ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ಯಡಿಯೂರಪ್ಪ ಏನಂದ್ರು?
Recommended Video
Lok Sabha Election 2019: ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗುವ ವಿಷಯ ಮತ್ತೆ ಚರ್ಚೆಗೆ
ಬೆಂಗಳೂರು, ಮೇ 24: ಲೋಕಸಭೆ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಕರ್ನಾಟಕದಲ್ಲಿ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗುವ ವಿಷಯ ಮತ್ತೆ ಚರ್ಚೆಗೆ ಬಂದಿದೆ. ಇದಕ್ಕೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ರಾಜ್ಯರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆಯುವುದಂತೂ ಸತ್ಯ ಮೇ 26ಕ್ಕೆ ದೆಹಲಿಗೆ ತೆರಳುವ ಕುರಿತು ನಿರ್ಧಾರ ಮಾಡಿದ್ದೆವು ಆದರೆ 29 ರಂದು ಹೋಗಲಿದ್ದೇವೆ, ಅಲ್ಲಿ ಚರ್ಚೆಯ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

ಅಲ್ಲಿಯವರೆಗೆ ಸಮ್ಮಿಶ್ರ ಸರ್ಕಾರ ಸಭೆ ನಡೆಸಿ ಯಾವ ನಿರ್ಧಾರಕ್ಕೆ ಬರುತ್ತೋ ನೋಡೋಣ, ಈಗಲೇ ಯಾವುದಕ್ಕೂ ಪ್ರತಿಕ್ರಿಯಿಸುವುದಿಲ್ಲ, ನಾವು ಕರ್ನಾಟಕದಲ್ಲಿ 22 ಸೀಟುಗಳನ್ನು ಗೆಲ್ಲುತ್ತೇವೆ ಎಂದು ಹೇಳಿದ್ದೆವು ಅದಕ್ಕಿಂತ ಹೆಚ್ಚಿನ ಸ್ಥಾನವೇ ಲಭಿಸಿದೆ ಇದಕ್ಕೆ ಬಹಳ ಸಂತಸವಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆ ಕುರಿತು ಶೀಘ್ರವೇ ಹೈಕಮಾಂಡ್ ಬಳಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.












Click it and Unblock the Notifications