• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿ.ಎಸ್. ಯಡಿಯೂರಪ್ಪ ಈಸ್ ಮೈ ಕ್ಯಾಪ್ಟನ್!

|

ಬೆಂಗಳೂರು, ಸೆ. 14: ಯಾವುದೇ ಬಾಲ್ ಹಾಕಿದರೂ, ಸ್ಪಿನ್ ಬಾಲ್, ಸ್ಪೀಡ್ ಬಾಲ್ ಎಲ್ಲವನ್ನೂ ಬೌಂಡರಿ, ಸಿಕ್ಸರ್ ಹೊಡೆಯೋ ಧಮ್ ಇರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನನ್ನ ನಾಯಕ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ವಿಧಾನಸೌಧದಲ್ಲಿ ಹೇಳಿದ್ದಾರೆ. ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಅಶೋಕ್ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ದಕ್ಷಿಣ ಭಾರತದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಅಗ್ರಗಣ್ಯ ನಾಯಕರು ಸಿಎಂ ಬಿ.ಎಸ್. ಯಡಿಯೂರಪ್ಪ ಅವರು. ಅವರೇ ಉಳಿದಿರುವ ಎರಡುವರೆ ವರ್ಷಗಳ ಕಾಲ ಮುಖ್ಯಮಂತ್ರಿ ಆಗಿರಲಿದ್ದಾರೆ ಎಂದು ನಾಯಕತ್ವ ಬದಲಾವಣೆ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಪರ ಆರ್. ಅಶೋಕ್ ಅವರು ಬ್ಯಾಟಿಂಗ್ ಮಾಡಿದ್ದಾರೆ.

ಬಿಎಸ್ವೈ ಬದಲಾವಣೆ: ಜೆಡಿಎಸ್ ಮುಖಂಡ ಸಿಡಿಸಿದ ಹೊಸ ಬಾಂಬ್

ಜಮೀರ್ ಎಲ್ಲಾ ವಿಷಯದಲ್ಲೂ ಇರ್ತಾರೆ: ಇನ್ನು ಕಾಂಗ್ರೆಸ್ ಶಾಸಕ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಡಿ.ಜೆ. ಹಳ್ಳಿ, ಕೆ.ಜಿ ಹಳ್ಳಿ ಘಟನೆಯಲ್ಲೂ ಇದ್ದರು. ರಾಮಮಂದಿರ ವಿಷಯಕ್ಕೂ ಬರುತ್ತಾರೆ. ಜಮೀರ್ ಅವರಿಗೆ ಮುಸ್ಲಿಂ ನಾಯಕರಾಗಬೇಕು ಅಂತ ತಲೆಲಿ ಬಂದುಬಿಟ್ಟಿದೆ. ದಿ. ಮಾಜಿ ಕೇಂದ್ರ ಸಚಿವ ಜಾಫರ್ ಷರೀಫ್ ಅವರ ನಂತರ ನಾನೇ ಮುಸ್ಲಿಂ ಲೀಡರ್ ಆಗಬೇಕು ಅಂತ ಎಲ್ಲಾ ಮೈ ಮೇಲೆ ಹಾಕಿಕೊಳ್ತಿದ್ದಾರೆ ಎಂದು ಡ್ರಗ್ ಮಾಫಿಯಾದಲ್ಲಿ ಜಮೀರ್ ಅಹ್ಮದ್ ಅವರ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಜೊತೆಗೆ ಕ್ಯಾಸಿನೋ ನೋಡಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ಕೊಟ್ಟಿರುವ ಅಶೋಕ್ ಅವರು, ಇಸ್ಪೀಟ್ ಎಲೆನೇ ನಾನು ನೋಡಿಲ್ಲ. ನನ್ನ ಜೀವನದಲ್ಲಿ ಸುಮ್ನೇನೂ ನೋಡಿಲ್ಲ, ಇನ್ನು ಕ್ಯಾಸಿನೋ ಏನ್ ನೋಡಲಿ? ಎಂದು ಸಚಿವ ಆರ್. ಅಶೋಕ್ ಪ್ರತಿಕ್ರಿಯಿಸಿದ್ದಾರೆ.

English summary
Chief Minister B S Yediyurappa will remain chief minister for the remaining two and a half years says revenue Minister R Ashoka, Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X