗೆ HRA ತೆರಿಗೆ ವಿನಾಯಿತಿ ಕೇವಲ 40% ರಷ್ಟಿದೆ. ಆದ್ದರಿಂದ ಈ ಕುರಿತು ಕಾನೂನು ನವೀಕರಿಸಬೇಕು ಎಂಬ ಬೇಡಿಕೆ ಮತ್ತೆ ಕೇಂದ್ರದ ಮುಂದಿಡಲಾಗಿದೆ.

ಮೆಟ್ರೋ ಪ್ರದೇಶಗಳಲ್ಲಿ ಉದ್ಯೋಗಿಗಳು ಹೆಚ್ಚಿನ ಮನೆ ಬಾಡಿಗೆ ಕಟ್ಟುತ್ತಾರೆ. ಇದರ ಮೇಲಿನ ತೆರಿಗೆ ಪಾವತಿಸುತ್ತಾರೆ. ಕೇಂದ್ರ ಬೆಂಗಳೂರು ಮೆಟ್ರೋ ಪಾಲಿಟನ್ ನಗರವನ್ನು ಇತರ ನಾಲ್ಕು ನಗರಗಳಂತೆ ಎಚ್‌ಆರ್‌ಎ ವಿನಾಯಿತಿ ನಿಮಯದಡಿ ತಂದರೆ ನಿವಾಸಿಗಳಿಗೆ ಅನುಕೂಲವಾಗಲಿದೆ. ಬೆಂಗಳೂರು ಉದ್ಯೋಗಿಗಳು ಮನೆ ಬಾಡಿಗೆ ಮೇಲಿನ ತೆರಿಗೆಯಿಂದ ವಿನಾಯಿತಿ ಪಡೆಯಲು ಅರ್ಹರಾಗುತ್ತಾರೆ.
ಆದ್ದರಿಂದ ಬೆಂಗಳೂರಿನ ಮಟ್ಟಿಗೆ ಈ ಎಚ್‌ಆರ್‌ಎ ತೆರಿಗೆ ವಿನಾಯಿತಿ ನಿಯಮಗಳನ್ನು ಮರುಪರಿಶೀಲಿಸಬೇಕು ಎಂದು ತಜ್ಞರು ತಿಳಿಸಿದ್ದಾರೆ. ಈ ಕುರಿತು ಘೋಷಣೆ ಇದೇ ಕೇಂದ್ರ ಬಜೆಟ್‌ನಲ್ಲಿ ವಿತ್ತ ಸಚಿವರು ಘೋಷಿಸಬಹುದೆಂಬ ನಿರೀಕ್ಷೆಯಲ್ಲಿ ಬೆಂಗಳೂರಿನ ಉದ್ಯೋಗಿಗಳು ಇದ್ದಾರೆ. ನಾಳೆ ಮಂಗಳವಾರವೇ ಈ ಬಗ್ಗೆ ಗೊತ್ತಾಗಲಿದೆ.
ಸಂಕ್ಷಿಪ್ತ HRA ಲೆಕ್ಕಾಚಾರ ಇಲ್ಲಿದೆ
ಮೆಟ್ರೋ ನಗರಗಳಲ್ಲಿ ವಾಸಿಸುವ ಉದ್ಯೋಗಿಗಳು ಬಾಡಿಗೆ ಮನೆಯಲ್ಲಿದ್ದರೆ ಅವರ HRA ಮೇಲೆ 50% ತರಿಗೆ ವಿನಾಯಿತಿ ಪಡೆಯುತ್ತಾರೆ. ಚೆನ್ನೈ, ದೆಹಲಿ, ಮುಂಬೈ ಮತ್ತು ಕೊಲ್ಕತ್ತಾ ನಗರದಲ್ಲಿ ಈ ನಿಯಮ ಜಾರಿ ಇದೆ. ನೌಕರರು ಮನೆ ಬಾಡಿಗೆ ದಾಖಲೆ ಸಹಿತ ತೆರಿಗೆ ಫೈಲಿಂಗ್ ವೇಳೆ ಸಲ್ಲಿಸಿ ವಿನಾಯಿತಿ ಪಡೆಯುತ್ತಾರೆ.
ಅದೇ ನಾನ್ ಮೆಟ್ರೋ ಪಾಲಿಟನ್ ಪ್ರದೇಶದ ಉದ್ಯೋಗಿಗಳು ಕೇವಲ 40% ವಿನಾಯಿತಿ ಪಡೆಯುತ್ತಿದ್ದಾರೆ. ಬೆಂಗಳೂರು ಮೆಟ್ರೋ ಸಹಿತ ಪ್ರದೇಶವಾಗಿದ್ದರಿಂದ ಇಲ್ಲಿನ ಬಾಡಿಗೆ ದರ ಏರಿಕೆ ಆಗಿದ್ದು, ನೌಕರರಿಗೆ ಅನುಕೂಲವಾಗುವಂತೆ ಬೆಂಗಳೂರಿಗೆ ಶೇಕಡಾ HRA ಮೇಲೆ 50% ತರಿಗೆ ವಿನಾಯಿತಿಗೆ ಘೋಷಿಸುವಂತೆ ಬೇಡಿಕೆ ಇಡಲಾಗಿದೆ.
ಕೇಂದ್ರ ಸರ್ಕಾರ ಉದ್ಯೋಗಿಗಳ ವಿಚಾರದಲ್ಲಿ ಹೆಚ್ಚು ಗಮನಹರಿಸಿದೆ ಎನ್ನಬಹುದು. ಇದು ಇಂದು ಘೋಷಣೆ ಆದ ಬಜೆಟ್ ಗಮನಿಸಿದರೆ ತಿಳಿಯುತ್ತದೆ. ಉದ್ಯೋಗಿಗಳಿಗೆ ಎಚ್‌ಆರ್‌ಎ ವಿನಾಯಿತಿ ನೀಡಬೇಕು ಎಂದು ಕೇಳಲಾಗಿದೆ. ಆದರೆ ಈ ಬಗ್ಗೆ ಯಾವುದೇ ಘೋಷಣೆ ಆಗಿಲ್ಲ. ಬದಲಾಗಿ ಹೊಸ ಉದ್ಯೋಗಿಗಳಿಗೆ, ಇಂಟರ್ನಶಿಪ್‌ಗೆ ಒಂದಷ್ಟು ಘೋಷಣೆ ಮಾಡಲಾಗಿದೆ.












Click it and Unblock the Notifications