ಬಿಎಸ್‌ವೈ 3 ತಿಂಗಳು ಅಧಿಕಾರದಲ್ಲಿದ್ರೂ ಓಕೆ, ನಮಗೆ ಬೇಡವಾದ ವಿಷಯ: ದೇವೇಗೌಡ

ಬೆಂಗಳೂರು, ಆಗಸ್ಟ್ 7: ಈಗಿನ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಮೂರು ತಿಂಗಳು ಅಧಿಕಾರದಲ್ಲಿದ್ದರೂ ಓಕೆ, ಅದು ನಮಗೆ ಬೇಡದ ವಿಷಯ ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಹೇಳಿದರು.

ಜೆಡಿಎಸ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಾಲಿ ಸಿಎಂ ಮೂರು ತಿಂಗಳು ಸರ್ಕಾರ ಮಾಡಿದ್ರೂ ನಮಗೆ ಚಿಂತೆ ಇಲ್ಲ, ಅದರ ಅವಶ್ಯಕತೆ ಇಲ್ಲ ಅದನ್ನೆಲ್ಲಾ ದೆಹಲಿಯಲ್ಲೇ ನಿರ್ಧಾರ ಮಾಡುತ್ತಾರೆ.

ಮೋದಿ, ಶಾ ಯಾವ ಟೈಮಲ್ಲಿ ಯಾವಾಗ ಏನ್ ನಿರ್ಧಾರ ಮಾಡ್ತಾರೆ ಅನ್ನೋದು ಯಾರಿಗೂ ಗೊತ್ತಿಲ್ಲ, ಅವರಿಬ್ಬರೇ ಎಲ್ಲವನ್ನೂ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು. ಹತ್ತು ಜಿಲ್ಲೆಗಳಲ್ಲಿ ಭೀಕರ ಮಳೆ ಇದೆ, ಎಲ್ಲಾ ಜಿಲ್ಲೆಗಳಿಂದ ನೀವು ಬಂದಿದ್ದೀರಿ , ಪಕ್ಷವನ್ನ ಉಳಿಸೋಕೆ ಛಲದಿಂದ ಬಂದಿದ್ದೀರಾ, ಈ ಪಕ್ಷವನ್ನ ನೀವೇ ಉಳಿಸೇ ಉಳಿಸ್ತೀರಿ ಅನ್ನೋ ಆತ್ಮವಿಶ್ವಾಸ ನನಗೆ ಇದೆ, ಚುನಾವಣೆ ಯಾವಾಗ ಬರುತ್ತೆ ಅಂತ ಯಾರಿಗೂ ಗೊತ್ತಿಲ್ಲ ಎಂದರು.

BS Yeddyurappa Has Been In Power for 3 months

ಮೈತ್ರಿ ಸರ್ಕಾರದ ಪತನವಾದ ಬೆನ್ನಲ್ಲೇ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜೆಡಿಎಸ್ ಸಮಾವೇಶ ನಡೆಯುತ್ತಿದೆ. ರಾಜ್ಯದಲ್ಲಿ ಪಕ್ಷ ಸಂಘಟನೆ ಹಿನ್ನೆಲೆ ಸಮಾವೇಶ ನಡೆಸಲಾಯಿತು. ಸಮಾವೇಶದಲ್ಲಿ ವರಿಷ್ಠ ದೇವೆಗೌಡ, ಶಾಸಕಾರಾದ ಸಿಎಸ್ ಪುಟ್ಟರಾಜು,ರೆವಣ್ಣ,ವೆಂಕಟರಾಮ್ ‌ನಾಡಗೌಡ ಭಾಗಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+