ರಸ್ತೆ, ಶಾಲೆ ಗೋಡೆ, ಮೆಟ್ಟಿಲು ಮೇಲೆ sorry.. sorry..ಬರಹ: ಯುವಕರ ಹುಚ್ಚಾಟ!

ಬೆಂಗಳೂರು, ಮೇ.24: ಪಾಗಲ್ ಪ್ರೇಮಿಯೊಬ್ಬ ಶಾಲೆ ಗೋಡೆ ಮೇಲೆ, ರಸ್ತೆ ಮೇಲೆಲ್ಲಾ sorry.. sorry ಅಂತ ಬರೆದು ಹುಚ್ಚಾಟ ಮೆರೆದಿರುವ ಘಟನೆ ಮಾಗಡಿ ರಸ್ತೆ ಸುಂಕದಕಟ್ಟೆ ಶಾಂತಿಧಾಮ ಸ್ಕೂಲ್‌ನಲ್ಲಿ ನಡೆದಿದೆ. ತಡ ರಾತ್ರಿ ಸುಮಾರು 11 ರಿಂದ 12 ಗಂಟೆ ಸಮಯದಲ್ಲಿ ಡ್ಯೂಕ್ ಬೈಕ್ ನಲ್ಲಿ ಫುಡ್ ಡೆಲಿವರಿ ಬ್ಯಾಗ್ ನೊಂದಿಗೆ ಬಂದ ಇಬ್ಬರು ಯುವಕರು ಕೆಂಪು ಬಣ್ಣದ ಸ್ಪ್ರೇ ತಂದು ಶಾಲೆ ಗೋಡೆ ಮೇಲೆ, ಮೆಟ್ಟಿಲುಗಳ ಬರೆದಿರುವುದಲ್ಲದೆ ರಸ್ತೆ ತುಂಬೆಲ್ಲಾ sorry.. sorry ಅಂತ (ಕ್ಷಮೆಯಾಚನೆ) ಬರವಣಿಗೆ ಬರೆದಿದ್ದಾನೆ.

ಮೇಲ್ನೋಟದಲ್ಲಿ ಪಾಗಲ್ ಪ್ರೇಮಿಯೊಬ್ಬ ಈ ಹುಚ್ಚಾಟ ಮರೆದಿರುವುದು ತಿಳಿದುಬಂದಿದ್ದು, ಘಟನಾ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಶಾಲೆ ಗೇಟ್ ಮೇಲೆ, ಗೋಡೆಗಳ ಮೇಲೆಲ್ಲಾ sorry.. sorry ಅಂತ ಬರೆದಿದ್ದಾನೆ. ಯಾರೂ ಏನು..? ಎಂಬುದು ನಮಗೆ ತಿಳಿದಿಲ್ಲ. ಈ ಬಗ್ಗೆ ಪೊಲೀಸರಿಗೆ ಎಲ್ಲಾ ರೀತಿಯಲ್ಲಿ ಮಾಹಿತಿ ನೀಡಿದ್ದೇವೆ. ಪೊಲೀಸರು ಆತನ ಹುಡುಕಾಟದಲ್ಲಿ ಇದ್ದಾರೆ ಎಂದು ಶಾಂತಿಧಾಮ ಶಾಲೆ ಪ್ರಾಂಶುಪಾಲರು ತಿಳಿಸಿದ್ದಾರು.

Bengaluru : Boys Writing Sorry Sorry on the Road and Wall of the Shantidhama College

ಬೆಳಿಗ್ಗೆ ಎದ್ದು ಶಾಲೆಗೆ ಬಂದ ಮಕ್ಕಳಿಗೆ, ಏರಿಯಾ ಜನರಿಗೆ ಆಶ್ಚರ್ಯ..!

ಎಂದಿನಂತೆ ಶಾಲೆಗೆ ಬಂದ ಮಕ್ಕಳಿಗೆ ತಮ್ಮ ಶಾಲೆ ಗೋಡೆ ಮೇಲೆ, ಮಟೆಟ್ಟಿಲುಗಳ ಮೇಲೆ sorry.. sorry ಎಂಬ ಬರವಣಿಗೆ ನೋಡಿ ಗಾಬರಿಗೊಂಡಿದ್ದಾರೆ.

Bengaluru : Boys Writing Sorry Sorry on the Road and Wall of the Shantidhama College

ಇನ್ನೂ ಬೆಳ್ಳಂ ಬೆಳಗ್ಗೆ ಏರಿಯಾ ಬೀದಿಯಲ್ಲಿ ರಸ್ತೆ ನೋಡಿದ ಜನ ಇದೇನಿದು ರಂಗೋಲಿ ಹಾಕಿದ್ದಾರೆ ಅಂತ ಆಶ್ಚರ್ಯಪಟ್ಟಿದ್ದಾರೆ. ಆದರೆ ಸರಿಯಾಗಿ ನೋಡಿದಾಗ sorry.. sorry ಬರವಣಿಗೆ ನೋಡಿ ಶಾಂತಿಧಾಮ ಶಾಲೆ ರಸ್ತೆಯ ಜನರು ದಿಗ್ಬ್ರಮೆಗೊಂಡಿದ್ದಾರೆ. ಸದ್ಯ ಪಾಗಲ್ ಪ್ರೇಮಿಯ ಹುಚ್ಚಾಟ ಸಿಸಿಟಿಯಲ್ಲಿ ದೃಶ್ಯ ಸೆರೆಯಾಗಿದ್ದು, ಬೈಕ್ ನಲ್ಲಿ ಬಂದ ಇಬ್ಬರು ಯುವಕರ ಹಿಂದೆ ಕಾಮಾಕ್ಷಿಪಾಳ್ಯ ಪೊಲೀಸರು ಬಿದ್ದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+