BBMP Budget: ಬ್ರ್ಯಾಂಡ್ ಬೆಂಗಳೂರಿಗೆ ಒತ್ತು ನೀಡಿದ ಬಿಬಿಎಂಪಿ: ಯಾವ ಕ್ಷೇತ್ರಕ್ಕೆ ಸಿಕ್ಕಿದ್ದೆಷ್ಟು?
ಬೆಂಗಳೂರು,ಮಾರ್ಚ್ 29: ಬಿಬಿಎಂಪಿಯ 2025-26ನೇ ಸಾಲಿನ ಬಜೆಟ್ ಅನ್ನು ವಿಶೇಷ ಆಯುಕ್ತ ಹರೀಶ್ ಕುಮಾರ್ ಅವರು ಮಂಡಿಸಿದ್ದಾರೆ. ಬಿಬಿಎಂಪಿ ಬಜೆಟ್ ನಲ್ಲಿ ಬ್ರ್ಯಾಂಡ್ ಬೆಂಗಳೂರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, 8 ಪರಿಕಲ್ಪನೆ ಆಧಾರದಲ್ಲಿ ಬಜೆಟ್ ಮಂಡಿಸಲಾಗಿದೆ. ಕಳೆದ ಐದು ವರ್ಷದಿಂದ ಚುನಾವಣೆ ನಡೆಯದ ಹಿನ್ನಲೆ ಜನಪ್ರತಿನಿಧಿಗಳಿಲ್ಲದೇ ಸತತ ಐದನೇ ಬಾರಿಗೆ ಅಧಿಕಾರಿಗಳೇ ಬಜೆಟ್ ಮಂಡಿಸಿದ್ದಾರೆ.
ಬಿಬಿಎಂಪಿ ಬಜೆಟ್ ಬರೋಬ್ಬರಿ 19 ಸಾವಿರ ಕೋಟಿ ರೂ ಗಾತ್ರದ ಬಜೆಟ್ ಇದಾಗಿದ್ದು,ಮಾರ್ಚ್ 27 ರಂದು ಬಜೆಟ್ ಮಂಡನೆಗೆ ಮುಹೂರ್ತ ಫಿಕ್ಸ್ ಆಗಿತ್ತು. ಆದರೆ ಸತತ ಮೂರು ಭಾರೀ ಬಜೆಟ್ ಮಂಡನೆ ದಿನಾಂಕ ಬದಲಾಯಿಸಿದ್ದ ಕಾರಣ ಇಂದು ಬಜೆಟ್ ಮಂಡನೆ ಮಾಡಿಲಾಗಿದೆ. ಈ ಬಜೆಟ್ ನಲ್ಲಿ ಬ್ರ್ಯಾಂಡ್ ಬೆಂಗಳೂರು, ವೈಬ್ರೆಂಟ್ ಬೆಂಗಳೂರು, ಆರೋಗ್ಯ ಬೆಂಗಳೂರು ಸೇರಿದಂತೆ ವಿವಿಧ ಯೋಜನೆಗಳಿಗೆ ಬಜೆಟ್ನಲ್ಲಿ ಅನುದಾನ ಮೀಸಲಿಡಲಾಗಿದೆ.

ಇನ್ನೂ ಬ್ರ್ಯಾಂಡ್ ಬೆಂಗಳೂರು, ಆರೋಗ್ಯ ಬೆಂಗಳೂರು ಯೋಜನೆಗೆ 413 ಕೋಟಿ ರೂ ಅನುದಾನ ಮೀಸಲಾಡಿಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 19 ಹೊಸ ಆಸ್ಪತ್ರೆಗಳ ನಿರ್ಮಾಣ, 852 ಹಾಸಿಗೆಗಳ ಸಾಮರ್ಥ್ಯವನ್ನು 1122 ಹಾಸಿಗೆಗಳಿಗೆ ಹೆಚ್ಚಳ, 26 ಹೊಸ ಕೇಂದ್ರಗಳಲ್ಲಿ ಡೆಂಟಲ್ ಆಸ್ಪತ್ರೆಗಳ ನಿರ್ಮಾಣ ಮಾಡಲಾಗುವುದು ಬೆಂಗಳೂರು ನಗರದ ಬಡವರು, ವಲಸಿಗರು, ಅಲೆಮಾರಿಗರಿಗಾಗಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಹೊಸ ಯೋಜನೆ ಜಾರಿ ತರಲಾಗುವುದು.
ಬೀದಿ ನಾಯಿಗಳ ನಿರ್ವಹಣೆಗೆ 60 ಕೋಟಿ ರೂ ಅನುದಾನ ಮೀಸಲಿಡಲಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ 75,000 ನಾಯಿಗಳಿಗೆ ಸಂತಾನಶಕ್ತಿಹರಣ ಚಿಕಿತ್ಸೆ, 1,80,0000 ನಾಯಿಗಳಿಗೆ ವ್ಯಾಕ್ಸಿನ್ ಹಾಕಲು ಯೋಜನೆಗೆ ಮುಂದಾಗಿದ್ದು, ಪಾಲಿಕೆ 6 ವಲಯದಲ್ಲಿ ಪಶು ವೈದ್ಯಕೀಯ ಚಿಕಿತ್ಸಾಲಯ ಆರಂಭ ಮಾಡಲು ಹಣ ಮಂಡಿಸಿದ್ದಾರೆ. ಬೊಮ್ಮನಹಳ್ಳಿ, ಮಹದೇವಪುರ ವಲಯದಲ್ಲಿ ಎಬಿಸಿ ಕೇಂದ್ರ ಸ್ಥಾಪನೆಗೆ 7 ಕೋಟಿ ರೂ ಅನುದಾನ ಮೀಸಲಿಡಲಾಗಿದೆ.
ಹೊಸದಾಗಿ ಕಸಾಯಿಖಾನೆ ನಿರ್ಮಾಣಕ್ಕೆ 10 ಕೋಟಿ ರೂ., ಕಸಾಯಿಖಾನೆ ನಿರ್ವಹಣೆಗೆ 2 ಕೋಟಿ ರೂ ಅನುದಾನ ಮೀಸಲಿಡಲಾಗಿದೆ. ಬ್ರಾಂಡ್ ಬೆಂಗಳೂರು ಪರಿಕಲ್ಪನೆಯ ಅಡಿಯಲ್ಲಿ 2024-25ನೇ ಸಾಲಿನಲ್ಲಿ 3 ವರ್ಷಗಳ ಅವಧಿಗೆ ಒಟ್ಟು 2828.00 ಕೋಟಿಗಳ ಬೃಹತ್ ಯೋಜನೆಗಳ ಪ್ರಸ್ತಾವನೆ ನೀಡಲಾಗಿದೆ. 2024 -25ನೇ ಸಾಲಿನಲ್ಲಿ ಈಗಾಗಲೇ ರೂ.660 ಕೋಟಿ ರೂ ವರ್ಗಾಯಿಸಲಾಗಿದೆ. 2025-26 ಸಾಲಿನಲ್ಲಿ ರೂ.700 ಕೋಟಿ ರೂ ಅನುದಾನವನ್ನು ಆಯವ್ಯಯದಲ್ಲಿ ಒದಗಿಸಲಾಗಿದ್ದು, ಸದರಿ ಮೊತ್ತವನ್ನು ಸಹ ಎಸ್ಕೋ ಖಾತೆಗೆ ವರ್ಗಾಯಿಸಲಾಗುವುದು.
ಜನರ ಜೀವನ ಮಟ್ಟ ಸುಧಾರಿಸಲು, ನಗರದ ಸಂಚಾರ ದಟ್ಟಣೆಯನ್ನು ಸುಗಮಗೊಳಿಸಲು ಹಾಗೂ ಮಾನವ ಉತ್ಪಾದಕತೆಯನ್ನು ಹೆಚ್ಚಿಸಲು ಕಳೆದ ಸಾಲಿನ ಆಯವ್ಯಯದಲ್ಲಿ ಬ್ರಾಂಡ್ ಬೆಂಗಳೂರು ಸುಗಮ ಸಂಚಾರ ಬೆಂಗಳೂರು ಅನುದಾನದಲ್ಲಿ ರೂ.880 ಕೋಟಿಗಳನ್ನು ಹಂಚಿಕೆ ಮಾಡಲಾಗಿರುತ್ತದೆ. ಬೆಂಗಳೂರಿನ ರಸ್ತೆ ಮೂಲ ಸೌಕರ್ಯಜಾಲವನ್ನು ಹೆಚ್ಚಿಸಲು ಹಲವು ಸಂಭಾವ್ಯ ಪರಿಹಾರಗಳ ಅಧ್ಯಯನ ವರದಿಯ ಆಧಾರದ ಮೇಲೆ ಈ ಕೆಳಗಿನ ಬೃಹತ್ ಮೂಲ ಸೌಕರ್ಯ ಯೋಜನೆಗಳನ್ನು ಕೈಗೊಳ್ಳಲು ಪ್ರಸ್ಥಾಪಿಸಲಾಗಿದೆ.
* ನಗರ ಸುರಂಗ ಮಾರ್ಗಗಳು (ಅಂದಾಜು ವೆಚ್ಚ ರೂ.42,000 ಕೋಟಿ)
* ಎಲಿವೇಟೆಡ್ ಕಾರಿಡಾರ್/ಗ್ರೇಡ್ ಸೆಪರೇಟರ್‌ಗಳ ನಿರ್ಮಾಣ(ಅಂದಾಜು ವೆಚ್ಚ ರೂ.13,200 ಕೋಟಿ)
* ಸಂಯುಕ್ತ ಮೆಟ್ರೋ-ರಸ್ತೆ ಮೇಲ್ಲೇತುವೆಯೋಜನೆ (ಡಬ್ಬಲ್‌ಡೆಕ್ಕರ್)ಗಳ ನಿರ್ಮಾಣ (ಅಂದಾಜು ವೆಚ್ಚ 2.9.000 ລ້३)
* ಉತ್ತಮ ಸಂಪರ್ಕಕ್ಕಾಗಿ ರಾಜಕಾಲುವೆಗಳ ಪಕ್ಕದಲ್ಲಿ ಸಂಪರ್ಕ ರಸ್ತೆಗಳ ನಿರ್ಮಾಣ ಮತ್ತು ಅಭಿವೃದ್ಧಿ (ಅಂದಾಜು ವೆಚ್ಚ ರೂ.3.000ಕೋಟಿ)
* ರಸ್ತೆಗಳ ವೈಟ್ ಟಾಪಿಂಗ್(ಅಂದಾಜು ವೆಚ್ಚ ರೂ.6.000 ಕೋಟಿ)
* ಸೈ-ಡೆಕ್ ನಿರ್ಮಾಣ(ಅಂದಾಜು ವೆಚ್ಚ ರೂ.400 ಕೋಟಿ)
2024-25ನೇ ಸಾಲಿನಲ್ಲಿ ಸುಮಾರು ರೂ.4900 ಕೋಟಿ ತೆರಿಗೆ ಸಂಗ್ರಹಿಸುವುದರೊಂದಿಗೆ ಸತತ ಎರಡನೇ ವರ್ಷವೂ ಭಾರತದಲ್ಲೇ ಅತಿ ಹೆಚ್ಚು ಆಸ್ತಿ ತೆರಿಗೆ ಸಂಗ್ರಹಿಸಿದೆ. 2025-26ನೇ ಸಾಲಿನಲ್ಲಿ ಆಸ್ತಿ ತೆರಿಗೆ ಮತ್ತು ಇತರೇ ಕಂದಾಯ ಸ್ವೀಕೃತಿ ರೂಪದಲ್ಲಿ ರೂ.5716 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಆಸ್ತಿ ತೆರಿಗೆ ಪಾವತಿಯ ಮುಖ್ಯವಾಹಿನಿಗೆ ಸೇರಲು, ಲಕ್ಷಾಂತರ ಜನರ ಭಾಗವಹಿಸುವಿಕೆಗೆ ಐತಿಹಾಸಿಕ ಅವಕಾಶ ನೀಡಿ, ಪಾಲಿಕೆ ಮತ್ತು ನಾಗರೀಕರಿಬ್ಬರಿಗೂ ಪ್ರಯೋಜನವಾಗುವಂತಹ ಒಂದು ಬಾರಿ ಪರಿಹಾರ ಯೋಜನೆಯನ್ನು (OTS) ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ. ಇದರಿಂದಾಗಿ ಸುಮಾರು 3 ಲಕ್ಷ ಆಸ್ತಿಗಳಿಂದ ರೂ.1277 ಕೋಟಿ ಬಾಕಿಯನ್ನು ವಸೂಲಿ ಮಾಡಲಾಗಿದೆ.
ಪಾಲಿಕೆಯು ತನ್ನ ಎಲ್ಲಾ 25 ಲಕ್ಷ ಕಾಗದರೂಪದ ಖಾತಾಗಳನ್ನು ಆನ್‌ಲೈನ್‌ನಲ್ಲಿ ಡಿಜಿಟಲೀಕರಣ ಗೊಳಿಸುವ ಮೂಲಕ ಸಂಪರ್ಕ ರಹಿತ, ಮುಖರಹಿತ ಇ-ಖಾತಾ ವ್ಯವಸ್ಥೆಯನ್ನು ಜಾರಿಗೆ ತರುವುದರೊಂದಿಗೆ ಮಾನ್ಯ ಉಪಮುಖ್ಯಮಂತ್ರಿಗಳು ನಾಗರೀಕರಿಗೆ ನೀಡಿದ್ದ ಭರವಸೆಯನ್ನು ಸಾಕಾರಗೊಳಿಸಿದೆ. ಇದು ಭಾರತದ ಅತಿ ದೊಡ್ಡ ಡಿಜಿಟಲ್ ಇ-ಖಾತಾ ವ್ಯವಸ್ಥೆಯಾಗಿರುತ್ತದೆ. ಎಲ್ಲಾ ಪಾಲಿಕೆ ಆಸ್ತಿಗಳಿಗೆ ಜಿ.ಪಿ.ಎಸ್. ಸ್ಥಳಾಧಾರಿತ ಐ.ಡಿ.ಯನ್ನು ನೀಡಲಾಗುತ್ತಿದ್ದು, ಇದು ಪಾರದರ್ಶಕ ಮತ್ತು ಅಧಿಕೃತ ಇ-ಖಾತಾಗಳಿಗೆ ಕಾರಣವಾಗಿದೆ. ಅಂಗೈಯಲ್ಲೇ ಆಸ್ತಿ ದಾಖಲೆಗಳ ಲಭ್ಯತೆಯಿಂದಾಗಿ ನಾಗರೀಕರ ನೆಮ್ಮದಿ ಹೆಚ್ಚಿದೆ.












Click it and Unblock the Notifications