ಆಪರೇಷನ್ ಕಮಲ ನಡೆಸಲೇ ಇಲ್ಲ, ಚುನಾವಣೆ ಬಗ್ಗೆ ಚರ್ಚೆ: ಬಿಎಸ್ವೈ
Recommended Video

ಬೆಂಗಳೂರು, ಜನವರಿ 17: ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷಯಡಿಯೂರಪ್ಪನವರು ಬುಧವಾರ ಮಧ್ಯರಾತ್ರಿ 12 ಗಂಟೆ ನಂತರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.
ಅನಾರೋಗ್ಯಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ತುಮಕೂರಿನ ಸಿದ್ದಗಂಗಾ ಶ್ರೀ ಗಳನ್ನು ಭೇಟಿ ಮಾಡಲು ದೆಹಲಿಯಿಂದ ನೇರವಾಗಿ ಬಂದಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಸಿದ್ದಗಂಗಾ ಶ್ರೀಗಳ ಆರೋಗ್ಯ ಕ್ಷೀಣಿಸುತ್ತಿರುವ ಹಿನ್ನಲೆಯಲ್ಲಿ ವೆಂಟಿಲೇಟರ್ ಮೂಲಕ ಹಳೆಯ ಮಠದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಚೇತರಿಸಿಕೊಳ್ಳುವ ಭರವಸೆಯಿದೆ, ಅವರ ದರ್ಶನ ಪಡೆಯಲು ತೆರಳುತ್ತಿದ್ದೇನೆ ಎಂದರು.

ಆಪರೇಷನ್ ಕಮಲ ನಡೆಸಲಿಲ್ಲ: ನಾವು ಯಾವ ಆಪರೇಷನ್ ಮಾಡಲು ಹೋಗಿರಲಿಲ್ಲ. ಸ್ವತಃ ರಾಜ್ಯದ ಮುಖ್ಯಮಂತ್ರಿಗಳೇ ನಮ್ಮ ಒಬ್ಬ ಶಾಸಕರಿಗೆ ಮಂತ್ರಿ ಮಾಡುತ್ತೇನೆ ಎಂದು ಆಮಿಷ ಒಡ್ಡಿದ್ದರು. ಕಾಂಗ್ರೆಸ್, ಜೆಡಿಎಸ್ ಮುಖಂಡರಿಂದಲೇ ಬಿಜೆಪಿ ಶಾಸಕರಿಗೆ ಆಫರ್ ಬಂದಿತ್ತು. ಉಳಿದೆಲ್ಲವೂ ಗಾಳಿ ಸುದ್ದಿ ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
Operation ಕಮಲ ಯಶಸ್ಸಾಗಲು ಸಾಧ್ಯವಿಲ್ಲ ಅನ್ನೋದಿಕ್ಕೆ ಇಲ್ಲಿವೆ 4 ಕಾರಣಗಳು
ಆಡಳಿತ ಪಕ್ಷದ ಅತೃಪ್ತ ಶಾಸಕರನ್ನು 'ಆಪರೇಷನ್ ಕಮಲ'ದ ಮೂಲಕ ಸೆಳೆದು ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ನಾಯಕರು ಪ್ರಯತ್ನ ನಡೆಸಿದ್ದು, ಹೀಗಾಗಿಯೇ ಬಿಜೆಪಿಯ ಎಲ್ಲ ಶಾಸಕರಿಗೆ ಗುರುಗ್ರಾಮದ ಹೋಟೆಲ್ ನಲ್ಲಿ ವಾಸ್ತವ್ಯ ಕಲ್ಪಿಸಲಾಗಿದೆ ಎಂದು ಹೇಳಲಾಗಿತ್ತು.
ಆದರೆ, ಬಿಜೆಪಿ ಶಾಸಕರನ್ನು ಕಾಂಗ್ರೆಸ್ -ಜೆಡಿಎಸ್ ಮುಖಂಡರಿಂದ ರಕ್ಷಿಸುವ ಸಲುವಾಗಿ ಗುರುಗ್ರಾಮದಲ್ಲಿರಿಸಲಾಗಿತ್ತು ಎಂದು ಯಡಿಯೂರಪ್ಪ ಹೇಳಿದರು.
ಶಾಸಕರೆಲ್ಲ ಒಟ್ಟಾಗಿ ಲೋಕಸಭಾ ರಣತಂತ್ರದ ಬಗ್ಗೆ ಚರ್ಚೆ ನಡೆಸಿದೆವು, ಈ ಬಾರಿ 20 ಲೋಕಸಭಾ ಸೀಟು ಗೆಲ್ಲಬೇಕು ಎಂಬುದು ನಮ್ಮ ಗುರಿ. ನಾಳೆ ಎಲ್ಲರೂ ಬೆಂಗಳೂರಿಗೆ ಬರಲಿದ್ದಾರೆ. ಚುನಾವಣೆಗೆ ಸಿದ್ಧತೆ ಆರಂಭವಾಗಿದೆ ಎಂದರು.











Click it and Unblock the Notifications